New Ordered for public Ganeshotsava : ಸಾರ್ವಜನಿಕ ಗಣೇಶೋತ್ಸವಕ್ಕೆ ನೊರೆಂಟು ವಿಘ್ನ: ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಖಡಕ್ ಆದೇಶ

ಬೆಂಗಳೂರು : (New Ordered for public Ganeshotsava) ಪ್ರತಿ ವರ್ಷ ಗಣೇಶ ಚತುರ್ಥಿ ವೇಳೆ ಅದ್ದೂರಿ ಗಣೇಶೋತ್ಸವ ನಡೆಯೋದು ಕಾಮನ್. ಆದರೆ ಪ್ರತಿವರ್ಷವೂ ಬಿಬಿಎಂಪಿ,ಸರ್ಕಾರ , ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣೇಶೋತ್ಸವ ಸಮಿತಿ ನಡುವೆ ಜಟಾಪಟಿ ತಪ್ಪಿದ್ದಲ್ಲ. ಈ ಭಾರಿಯೂ ಇದೇ ಫೈಟಿಂಗ್ ಮುಂದುವರಿದಿದ್ದು, ಈ ಭಾರಿ ಪಿಓಪಿ ಗಣೇಶ ನಿಯಮದ ಜೊತೆಗೆ ಗಣೇಶನ ಎತ್ತರಕ್ಕೂ ನಿಯಮ ವಿಧಿಸಲಾಗಿದ್ದು ಆಕ್ರೋಶ ವ್ಯಕ್ತವಾಗುತ್ತಿದೆ.

ಗಣೇಶೋತ್ಸವದ ವೇಳೆ ಸಾರ್ವಜನಿಕ ಗಣೇಶ ಸ್ಥಾಪನೆಗೆ ನೊರೆಂಟು ನಿಯಮಗಳನ್ನು ವಿಧಿಸೋದು, ಅದಕ್ಕೆ ಹಿಂದೂಪರ ಸಂಘಟನೆಗಳು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸೋದು ಅದಕ್ಕೆ ಸರ್ಕಾರಗಳು ಮಣಿದು ನಿಯಮ ಹಿಂಪಡೆಯೋದು ಇದೆಲ್ಲವೂ ಕಾಮನ್ ಬೆಳವಣಿಗೆ. ಆದರೆ ಪ್ರತೀ ಭಾರಿಯೂ ಗಣೇಶೋತ್ಸವಕ್ಕೆ ನೊರೆಂಟು ವಿಘ್ನಗಳನ್ನು ತರಲು ಸರ್ಕಾರ ಸರ್ಕಸ್ ನಡೆಸೋದಂತು ನಿಜ. ಈಗಾಗಲೇ‌ ಬೆಂಗಳೂರು ನಗರದಲ್ಲಿ ಪಿಓಪಿ ಗಣೇಶ ಮೂರ್ತಿ ಸ್ಥಾಪಿಸುವಂತಿಲ್ಲ ಎಂದು ಬಿಬಿಎಂಪಿ ಹಾಗೂ ಸರ್ಕಾರ ನಿಯಮ ಜಾರಿಗೊಳಿಸಿದೆ.

ಈ ನಿಯಮಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ ಈಗ ಗಣೇಶ ಮೂರ್ತಿಯ ಎತ್ತರ ಹಾಗೂ ಅಗಲಕ್ಕೂ ಬಿಬಿಎಂಪಿ ಹಾಗೂ ಸರ್ಕಾರ ನಿಯಮ ರೂಪಿಸಲು ಮುಂದಾಗಿದೆ. ಈಗಾಗಲೇ ಈ ಬಗ್ಗೆ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಡಾವಳಿ ಪ್ರಕಟಿಸಿದ್ದು ಇದರಲ್ಲಿ 5 ಅಡಿ ಮೂರ್ತಿ ಎಂಬ ನಿಯಮವನ್ನು ರೂಪಿಸಲಾಗಿದೆ. ಹಿಂದಿನ ವರ್ಷವೂ ಸರ್ಕಾರ ಸಾರ್ವಜನಿಕವಾಗಿ ಕೇವಲ 2 ರಿಂದ 4 ಅಡಿ ಗಣಪತಿ ಮೂರ್ತಿಯನ್ನು ಮಾತ್ರ ಸ್ಥಾಪಿಸಬೇಕೆಂದು ಸೂಚಿಸಿತ್ತು. ಆದರೆ ಈ ನಿರ್ಧಾರಕ್ಕೆ ತೀವ್ರ ವಿರೊಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಯಮ ಹಿಂಪಡೆದಿತ್ತು. ಈಗ ಮತ್ತೊಮ್ಮೆ 5 ಅಡಿ ಎಂಬ ನಿಯಮ ರೂಪಿಸಲಾಗಿದೆ.

ಇನ್ನೂ ವಾಯು ಮಾಲಿನ್ಯ ಮಂಡಳಿಯ ವಿರುದ್ಧ ಗಣೇಶ ಉತ್ಸವ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿಯಮದ ವಿರುದ್ಧ ‌ಬೆಂಗಳೂರು ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ರಾಜು ಅಸಮಧಾನ ವ್ಯಕ್ತಪಡಿಸಿದ್ದಾರೆ. ಎಷ್ಟು ಅಡಿ ಗಣೇಶನ ಮೂರ್ತಿ ಇಡಬೇಕು ಎಂದು ಇವರ್ಯಾಕೆ ನಿರ್ಧಾರ ಮಾಡಬೇಕು ? ನಮಗೆ ಇಷ್ಟ ಬಂದಷ್ಟು ಅಡಿ ಎತ್ತರದ ಗಣೇಶನನ್ನು ಕೂರಿಸುತ್ತೇವೆ. ಯಾಕೆ ಪದೇ ಪದೇ ಈ ರೀತಿ ರೂಲ್ಸ್‌ಗಳನ್ನು ಮಾಡುತ್ತಾರೆ ? ಒಂದು ವೇಳೆ ರೂಲ್ಸ್ ಹಿಂಪಡೆಯದೇ ಹೋದ್ರೆ ಈ ಬಾರಿ ವಿಧಾನಸೌಧದ ಎದುರು ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಗಣೇಶೋತ್ಸವಕ್ಕೆ ಮುನ್ನವೇ ರಾಜ್ಯದಲ್ಲಿ ನಿಯಮಗಳ ವಿರುದ್ಧ ಅಸಮಧಾನ ಭುಗಿಲೆದ್ದಿದೆ.

ಇದನ್ನೂ ಓದಿ : Next Chief Minister Murugesh Nirani : ಮುಂದಿನ ಮುಖ್ಯಮಂತ್ರಿ ಮುರುಗೇಶ್ ನಿರಾಣಿ: ಏನಿದು ವೈರಲ್ ಪೋಸ್ಟರ್ ನ ಅಸಲಿಯತ್ತು?

ಇದನ್ನೂ ಓದಿ : Krishna Janmashtami : ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ, ಮಹೂರ್ತ, ಇತಿಹಾಸ ಮತ್ತು ಮಹತ್ವ

Air Pollution Control Board New Ordered for public Ganeshotsava

Comments are closed.