SDPI leader arrested :ಉತ್ತರ ಕನ್ನಡದ ಶಿರಸಿಯಲ್ಲಿಯೂ ಎನ್​ಐಎ ತಲಾಶ್​ :ಪಿಎಫ್​ಐ ಅಧ್ಯಕ್ಷ, ಎಸ್​ಡಿಪಿಐ ಮುಖಂಡ ವಶಕ್ಕೆ

ಕಾರವಾರ : SDPI leader arrested : ದೇಶದಲ್ಲಿ ಹಿಂದೂ ಮುಖಂಡರ ಹತ್ಯೆಯಲ್ಲಿ ಪಿಎಫ್​ಐ ಹಾಗೂ ಎಸ್​​ಡಿಪಿಐ ಸಂಘಟನೆಯ ಕೈವಾಡ ಇರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹಲವು ಕಡೆಗಳಲ್ಲಿ ಎನ್​ಐಎ ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನೂ ಕೈಗೆತ್ತಿಕೊಂಡಿರುವ ಎನ್​ಐಎ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್​ಐ ಕಚೇರಿ ಮೇಲೆ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದೆ. ಇದರ ಜೊತೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿಯೂ ಎನ್​ಐಎ ಹಾಗೂ ಐಬಿ ತಂಡದಿಂದ ದಾಳಿ ನಡೆದಿದೆ.

ಎನ್​ಐಎ ಅಧಿಕಾರಿಗಳು ಪಿಎಫ್​ಐ ಅಧ್ಯಕ್ಷ ಎಜಾಜ್​ ಅಲಿಯನ್ನು ಬಂಧಿಸಿದ್ದಾರೆ. ಎಜಾಜ್​ ಅಲಿಯನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಎಜಾಜ್​ ಅಲಿಯನ್ನು ಬಂಧಿಸುವ ಸಂದರ್ಭದಲ್ಲಿ ಪಿಎಫ್​ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗಳಿಗೆ ಕ್ಯಾರೆ ಎನ್ನದ ಪೊಲೀಸರು ಎಜಾಜ್​ ಅಲಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಎನ್​ಐಎ ಬಂಧನದ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರತ್ತ ಕೈ ಬೀಸಿ ಪಿಎಫ್​ಐ ಅಧ್ಯಕ್ಷ ಎಜಾಜ್​ ಅಲಿ ಪೊಲೀಸರ ಜೊತೆ ತೆರಳಿದ್ದಾರೆ.


ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಎನ್​ಐಎ ಹಾಗೂ ಐಬಿ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಓರ್ವ ಎಸ್​ಡಿಪಿಐ ಮುಖಂಡನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸ್​ಡಿಪಿಐ ಮುಖಂಡ ಹಝೀಜ್​​ ಅಬ್ದುಲ್​ ಶುಕುರ್​ ಹೊನ್ನಾವರನನ್ನು ವಶಕ್ಕೆ ಪಡೆಯಲಾಗಿದೆ. ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಅಝೀಜ್​​ ಅಬ್ದುಲ್​​ ಮನೆ ಮೇಲೆ ದಾಳಿ ನಡೆಸಿದೆ. ದಾಳಿ ಸಂದರ್ಭದಲ್ಲಿ ಲ್ಯಾಪ್​ಟಾಪ್​, 2 ಮೊಬೈಲ್​, ಪುಸ್ತಕ ಹಾಗೂ ಸಿಡಿಯನ್ನು ಜಪ್ತಿ ಮಾಡಿದ್ದಾರೆ.


ಬಂಧಿತ ಅಝೀಝ್​ ಸಹೋದರ ಮೌಸಿನ್​ ಅಬ್ದುಲ್​​ ಶುಕುರ್​​ ಹೊನ್ನಾವರ ಎಂಬಾತನನ್ನು ವಶಕ್ಕೆ ಪಡೆಯಲು ಯೋಜನೆ ಹಾಕಲಾಗಿದೆ. ಎಸ್​​ಡಿಪಿಐ ಪ್ರಾಂತೀಯ ಅಧ್ಯಕ್ಷನಾದ ಮೌಸಿನ್​ ಮನೆಯಲ್ಲಿ ಇರದ ಕಾರಣ ಆತನ ಅಣ್ಣನ ವಶಕ್ಕೆ ಪಡೆದಿದ್ದಾರೆ. ಖಾಸಗಿ ಕಾರಿನಲ್ಲಿ ಅಝೀಜ್​ನನ್ನು ಕೂರಿಸಿಕೊಂಡ ಅಧಿಕಾರಿಗಳು ಗುಪ್ತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಝೀಜ್​ ತನ್ನ ಮನೆಯ ಗೋಡೆಯಲ್ಲಿ ರಿಜೆಕ್ಟ್​ ಸಿಎಂ ಹಾಗೂ ಎನ್​ಐಎ ಎಂದು ಬರೆದುಕೊಂಡಿದ್ದ. ಸಹೋದರರಿಬ್ಬರು ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳ ಈ ದಾಳಿಯನ್ನು ನಡೆದಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ದಾಳಿ ನಡೆದಿದ್ದು ಎನ್ಐಎ ನಡೆಸಿರುವ ಅತಿ ದೊಡ್ಡ ದಾಳಿ ಇದಾಗಿದೆ. 200ಕ್ಕೂ ಹೆಚ್ಚು ಅಧಿಕಾರಿಗಳು ಈ ಮೆಗಾ ಆಪರೇಷನ್ ನಲ್ಲಿ ಭಾಗಿಯಾಗಿದ್ದು, ಎಲ್ಲೆಡೆ ಭಾರಿ ಶೋಧ ಕಾರ್ಯಾಚರಣೆ ನಡೆಸಲಾಗ್ತಿದೆ. ಎನ್ಐಎ ಜೊತೆ ಕೆಲವೆಡೆ ಇಡಿ ಸಹ ದಾಳಿ ನಡೆಸಿದೆ ಅಂತಾ ಮೂಲಗಳು ತಿಳಿಸಿವೆ.

ಇದನ್ನು ಓದಿ : NIA Raid across India: ಮಂಗಳೂರು ಸೇರಿದಂತೆ ದೇಶಾದ್ಯಂಥ NIA ಮೆಗಾ ರೇಡ್

ಇದನ್ನೂ ಓದಿ : PAYCM ಅಭಿಯಾನ ; ಕಾಂಗ್ರೆಸ್ ನಿಂದ PAYTM ಅಧಿಕೃತ ಟ್ರೇಡ್ ಮಾರ್ಕ್ ಉಲ್ಲಂಘನೆ ?

NIA Talash in Uttara Kannada’s Shirsi: SDPI leader arrested

Comments are closed.