ಮಂಗಳವಾರ, ಮೇ 6, 2025
HomekarnatakaDalit cm in Karnataka : ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಲ್ಲಾ : ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ...

Dalit cm in Karnataka : ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಲ್ಲಾ : ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮುಂದಿನ ಸಿಎಂ

- Advertisement -

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇದೆ. ಈಗಾಗಲೇ ಎಲೆಕ್ಷನ್ ಗೆ ಸಜ್ಜಾಗುತ್ತಿರೋ ಪಕ್ಷಗಳು ರಾಜಕೀಯ ಲೆಕ್ಕಾಚಾರ ದಲ್ಲಿ ಬ್ಯುಸಿಯಾಗಿವೆ. ಈ ಮಧ್ಯೆ ಎರಡೂ ರಾಷ್ಟ್ರೀಯ ಪಕ್ಷಗಳಲ್ಲೂ ಸಿಎಂ ಸ್ಥಾನಕ್ಕೆ ಪೈಪೋಟಿ ಇದೆ. ಆದರೆ ಕಾಂಗ್ರೆಸ್ ನಲ್ಲಿ ಮಾತ್ರ ಸಿಎಂ ಸ್ಥಾನದ ಕಿತ್ತಾಟ ಬಹುತೇಕ ಅಂತ್ಯ ಗೊಂಡಂತಿದ್ದು ಈ ಭಾರಿ ಕೈಪಡೆ ಮತ್ತೆ ದಲಿತ ಸಿಎಂ (Dalit cm in Karnataka) ಟ್ರಂಪ್ ಕಾರ್ಡ್ ಜೊತೆ ಮುನ್ನಲೆಗೆ ಬಂದಿದೆ.

ರಾಜ್ಯದಲ್ಲಿ ಹಲವು ವರ್ಷಗಳಿಂದ ಕೇಳಿ ಬರ್ತಿರೋ ಮಾತು ದಲಿತ ಸಿಎಂ ಆಗಬೇಕು ಅನ್ನೋದು.‌ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರ ಸಾಕಷ್ಟು ಚರ್ಚೆಯಲ್ಲೂ ಇತ್ತು. ಆದರೆ ಇದಕ್ಕೆ ಬಲಬಂದಿರಲಿಲ್ಲ. ಹಿಂದಿನ ಚುನಾವಣೆಯಲ್ಲಿ ದಲಿತ ಸಿಎಂ ಅಧಿಕಾರಕ್ಕೆ ಬರ್ತಾರೆ ಅನ್ನೋದೇ ಮುಖ್ಯ ಸಂಗತಿಯಾಗಿತ್ತಾದರೂ ಅದೇ ಕಾರಣಕ್ಕೆ ಕಾಂಗ್ರೆಸ್ ನ ಪ್ರಮುಖ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಲಾಯಿತು ಅನ್ನೋ ಮಾತು ಸುಳ್ಳಲ್ಲ.

ಆದರೆ ಈಗ ಕಾಂಗ್ರೆಸ್ ಈ ಎಲ್ಲ ಹಳೆಯ ವಿಚಾರಗಳಿಂದ ಪಾಠ ಕಲಿತಿದ್ದು ವಿಶೇಷವಾಗಿ 2023 ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಕ್ಕೇರಲು ಏನೆಲ್ಲ ಬೇಕು ಎನ್ನುವುದಕ್ಕೆ ಹೋಂ ವರ್ಕ್ ಆರಂಭಿಸಿದೆ. ಸದ್ಯ ಹಲವು ರಾಜ್ಯಗಳಲ್ಲಿ ತನ್ನ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಕೂಡ ಕರ್ನಾಟಕಕ್ಕೆ ವಿಶೇಷ ಪ್ಲ್ಯಾನ್ ಮಾಡಿದೆಯಂತೆ. ಮೊನ್ನೆ ರಾಜಸ್ಥಾನದಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, 2023 ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೇ ಮಲ್ಲಿಕಾರ್ಜುನ್ ಖರ್ಗೆ ಸಿಎಂ ಸ್ಥಾನಕ್ಕೇರೋದು ಬಹುತೇಕ ಖಚಿತ ಎನ್ನಲಾಗ್ತಿದೆ.

ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರೋ ಬಿಜೆಪಿ ದಲಿತರಿಗೆ ಉನ್ನತ ಸ್ಥಾನಮಾನಗಳನ್ನು ನೀಡೋದಿಕ್ಕೂ ಹಿಂದೆ ಮುಂದೇ ನೋಡ್ತಿದೆ. ಇಂಥ ಹೊತ್ತಿನಲ್ಲಿ ಕಾಂಗ್ರೆಸ್ ದಲಿತ ಸಿಎಂ ಅನ್ನೋ ಸಂಗತಿಯನ್ನು ಪ್ರಮುಖವಾಗಿಟ್ಟುಕೊಂಡು ಹೊರಟ್ರೇ ಜನರು ಕಾಂಗ್ರೆಸ್ ನತ್ತ ಮುಖಮಾಡಬಹುದು. ಪ್ರಮುಖವಾಗಿ ಹಿಂದುಳಿದ ವರ್ಗದವರನ್ನು ಸೆಳೆಯಬಹುದು ಎಂಬುದು ಕಾಂಗ್ರೆಸ್ ನ ಲೆಕ್ಕಾಚಾರ. ಇದೇ ಕಾರಣಕ್ಕೆ ಡಿಕೆಶಿ ಕೂಡ ಸಂಧಾನ ತಂತ್ರಕ್ಕೆ ತಲೆಬಾಗಿಸಿದ್ದು ತಾವು ಸಿಎಂ ಸ್ಥಾನಕ್ಕೆ ಏರೋ ಕನಸನ್ನು ಕೈಬಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರೋ ಕಾರ್ಯಕ್ಕೆ ಸಿದ್ಧವಾಗುತ್ತಿದ್ದಾರಂತೆ.

ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮಲ್ಲಿಕಾರ್ಜುನ್ ಖರ್ಗೆಗೆ ಸಿಎಂ ಆಗಲು ನಿರಾಕರಿಸಿದ್ರೇ ಆಗ ಅನಿವಾರ್ಯವಾಗಿ ಸಿಎಂ ಸ್ಥಾನ ಸಿದ್ಧರಾಮಯ್ಯನವರಿಗೆ ಒಲಿಯ ಬಹುದಷ್ಟೇ. ಅದಿಲ್ಲವಾದರೇ 2023 ರ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ದಲಿತರಿಗೆ ಸಿಎಂ ಪಟ್ಟ ಬಿಟ್ಟುಕೊಡೋದು ಬಹುತೇಕ ಖಚಿತವಾಗಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : Congress secret deal : ಪಕ್ಷಕ್ಕಾಗಿ ಮಹಾತ್ಯಾಗ 2023 ರಲ್ಲೂ ಸಿಎಂ ಆಗಲ್ವಾ ಡಿ.ಕೆ.ಶಿವಕುಮಾರ್‌ : ಏನಿದು ಕಾಂಗ್ರೆಸ್‌ ರಹಸ್ಯ ಒಪ್ಪಂದ

ಇದನ್ನೂ ಓದಿ : Rajya Sabha elections : ರಾಜಕೀಯ ಗುರು ದೇವೇಗೌಡರಿಗೆ ತಿರುಮಂತ್ರ ಹಾಕಿದ ಸಿದ್ಧರಾಮಯ್ಯ : ಜೆಡಿಎಸ್‌ನ ಕುಪೇಂದ್ರ ರೆಡ್ಡಿಗಿಲ್ಲ ಬೆಂಬಲ

No Siddaramaiah No DK Sivakumar Surprising name for Dalit cm in Karnataka

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular