Pramod Muthalik‌ : ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮುಳ್ಳಾಗ್ತಾರಾ ಮುತಾಲಿಕ್ ?! ಹಿಂದುತ್ವಕ್ಕಾಗಿ ಚುನಾವಣಾ ಕಣಕ್ಕಿಳಿಯೋದಾಗಿ ಪ್ರಮೋದ್ ಘೋಷಣೆ

ಚಿಕ್ಕಮಗಳೂರು : ಒಂದು ಕಾಲದಲ್ಲಿ ಬಿಜೆಪಿಯ ಜೊತೆ ಜೊತೆಗೆ ಗುರುತಿಸಿಕೊಂಡಿದ್ದ ಪ್ರಖರ ಹಿಂದುತ್ವದ ಪ್ರವರ್ತಕ ಪ್ರಮೋದ್ ಮುತಾಲಿಕ್ (Pramod Muthalik‌)ಇತ್ತೀಚಿಗೆ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಬಿಜೆಪಿ ಹಿಂದುತ್ವದ ರಕ್ಷಣೆಗೆ ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿರುವ ಪ್ರಮೋದ್ ಮುತಾಲಿಕ್ 25 ಪ್ರಖರ ಹಿಂದುತ್ವ ವಾದಿಗಳ ಜೊತೆಗೆ ಮುಂದಿನ ಚುನಾವಣೆಗೆ ಸ್ಪರ್ಧಿಸೋದಾಗಿ ಘೋಷಿಸಿದ್ದಾರೆ. ಮಾತ್ರವಲ್ಲ ಆ ಮೂಲಕ ಬಿಜೆಪಿಗೆ ತಲೆನೋವಾಗಿ ಪರಿಣಮಿಸುವ ಮುನ್ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಹಿಂದೂಗಳನ್ನು ರಕ್ಷಿಸುವ ಏಕೈಕ ಉದ್ದೇಶದಿಂದ ಮುಂಬರುವ ಚುನಾವಣೆಯಲ್ಲಿ 25 ಪ್ರಖರ ಹಿಂದುತ್ವವಾದಿಗಳೊಂದಿಗೆ ನಾನು ಚುನಾವಣೆ ಕಣಕ್ಕೆ ಇಳಿಯುತ್ತಿದ್ದೇನೆ. ದತ್ತ ಪೀಠ ವಿವಾದಕ್ಕೆ ಮುಕ್ತಿ, ಗೋಹತ್ಯೆ ನಿಲುಗಡೆ, ಮತಾಂತರ ಮುಕ್ತ, ಲವ್ ಜಿಹಾದ್ ನಿಲ್ಲಿಸುತ್ತೇವೆ ಎಂದು ದತ್ತಪೀಠದ ದೇವಸ್ಥಾನದ ಬಾಗಿಲಲ್ಲಿ ಮುತಾಲಿಕ್ ಪ್ರತಿಜ್ಞೆ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್ , ಬಿಜೆಪಿಯವರು ಕಳೆದ 25 ವರ್ಷದಿಂದ ದತ್ತ ಪೀಠ ಹೋರಾಟದ ಲಾಭ ಪಡೆದಿದ್ದಾರೆ. ಆದರೆ ದತ್ತಪೀಠಕ್ಕಾಗಿ ಬಿಜೆಪಿ ಏನು ಮಾಡಿಲ್ಲ. ಬಿಜೆಪಿ ಹುಟ್ಟಿದ್ದು ಹಿಂದುತ್ವಕ್ಕಾಗಿ. ಆದರೇ, ಪ್ರಾಮಾಣಿಕವಾಗಿ ಹಿಂದುಗಳ ಪರ ಹೋರಾಟ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ‌

ಹಿಂದುಗಳ ರಕ್ಷಣೆಗಾಗಿ ಪ್ರಧಾನಿ ಮೋದಿ, ಯೋಗಿ ಬಿಟ್ಟರೇ ಇನ್ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದರಿಂದಾಗಿ ಹಿಂದೂ ಕಾರ್ಯಕರ್ತರ ಸಾವಿಗೆ ನ್ಯಾಯ ಸಿಗುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಗೆದ್ದವರು ಕಾರ್ಯಕರ್ತರನ್ನು ಮರೆತಿದ್ದಾರೆ ಎಂದು ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಹಿಂದುತ್ವದ ರಕ್ಷಣೆಗಾಗಿ ಪ್ರಖರ ಹಿಂದೂವಾದಿಗಳು , ಸ್ವಾಮೀಜಿಗಳು ರಾಜಕೀಯ ಪ್ರವೇಶ ಮಾಡಿ ಹಿಂದುತ್ವ ಉಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಮುಂದಿನ ವರ್ಷ ದತ್ತ ಪೀಠದ ಅಭಿಯಾನ ಕೊನೆಯ ಅಭಿಯಾನವಾಗುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ : Karnataka MLA Election 2023 : ಬೈಂದೂರಲ್ಲಿ ಗೋಪಾಲ ಪೂಜಾರಿ Vs ಡಾ.ಗೋವಿಂದ ಬಾಬು ಪೂಜಾರಿ ಕದನ

ಇದನ್ನೂ ಓದಿ : Karnataka Election Congress : ಹೊಸ ಮುಖಗಳಿಗೆ ಅವಕಾಶ : ಕರಾವಳಿ ನಾಯಕರಿಗೆ ಡಿಕೆಶಿ, ಸಿದ್ದರಾಮಯ್ಯ ಸೂಚನೆ

ಇದನ್ನೂ ಓದಿ : Congress worker dies : ಭಾರತ್‌ ಜೋಡೋ ಯಾತ್ರೆ ವೇಳೆ ಅಪಘಾತ; ಕಾಂಗ್ರೆಸ್‌ ಕಾರ್ಯಕರ್ತ ಸಾವು

ಈ ಹಿಂದೆ ಪ್ರಮೋದ್ ಮುತಾಲಿಕ್ ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಜಪ ಚುನಾವಣೆಯ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿಯ ದಿಗ್ಗಜ ನಾಯಕರ ಭೇಟಿ ಬಳಿಕವೂ ಪಕ್ಷ ಟಿಕೇಟ್ ನೀಡಲು ನಿರಾಕರಿಸಿತ್ತು. ಇದರಿಂದ ಮುತಾಲಿಕ್ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದು, ಅವಕಾಶ ಸಿಕ್ಕಲ್ಲೆಲ್ಲ ರಾಜ್ಯ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಲೇ ಇರುತ್ತಾರೆ.

Pramod Muthalik : Will Muthalik become a thorn in BJP’s side in the next election?! Pramod’s announcement that he entered the election fray for Hindutva

Comments are closed.