Prashant Kishore new party : ಚುನಾವಣೆಯ ಸಂದರ್ಭಗಳಲ್ಲಿ ಪ್ರಶಾಂತ್ ಕಿಶೋರ್ ಯಾವುದಾದರೊಂದು ಪಕ್ಷಕ್ಕೆ ಸೇರ್ಪಡೆಯಾದರು ಅಂದರೆ ಮುಗೀತು . ಚುನಾವಣಾ ಫಲಿತಾಂಶದಲ್ಲಿ ಆ ಪಕ್ಷಕ್ಕೆ ವಿಜಯ ಕಟ್ಟಿಟ್ಟ ಬುತ್ತಿ ಅನ್ನೋದು ಅನೇಕ ಬಾರಿ ಪ್ರೂವ್ ಆಗಿದೆ. ಬಿಜೆಪಿ , ಟಿಎಂಸಿ ಹಾಗೂ ಡಿಎಂಕೆ ಸೇರಿದಂತೆ ಹಲವು ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಏರುವ ಹಿಂದೆ ಪ್ರಶಾಂತ್ ಕಿಶೋರ್ರ ಚಾಣಾಕ್ಷತನ ವರ್ಕೌಟ್ ಆಗಿತ್ತು. ಇವೆಲ್ಲ ಗಮನಿಸುತ್ತಿದ್ದ ಕಾಂಗ್ರೆಸ್ ಕೂಡ ಪ್ರಶಾಂತ್ ಕಿಶೋರ್ರಿಗೆ ಈ ಬಾರಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುವ ಆಹ್ವಾನವನ್ನು ನೀಡಿತ್ತು. ಆದರೆ ಕಾಂಗ್ರೆಸ್ನಲ್ಲಿ ಮುಕ್ತವಾಗಿ ಅಧಿಕಾರ ಚಲಾಯಿಸಲು ಸೂಕ್ತ ವಾತಾವರಣ ಸಿಗದ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಆಹ್ವಾನವನ್ನು ತಿರಸ್ಕರಿಸಿದ್ದರು.
ಕಾಂಗ್ರೆಸ್ನ ಆಫರ್ ತಿರಸ್ಕರಿಸಿದ ಬಳಿಕ ಪ್ರಶಾಂತ್ ಕಿಶೋರ್ ಮುಂದೇನು ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಇದೀಗ ಈ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿರುವ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತಿರುವ ಬಗ್ಗೆ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಹೊಸ ಪಕ್ಷದ ಹೆಸರನ್ನು ನೋಂದಾಯಿಸಿ ಇದಕ್ಕೆ ಬಿಹಾರದಲ್ಲಿ ಚಾಲನೆ ನೀಡುತ್ತಿರುವುದಾಗಿ ಪ್ರಶಾಂತ್ ಕಿಶೋರ್ ಘೋಷಣೆ ಮಾಡಿದ್ದಾರೆ. ಪ್ರಶಾಂತ್ ಕಿಶೋರ್ರ ಈ ಅಚ್ಚರಿಯ ನಿರ್ಧಾರ ಬಿಹಾರದಲ್ಲಿ ಅನೇಕ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.
ಎಲ್ಲರನ್ನೂ ಒಳಗೊಳ್ಳುವ ಅರ್ಥಪೂರ್ಣ ಪ್ರಜಾಪ್ರಭುತ್ವ ಮತ್ತು ಜನಪರ ನೀತಿಯನ್ನು ರಚಿಸಲು ನನ್ನ ಪ್ರಯತ್ನಗಳ ಪರಿಣಾಮವಾಗಿ, 10 ವರ್ಷಗಳ ಕಡಿವಾಣವಿಲ್ಲದ ಆಡಳಿತವು ಅವಕಾಶಕ್ಕೆ ದಾರಿ ಮಾಡಿಕೊಟ್ಟಿದೆ. ಈಗ ನಾನು ಪುಟವನ್ನು ತಿರುಗಿಸಿದಂತೆ ಪ್ರಜಾಪ್ರಭುತ್ವದ ನಿಜವಾದ ಮಾಲೀಕರಾಗಿರುವ ಜನರ ಕಡೆಗೆ ತಿರುಗಬೇಕಾಗಿದೆ. ಆಲೋಚನೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಮತ್ತು ಜನ್ ಸೂರಜ್ (ಜನರಿಂದ ಉತ್ತಮ ಆಡಳಿತ) ಸ್ಥಾಪಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಪ್ರಯತ್ನ ಬಿಹಾರದಿಂದ ಆರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ : Shawarma death : ಕಾಸರಗೋಡಲ್ಲಿ ಶವರ್ಮ ತಿಂದು ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ
ಇದನ್ನೂ ಓದಿ : ಕುಂದಾಪುರ : ಪ್ರಥಮ ಪಿಯುಸಿ ಫಲಿತಾಂಶಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ
Prashant Kishore’s new party: significant decision by political strategy | Political Strategist Prashant Kishore Announces New Party Jan Surajing With Bihar IG News