Rishabh Pant deadly accident : ಭೀಕರ ಅಪಘಾತದಲ್ಲಿ ರಿಷಭ್ ಪಂತ್ ಬದುಕುಳಿದದ್ದೇ ಹೆಚ್ಚು, ಡೆಡ್ಲಿ ಆ್ಯಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಡೆಹ್ರಾಡೂನ್ : ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಡೆಡ್ಲಿ ಅಪಘಾತದಲ್ಲಿ (Rishabh Pant deadly accident) ಪವಾಡ ಸದೃಶ್ಯವಾಗಿ ಜೀವಹಾನಿಯಿಂದ ಪಾರಾಗಿದ್ದಾರೆ. ರಿಷಭ್ ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಐಷಾರಾಮಿ ಕಾರು ಶುಕ್ರವಾರ ಬೆಳಗ್ಗೆ ಐದೂವರೆಗೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀರ ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಹೈಸ್ಪೀಡ್’ನಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಂತ್ ಕಾರಿನ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಿಷಭ್ ಪಂತ್ ಅತ್ಯಂತ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಬೆಳ್ಳಂಬೆಳಗ್ಗೆ ಅಣ್ಣನನ್ನು ಭೇಟಿಯಾಗಲು ದೆಹಲಿಯಿಂದ ಡೆಹ್ರಾಡೂನ್’ಗೆ ಹೊರಟಿದ್ದ ರಿಷಭ್ ಪಂತ್, ಸ್ವತಃ ತಾವೇ ಕಾರು ಚಲಾಯಿಸುತ್ತಿದ್ದರು. ಮುಂಜಾನೆಯಾಗಿದ್ದ ಕಾರಣ ನಿದ್ದೆಯ ಮಂಪರಿನಲ್ಲಿದ್ದ ಪಂತ್ ಎಚ್ಚರ ತಪ್ಪಿದ ಕಾರಣ ಕಾರು ಡಿವೈಡರ್’ಗೆ ಅಪ್ಪಳಿಸಿದೆ.

ಅಪಘಾತ ನಡೆದ ಕೂಡಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ರಿಷಭ್ ಪಂತ್ ವಿಂಡ್’ಸ್ಕ್ರೀನ್ ಅನ್ನು ಒಡೆದು ಕಾರಿನಿಂದ ಹೊರ ಬಂದಿದ್ದಾರೆ. ಘಟನೆಯಲ್ಲಿ ರಿಷಭ್ ಅವರ ಕಾಲು, ಬೆನ್ನು ಮೂಳೆಗೆ ಹಾನಿಯಾಗಿದೆ. ತಲೆ ಮತ್ತು ಮೊಣಕಾಲಿಗೆ ಗಾಯಗಳಾಗಿವೆ.

25 ವರ್ಷದ ರಿಷಭ್ ಪಂತ್ ಇತ್ತೀಚೆಗಷ್ಟೇ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದರು. ಬಾಂಗ್ಲಾ ಪ್ರವಾಸದ ನಂತರ ತವರಿಗೆ ಮರಳಿದ್ದ ರಿಷಭ್ ಹುಟ್ಟೂರು ಡೆಹ್ರಾಡೂನ್’ಗೆ ತೆರಳಿದ್ದರು. ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ರಿಷಭ್ ಪಂತ್ ಅವರನ್ನು ಕೈಬಿಡಲಾಗಿದ್ದು, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ಬಿಸಿಸಿಐ ಸೂಚನೆ ನೀಡಿತ್ತು.

ಇದನ್ನೂ ಓದಿ : Sachin Kayaking : ಪ್ಯಾಡ್ ಬಿಟ್ಟು ಪ್ಯಾಡಲ್ಸ್ ಹಿಡಿದ ಸಚಿನ್ : ಥಾಯ್ಲೆಂಡ್’ನಲ್ಲಿ ಕಯಾಕಿಂಗ್ ಪಾಠ ಕಲಿತ ಮಾಸ್ಟರ್ ಬ್ಲಾಸ್ಟರ್

ಇದನ್ನೂ ಓದಿ : 2022 lucky for 5 legends : ಪಂಚಪಾಂಡವರಿಗೆ ಅದೃಷ್ಟ ತಂದ 2022.. ಯಾರು ಆ ಪಂಚಪಾಂಡವರು, ಏನು ಆ ಅದೃಷ್ಟ?

ಇದನ್ನೂ ಓದಿ : Rishabh Pant car accident: ಕಾರು ಅಪಘಾತದಲ್ಲಿ ಗಂಭೀರ ಗಾಯ; ರಿಷಭ್ ಪಂತ್ ಚೇತರಿಕೆಗೆ ಕ್ರಿಕೆಟ್ ದಿಗ್ಗಜರ ಹಾರೈಕೆ

ಫಿಟ್ನೆಸ್ ಉತ್ತಮ ಪಡಿಸಿಕೊಳ್ಳುವ ಸಂಬಂಧ ರಿಷಬ್ ಪಂತ್ ಮುಂದಿನ ವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಬೇಕಿತ್ತು. ಆದರೆ ಕ್ರಿಕೆಟ್’ನಿಂದ ಬಿಡುವು ಸಿಕ್ಕ ಹಿನ್ನೆಲೆಯಲ್ಲಿ ಹುಟ್ಟೂರಿಗೆ ತೆರಳಿದ್ದ ರಿಷಭ್ ಪಂತ್ ಈಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಸೇರಿದಂತೆ ಹಲವರು ರಿಷಭ್ ಪಂತ್ ಅವರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.




Rishabh Pant deadly accident: Rishabh Pant barely survived the accident, the scene of the fatal accident was captured on CCTV.

Comments are closed.