ಬೆಂಗಳೂರಿಗೆ ಇಂದು ಬರ್ತಾರೆ ಪ್ರಧಾನಿ ನರೇಂದ್ರ ಮೋದಿ : ರೋಡ್ ಗಿಳಿಯೋ ಮುನ್ನ ಈ ಸುದ್ದಿ ಓದಿ

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿಗೆ ಭೇಟಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.‌ಇದರೊಂದಿಗೆ ಸಂಚಾರ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಎಲ್ಲಿಯೂ ಜನರಿಗೆ ತೊಂದರೆ ಆಗದಂತೆ ರಸ್ತೆ ಮಾರ್ಗಗಳನ್ನು (traffic information) ಬದಲಾಯಿಸಲಾಗಿದೆ.

ಹಾಗಿದ್ದರೇ ನಗರದ ಸಂಚಾರ ವ್ಯವಸ್ಥೆಯಲ್ಲಿ ಯಾವೆಲ್ಲ ಬದಲಾವಣೆ ಮಾಡಲಾಗಿದೆ ಅನ್ನೋದನ್ನು ಗಮನಿಸೋದಾದರೇ, ಸಂಚಾರ ದಟ್ಟಣೆ ನಿಯಂತ್ರಿಸೋ ನಿಟ್ಟಿನಲ್ಲಿಮಧ್ಯಾಹ್ನ 12.30 ರಿಂದ 03.00 ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧ ಹೇರಲಾಗಿದೆ.

  • ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ಸಂಚಾರ ನಿಷೇಧ.
  • ನೈಸ್ ರಸ್ತೆ ಮುಖಾಂತರ ನೈಸ್ ಕಛೇರಿ – ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ – ಸೋಂಪುರ ಟೋಲ್ ಮುಖಾಂತರ ಕೆಂಗೇರಿ & ಮೈಸೂರು ಕಡೆಗೆ ಸಂಚರಿಸಲು ಅವಕಾಶ.
  • ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್ ವರೆಗೆ ನಿಷೇಧ.
  • ನಾಗರಭಾವಿ ಸರ್ಕಲ್-ನಮ್ಮೂರ ತಿಂಡಿ ಹೋಟೆಲ್-ಅಂಬೇಡ್ಕರ್ ಕಾಲೇಜ್ ಜಂಕ್ಷನ್‌- ಜ್ಞಾನಭಾರತಿ ಗೇಟ್ ಕಡೆಗೆ ಅವಕಾಶ.
  • ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ ನಿಷೇಧ.
  • ಆರ್‌ ಆರ್ ನಗರ ಆರ್ಚ್, ನಾಯಂಡಹಳ್ಳಿ ಜಂಕ್ಷನ್ – ನಾಗರಭಾವಿ ಕಡೆಗೆ ಅವಕಾಶ.
  • ಕೆಂಗೆರಿ ಜಂಕ್ಷನ್ -ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ಕಡೆಗೆ ಸಂಚಾರ ನಿಷೇಧ.
  • ತುಮಕೂರು ರಸ್ತೆಯಿಂದ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ.
  • ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್‌ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ಅವಕಾಶ ಕಲ್ಪಿಸಲಾಗಿದೆ.
  • ಇನ್ನು ನಗರದಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು ಯಾವುದು ಅನ್ನೋದರ‌ ಮಾಹಿತಿ ಇಲ್ಲಿದೆ.
  • ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್‌ನಾಗ್‌ ಸರ್ಕಲ್ ನಿಂದ ರಾಬಿನ್‌ ಥಿಯೇಟರ್ ವರೆಗೆ.
  • ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡೀನ್‌ ಬ್ಲಾಕ್ ಜಂಕ್ಷನ್ ವರೆಗೆ.
  • ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟಲ್ ರಸ್ತೆ ಮತ್ತು ಗಾಂಧಿ ಮಾರ್ಗ್ ರಸ್ತೆ ಬಿ. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್‌ ವರೆಗೆ.

ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ ಎಲ್ಲೆಲ್ಲಿ ಕಲ್ಪಿಸಲಾಗಿದೆ ಅನ್ನೋದನ್ನು ಗಮನಿಸೋದಾದರೇ,

  1. ಕಾಳಿಕಾಂಭ ರಸ್ತೆ & ಪಾರ್ಕ್ ರಸ್ತೆ
  2. ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್‌ ಸ್ಟಾಪ್ ನಿಂದ ಐಸಾಕ್ ರಸ್ತೆವರೆಗೆ
  3. 6ನೇ ಮುಖ್ಯರಸ್ತೆ (ಕಾಳಿಕಾಂಭ ರಸ್ತೆ & ಪಾರ್ಕ್‌ ರಸ್ತೆ)
  4. ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್‌ ಸ್ಟಾಪ್ ನಿಂದ ಐಸಾಕ್ ವರೆಗೆ

ಭಾರೀ ಗಾತ್ರದ ವಾಹನಗಳ ಸಂಚಾರ ನಿಷೇದವಿರುವ ಸ್ಥಳಗಳು‌

ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06-00 ಗಂಟೆಯ ವರೆಗೆ ಈ ಆದೇಶಗಳು ಜಾರಿಯಲ್ಲಿರಲಿವೆ.ನಾಗರಭಾವಿ ರಿಂಗ್ ರಸ್ತೆ ಚೌಡೇಶ್ವರಿ ಬಸ್‌ ನಿಲ್ದಾಣದಿಂದ ನಾಗರಭಾವಿ ಜಂಕ್ಷನ್ ವರೆಗೆ ಎರಡೂ ಕಡೆಗಳಲ್ಲಿ ,ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ ಹಳೇ ರಿಂಗ್ ರಸ್ತೆ ಕೆಂಗುಂಟೆ ಜಂಕ್ಷನ್ ನಿಂದ ಶಿರ್ಕೆ ಜಂಕ್ಷನ್ ವರೆಗೆ
ಯುನಿವರ್ಸಿಟಿ ಒಳಭಾಗದ ಎಲ್ಲಾ ರಸ್ತೆಗಳು ಬಂದ್ ಆಗಲಿದೆ.

ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06-00 ಗಂಟೆಯ ವರೆಗೆ ಈ ಆದೇಶಗಳು ಜಾರಿಯಲ್ಲಿರಲಿವೆ.ನಾಗರಭಾವಿ ರಿಂಗ್ ರಸ್ತೆ ಚೌಡೇಶ್ವರಿ ಬಸ್‌ ನಿಲ್ದಾಣದಿಂದ ನಾಗರಭಾವಿ ಜಂಕ್ಷನ್ ವರೆಗೆ ಎರಡೂ ಕಡೆಗಳಲ್ಲಿ ,ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ ಹಳೇ ರಿಂಗ್ ರಸ್ತೆ ಕೆಂಗುಂಟೆ ಜಂಕ್ಷನ್ ನಿಂದ ಶಿರ್ಕೆ ಜಂಕ್ಷನ್ ವರೆಗೆ
ಯುನಿವರ್ಸಿಟಿ ಒಳಭಾಗದ ಎಲ್ಲಾ ರಸ್ತೆಗಳು ಬಂದ್ ಆಗಲಿದೆ.

ಇದನ್ನೂ ಓದಿ : PM Modi Surprise Gift : ಮೋದಿ ಭೇಟಿ ಮೇಲೆ ನೀರಿಕ್ಷೆಯ ಲಿಸ್ಟ್ : ರಾಜ್ಯಕ್ಕೆ ಘೋಷಣೆಯಾಗುತ್ತಾ ಏಮ್ಸ್ ?

ಇದನ್ನೂ ಓದಿ : Rayan raj sarja : ರಾ ರಾ ರಕ್ಕಮ್ಮ ಎಂದ ರಾಯನ್ ರಾಜ್ ಸರ್ಜಾ : ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

Prime Minister Narendra Modi visit Bangalore today, must read traffic information

Comments are closed.