psi exam scam : ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಶರಣಾಗತಿ

ಕಲಬುರಗಿ : ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ(psi exam scam) ದಿನಕ್ಕೊಂದು ಆರೋಪಿಗಳು ಸಿಐಡಿ ಬಲೆಗೆ ಬೀಳುತ್ತಲೇ ಇದ್ದಾರೆ. ಪ್ರಕರಣದ ಆಳದಲ್ಲಿ ತನಿಖೆಯನ್ನು ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಒಬ್ಬೊಬ್ಬರನ್ನೇ ಖೆಡ್ಡಾಗೆ ಕೆಡವುತ್ತಿದ್ದಾರೆ. ಈ ಎಲ್ಲದರ ನಡುವೆ ಕಳೆದ 21 ದಿನಗಳಿಂದ ಪೊಲೀಸರ ಕೈಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸಿದ್ದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಧ್ಯಾಯ ಕಾಶಿನಾಥ್​ ಇಂದು ಸಿಐಡಿ ಅಧಿಕಾರಿಗಳಿಗೆ ಶರಣಾಗಿದ್ದಾರೆ. ಪಿಎಸ್ಐ ಅಭ್ಯರ್ಥಿಗಳ ಓಎಂಆರ್​ ಶೀಟ್​ಗಳನ್ನು ತಿದ್ದಲು ಸಹಕಾರ ನೀಡಿದ ಆರೋಪವನ್ನು ಕಾಶಿನಾಥ್​ ಎದುರಿಸುತ್ತಿದ್ದಾರೆ. ಇಂದು ಕಲಬುರಗಿಯ ಸಿಐಡಿ ಕಚೇರಿಗೆ ಆಗಮಿಸಿದ ಕಾಶಿನಾಥ್​ ಶರಣಾಗಿದ್ದಾರೆ.


ನಿನ್ನೆ ಕೂಡ ಇದೇ ಪ್ರಕರಣದ ಆರೋಪ ಮಂಜುನಾಥ ಮೇಳಕುಂದಿ ಸಿಐಡಿ ಅಧಿಕಾರಿಗಳ ಎದುರು ಶರಣಾಗಿದ್ದರು. ಇದರ ಬೆನ್ನಲ್ಲೇ ಇದೀಗ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಕಾಶಿನಾಥ್​ ಕೂಡ ಮಂಜುನಾಥ್​ ಮೇಳಕುಂದಿ ದಾರಿಯನ್ನೇ ಅನುಸರಿಸಿದ್ದಾರೆ. ಈ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಕಾರ್ಯಾಚರಣೆ ಕಂಡು ಬೆದರಿ ಆರೋಪಿಗಳು ಒಬ್ಬೊಬ್ಬರಾಗಿಯೇ ಶರಣಾಗುತ್ತಿರುವ ಸಾಧ್ಯತೆಯಿದೆ.


ಕಾಶಿನಾಥ್​ ಬಂಧನದ ಬಳಿಕ ಅಕ್ರಮ ಪಿಎಸ್​ಐ ನೇಮಕಾತಿ ಪ್ರಕರಣದಲ್ಲಿ ಈವರೆಗೆ ಬಂಧನಕ್ಕೊಳಗಾದವರ ಸಂಖ್ಯೆ 26ಕ್ಕೆ ಏರಿಕೆ ಕಂಡಂತಾಗಿದೆ. ಈಗಾಗಲೇ ಸಿಐಡಿ ಅಧಿಕಾರಿಗಳ ಎದುರು ಶರಣಾಗಿರುವ ಆರೋಪಿ ಮಂಜುನಾಥ ಮೇಳಕುಂದಿ ಸಹೋದರ ರವೀಂದ್ರ ಮೇಳಕುಂದಿ ಹಾಗೂ ಶಾಂತಿ ಭಾಯಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ‘

ಇದನ್ನು ಓದಿ :Shawarma death : ಕಾಸರಗೋಡಲ್ಲಿ ಶವರ್ಮ ತಿಂದು ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ

ಇದನ್ನೂ ಓದಿ : ಕುಂದಾಪುರ : ಪ್ರಥಮ ಪಿಯುಸಿ ಫಲಿತಾಂಶಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

psi exam scam jnana jyothi education institute headmaster surrender to cid

Comments are closed.