Dhaakad box office collection: ಗಲ್ಲಾಪೆಟ್ಟಿಗೆಯಿಂದ ಗೇಟ್​ಪಾಸ್​ ಪಡೆದ ಧಾಕಡ್​: 8ನೇ ದಿನದಂದು ಕೇವಲ 20 ಟಿಕೆಟ್​ ಮಾರಾಟ

Dhaakad box office collection:ಬಾಲಿವುಡ್​ ನಟಿ ಕಂಗನಾ ರಣಾವತ್​ ಅಭಿನಯದ ಆ್ಯಕ್ಷನ್​ ಸಿನಿಮಾ ಧಾಕಡ್​​ ಭಾನುವಾರದ ವೇಳೆಗೆ ದೇಶಾದ್ಯಂತ ಕೇವಲ 4420 ರೂಪಾಯಿಗಳನ್ನು ಸಂಗ್ರಹಿಸುವ ಹಾಗೂ ಕೇವಲ 20 ಟಿಕೆಟ್​ಗಳನ್ನು ಮಾರಾಟ ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದೆ. ಬಾಲಿವುಡ್​ ಹಂಗಾಮಾ ನೀಡಿರುವ ಮಾಹಿತಿಯ ಪ್ರಕಾರ ಧಾಕಡ್​ ಸಿನಿಮಾ ಬಾಕ್ಸಾಫೀಸಿನಲ್ಲಿ ಸಂಪೂರ್ಣ ನೆಲಕಚ್ಚಿದ್ದು ಈವರೆಗೆ ಕೇವಲ 3 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಮಾತ್ರ ಶಕ್ತವಾಗಿದೆ ಎಂದು ತಿಳಿದುಬಂದಿದೆ.


ಧಾಕಡ್​ ಸಿನಿಮಾವನ್ನು ನಿರ್ಮಾಣ ಮಾಡಲು ಚಿತ್ರತಂಡ 80 ರಿಂದ 90 ಕೋಟಿ ರೂಪಾಯಿಗಳವರೆಗೆ ಖರ್ಚು ಮಾಡಿದೆ. ಇದು ಮಾತ್ರವಲ್ಲದೇ ಸಿನಿಮಾ ನಿರ್ಮಾಪಕರು ರಿಲೀಸ್​ಗೂ ಮುನ್ನ ಒಪ್ಪಂದಗಳನ್ನು ಭೇದಿಸದ ಕಾರಣ ಸ್ಟ್ರೀಮಿಂಗ್​ ವಿತರಣೆಯನ್ನು ಪಡೆದುಕೊಳ್ಳಲು ಹೆಣಗಾಡುತ್ತಿದ್ದಾರೆ.


ರಜನೀಶ್ ಘಾಯ್ ನಿರ್ದೇಶಿಸಿದ, ಧಾಕಡ್‌ನಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮತ್ತು ಶಾಶ್ವತ ಚಟರ್ಜಿ ಸಹ ನಟಿಸಿದ್ದಾರೆ. ಧಾಕಡ್​ ಸಿನಿಮಾಗೆ ಚಿತ್ರ ವಿಮರ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ ಸಿನಿಮಾ ವೀಕ್ಷಕರು ಮಾತ್ರ ಧಾಕಡ್​ಗೆ ಸಿನಿಮಾ ಥಿಯೇಟರ್​ಗಳಿಂದ ಗೇಟ್​ಪಾಸ್​ ನೀಡಿದ್ದಾರೆ.


ಧಾಕಡ್​ ಸಿನಿಮಾದ ಜೊತೆಯಲ್ಲಿ ತೆರೆಕಂಡ ಬಾಲಿವುಡ್​ ಮತ್ತೊಂದು ಹಾರರ್​ – ಕಾಮಿಡಿ ಸಿನಿಮಾ ಭೂಲ್​ ಭುಲೈಯ್ಯಾ 2 ದೊಡ್ಡ ಮಟ್ಟಿಗೆ ಸೌಂಡ್​ ಮಾಡ್ತಿದೆ. ಈ ಸಿನಿಮಾ 100 ಕೋಟಿ ರೂಪಾಯಿಗಳನ್ನು ಕಲೆಕ್ಷನ್​ ಮಾಡುವುದರಲ್ಲಿದೆ. 2007ರಲ್ಲಿ ತೆರೆ ಕಂಡ ಭೂಲ್​ ಭುಲೈಯ್ಯಾ ಸಿನಿಮಾದ ಮುಂದುವರಿದ ಭಾಗವಾಗಿರುವ ಈ ಫಿಲಂಗೆ ಅನೀಸ್​ ಬಾಜ್ಮೀ ನಿರ್ದೇಶನ ಮಾಡಿದ್ದು ಕಾರ್ತಿಕ್​ ಆರ್ಯನ್​, ಟಬು ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನು ಓದಿ : Aryan Khan : ಪದವಿ ಓದುವಾಗಲೇ ಗಾಂಜಾ ಸೇವಿಸುತ್ತಿದ್ದೇ : ಆರ್ಯನ್ ಖಾನ್ ತಪ್ಪೊಪ್ಪಿಗೆ

ಇದನ್ನೂ ಓದಿ : BCCI : ಐಪಿಎಲ್ 2022ರ ಫೈನಲ್‌ಗೆ ಮುನ್ನ ಮಹತ್ವದ ಘೋಷಣೆ ಮಾಡಿದ ಬಿಸಿಸಿಐ : ಆಟಗಾರರು ಪುಲ್‌ ಖಷ್

Dhaakad box office collection: Kangana Ranaut’s film sells 20 tickets and collects Rs 4420 on day 8

Comments are closed.