BS Yeddyurappa : ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ: ರಾಜಾಹುಲಿ ಮನವೊಲಿಕೆಗೆ ಹೈಕಮಾಂಡ್ ಹೊಸ ತಂತ್ರ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಯೂ ಆಂತರಿಕ ಕಚ್ಚಾಟಗಳಿಂದಲೇ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಬಿ.ಎಸ್.ಯಡಿಯೂರಪ್ಪ(BS Yeddyurappa) ಅಭಿಮಾನಿಗಳಿಗೆ ಸಿಹಿಸುದ್ದಿ ಯೊಂದು ಸಿಕ್ಕಿದೆ. ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಬಿ.ಎಸ್.ಯಡಿಯೂರಪ್ಪವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಎಚ್ಚೆತ್ತುಕೊಂಡ ಹೈಕಮಾಂಡ್ ಕೇಂದ್ರದ ಸಂಸದೀಯ ಮಂಡಳಿಯಲ್ಲಿ(BJP’s parliamentary board BS Yeddyurappa) ಬಿ.ಎಸ್. ಯಡಿಯೂರಪ್ಪ ಗೆ ಸ್ಥಾನ ನೀಡೋ ಮೂಲಕ ರಾಜ್ಯದ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದೆ.

ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲೇ 2023 ರ ವಿಧಾನಸಭಾ ಚುನಾವಣೆ ಎದುರಿಸಲಾಗುವುದು ಎಂದು ಬಿಜೆಪಿ ಹೇಳುತ್ತಲೇ ಬಂದಿದ್ದರೂ ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಬಿಎಸ್ವೈ ಗೆ ರಾಜ್ಯ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಇತ್ತು. ಅದರಲ್ಲೂ ಸಚಿವ ಸಂಪುಟ ವಿಸ್ತರಣೆಯಾಗದೇ ಇರೋದು ಸೇರಿದಂತೆ ಹಲವು ಕಾರಣಕ್ಕೆ ಬಿಎಸ್ವೈ ಆಪ್ತ ಶಾಸಕರು ಮುನಿಸಿಕೊಂಡಿದ್ದರು. ಈಗ ಎಲ್ಲ ಅಸಮಧಾನಕ್ಕೆ ಉತ್ತರವಾಗಿ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದೆ. ಈ ವಿಚಾರವನ್ನು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಚಿತ ಪಡಿಸಿದ್ದು ಮಲ್ಲೇಶ್ವರಃ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕಟೀಲ್, ಕೇಂದ್ರದ ಸಂಸದೀಯ ಮಂಡಳಿ ಪುನರ್ ರಚನೆ ಆಗಿದೆ.ಕರ್ನಾಟಕದಿಂದ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ಜಗತ್ ಪ್ರಕಾಶ್ ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ಕೇಂದ್ರದಲ್ಲಿ ನಮ್ಮ ಪರವಾಗಿ ಧ್ವನಿ ಎತ್ತಲು, ನಮ್ಮ ಪರ ನಿರ್ಣಯ ತೆಗೆದುಕೊಳ್ಳಲು ಇದರಿಂದ ಅನುಕೂಲವಾಗಿದೆ ಎಂದಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಬಿಎಸ್ವೈ ಜೊತೆ ಮಾತನಾಡಿದ್ದು, ಇದು ನಿಮಗೆ ಸಿಕ್ಕಿರುವ ದೊಡ್ಡ ಗೌರವ. ಇದು ಕರ್ನಾಟಕ ಕ್ಕೆ ದೊಡ್ಡ ಶಕ್ತಿ I am happy. ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

Nitin Gadkari out of BJP's parliamentary board BS Yeddyurappa In High Command's new strategy

ಬಿಜೆಪಿಯ ಅತಿದೊಡ್ಡ ಮತಬ್ಯಾಂಕ್ ಅಂದ್ರೇ ಅದು ಲಿಂಗಾಯತ್ ಮತಗಳು. ಹೀಗಾಗಿ ಚುನಾವಣೆ ಹೊತ್ತಿನಲ್ಲಿ ಬಿಎಸ್ವೈ ಸ್ಥಾನ ನೀಡದೇ ಇರೋದು ಈ ಲಿಂಗಾಯತ್ ಮತಗಳ ವಿಭಜನೆಗೆ ಕಾರಣವಾಗಬಹುದು ಎಂಬ ಆತಂಕಕ್ಕೆ ಬಿಜೆಪಿ ಹೈಕಮಾಂಡ್ ಬಿಎಸ್ವ ಹಾಗೂ ಬೆಂಬಲಿಗರ ಮನವೊಲಿಸಲು ಈ ಸ್ಥಾನ ನೀಡಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಚುನಾವಣೆ ಗಿಮಿಕ್ ಜೋರಾಗಿ ನಡೆದಿದ್ದು ಅಧಿಕಾರಕ್ಕೇರುವ ಕನಸಿಗೆ ಈ ಲೆಕ್ಕಾಚಾರಗಳು ವರ್ಕೌಟ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : Next Chief Minister Murugesh Nirani : ಮುಂದಿನ ಮುಖ್ಯಮಂತ್ರಿ ಮುರುಗೇಶ್ ನಿರಾಣಿ: ಏನಿದು ವೈರಲ್ ಪೋಸ್ಟರ್ ನ ಅಸಲಿಯತ್ತು?

ಇದನ್ನೂ ಓದಿ : New Ordered for public Ganeshotsava : ಸಾರ್ವಜನಿಕ ಗಣೇಶೋತ್ಸವಕ್ಕೆ ನೊರೆಂಟು ವಿಘ್ನ: ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಖಡಕ್ ಆದೇಶ

Nitin Gadkari out of BJP’s parliamentary board BS Yeddyurappa In High Command’s new strategy

Comments are closed.