Email Password : ನಿಮ್ಮ ಇಮೇಲ್‌ನ ಪಾಸ್‌ವರ್ಡ್‌ ಬದಲಿಸುವುದು ಹೇಗೆ ಗೊತ್ತೇ?

Email ಇದು ಜನರ ನಡುವೆ ಸಂದೇಶಗಳನ್ನು ವಿನಿಮಯ ಮಾಡುವ ಎಲೆಕ್ಟ್ರಾನಿಕ್‌ ಸಾಧನ. ಸಾಮಾನ್ಯವಾಗಿ Email ಅನ್ನು ವೃತ್ತಿಪರ ಕೆಲಸಕ್ಕಾಗಿ ಪರಿಗಣಿಸಲಾಗುತ್ತದೆ. ಆದರೆ ಇದನ್ನು ವೈಯಕ್ತಿಕ ಉದ್ದೇಶಗಳಿಗಾಗಿಯೂ ಬಳಸಬಹುದು. ಇಮೇಲ್‌ಗಳು, ಚಿತ್ರಗಳು, ದಾಖಲೆಗಳನ್ನು ಕಳುಹಿಸಲು ಮತ್ತು ಇಮೇಲ್‌ಗಳನ್ನು ಸ್ವೀಕರಿಸಲು ಇಮೇಲ್‌ ಅನ್ನು ಬಳಸಲಾಗುತ್ತದೆ. ಆನ್‌ಲೈನ್‌ನಲ್ಲಿರುವಾಗ ಇದನ್ನು ಉಪಯೋಗಿಸುವುದು ಸುಲಭ.

ಆದರೆ ನಾವು ಬಹಳ ಸಂದರ್ಭದಲ್ಲಿ ಲಾಗ್‌ಇನ್‌ ಪಾಸ್‌ವರ್ಡ್‌ (Email Password) ಅನ್ನು ಮರೆಯುತ್ತವೆ ಮತ್ತು ಬಹಳ ಚಿಂತೆಗೀಡಾಗುತ್ತೇವೆ. ಅದಕ್ಕಾಗಿ ನಾವು ಇಲ್ಲಿ ಪಾಸ್‌ವರ್ಡ್‌ ರಿಸೆಟ್‌ ಮಾಡುವ ಅಥವಾ ಬದಲಿಸುವ ಸರಳ ವಿಧಾನ ಹೇಳಿದ್ದೇವೆ.

ಇಮೇಲ್‌ ನಲ್ಲಿ ನಿಮ್ಮ ಭದ್ರತೆಗಾಗಿ ನಿಮ್ಮ ಪಾಸ್‌ವರ್ಡ್‌ ನೆನಪಿಲ್ಲದಿದ್ದರೂ ಸಹ ನೀವು ಬದಲಾಯಿಸಬಹುದು ಅಥವಾ ರೆಸೆಟ್‌ ಮಾಡಬಹುದು.

ಪಾಸ್‌ವರ್ಡ್‌ ಬದಲಿಸಲು ಹೀಗೆ ಮಾಡು?

  • ಮೊದಲಿಗೆ ನಿಮ್ಮ ಗೂಗಲ್‌ ಅಕೌಂಟ್‌ ಅನ್ನು ಸೈನ್‌ಇನ್‌ ಆಗುವುದುದರ ಮೂಲಕ ತೆರೆಯಿರಿ.
  • ಅದರಲ್ಲಿಯ ಸೆಕ್ಯುರಿಟಿ ಸೆಕ್ಷೆನ್‌ ಆಯ್ದುಕೊಳ್ಳಿ.
  • ಅಲ್ಲಿ ನಿಮ್ಮ ಪಾಸ್‌ವರ್ಡ್‌ ಆಯ್ದುಕೊಳ್ಳಿ.
  • ಈಗ ನಿಮ್ಮ ಹೊಸ ಸ್ಟ್ರಾಂಗ್‌ ಪಾಸ್‌ವರ್ಡ್‌ ಅನ್ನು ನಮೂದಿಸಿ ನಂತರ ಚೇಂಜ್‌ ಪಾಸ್‌ವರ್ಡ್‌ ಕ್ಲಿಕ್ಕಿಸಿ.
  • ಆ ಪ್ರಕ್ರಿಯೆ ಪೂರ್ಣಗೊಳಿಸಿದಾಗ ನಿಮ್ಮ ಪಾಸ್‌ವರ್ಡ್‌ ಬದಲಾವಣೆಯನ್ನು ದೃಢೀಕರಿಸಲಾಗುತ್ತದೆ. ದೃಢೀಕರಿಸಿದ ಇಮೇಲ್‌ ಅನ್ನು ನಿಮಗೆ ಕಳುಹಿಸಲಾಗುತ್ತದೆ.

ನಿಮ್ಮಇಮೇಲ್‌ನ ಪಾಸ್‌ವರ್ಡ್‌ ಮರುಸ್ಥಾಪಿಸಲು(ರಿಸೆಟ್‌) ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  • ಆರಂಭದಲ್ಲಿ ಇದು ನಿಮ್ಮ ಖಾತೆಯೇ ಎಂದು ಪರಿಶೀಲಿಸಲು ನಿಮಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ನಂತರ ದೃಢೀಕರಣ ಇಮೆಲ್‌ ಕಳುಹಿಸಲಾಗುತ್ತದೆ.
  • ನೀವು ಈ ಹಿಂದೆ ಬಳಸದ ಮತ್ತು ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಪಾಸ್‌ವರ್ಡ್‌ ಅನ್ನು ಆಯ್ಕೆ ಮಾಡಿ.
  • ನೀವು ಮರುಸ್ಥಾಪಿಸಿದ ನಂತರ ಅಥವಾ ನಿಮ್ಮ ಪಾಸ್‌ವರ್ಡ್‌ ಅನ್ನು ಬದಲಾಯಿಸಿದ ನಂತರ ನೀವು ಸೈನ್‌ ಇನ್ ಮಾಡಿದಾಗ ಪರಿಶೀಲಿಸಲು ಬಳಸಿದ ಸಾಧನವನ್ನು ಹೊರತುಪಡಿಸಿ ಉಳಿದೆಲ್ಲವುಗಳಿಂದಲೂ ನಿಮ್ಮನ್ನು ಸೈನ್‌ಔಟ್‌ ಮಾಡಲಾಗುತ್ತದೆ.
  • ಇದು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : WhatsApp Tips And Tricks : WhatsApp ನ ಈ ಸಿಕ್ರೇಟ್‌ ಫೀಚರ್‌ಗಳು ನಿಮಗೆ ಗೊತ್ತಾ?

ಇದನ್ನೂ ಓದಿ : Google Chrome Hack : ಗೂಗಲ್ ಕ್ರೋಮ್‌ನಲ್ಲಿ ನೀವು ಸರ್ಚ್ ಮಾಡುವ ವಿಷಯ ಹ್ಯಾಕ್ ಆಗದಿರಲು ಹೀಗೆ ಮಾಡಿ

(Email Password how to reset or change your email password)

Comments are closed.