IND vs SA 5th T20 ಮಳೆಗೆ ಬಲಿ : 50% ಟಿಕೆಟ್ ಹಣ ವಾಪಸ್, KSCA ಮಹತ್ವದ ನಿರ್ಧಾರ

ಬೆಂಗಳೂರು: ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ (India Vs South Africa T20 series) ನಡುವಿನ ಸರಣಿ ನಿರ್ಣಾಯಕ 5ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಪಂದ್ಯ (IND vs SA 5th T20 ) ಮಳೆಗೆ ಬಲಿಯಾಗಿರುವ ಕಾರಣ ಟಿಕೆಟ್ ಮೊತ್ತದ 50% ಹಣವನ್ನು ಪ್ರೇಕ್ಷಕರಿಗೆ ವಾಪಸ್ ಮಾಡಲು (Refund 50% of amounts for all the paid tickets) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಿರ್ಧರಿಸಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆರಂಭಗೊಂಡ 5ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 3.3 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದ ವೇಳೆ ಸುರಿದ ಮಳೆ ನಂತರ ಪಂದ್ಯ ಮುಂದುವರಿಯಲು ಬಿಡಲಿಲ್ಲ. ಕೊನೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿ 2-2ರಲ್ಲಿ ಸಮಬಲಗೊಂಡಿತು.

ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದ ರದ್ದಾದರೆ ಟಿಕೆಟ್ ಹಣವನ್ನು ಸಂಪೂರ್ಣ (100%) ಮರಳಿಸಬೇಕೆಂಬುದು ಬಿಸಿಸಿಐ ನಿಯಮ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾಗುವ ಮುನ್ನ ಕನಿಷ್ಠ ಒಂದು ಎಸೆತದ ಆಟ ನಡೆದಿದ್ದರೂ, ಟಿಕೆಟ್ ಹಣವನ್ನು ಮರಳಿಸಲಾಗುವುದಿಲ್ಲ. ಆದರೆ ಕರುನಾಡ ಕ್ರಿಕೆಟ್ ಪ್ರಿಯರ ನೆರವಿಗೆ ನಿಂತಿರುವ KSCA, 3.3 ಓವರ್’ಗಳ ಆಟ ನಡೆದಿದ್ದರೂ, ಟಿಕೆಟ್ ಬೆಲೆಯ 50% ಹಣವನ್ನು ಪ್ರೇಕ್ಷಕರಿಗೆ ಮರಳಿಸಲು ನಿರ್ಧರಿಸಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ KSCA ವಕ್ತಾರ ವಿನಯ್ ಮೃತ್ಯುಂಜಯ, ‘’ಹಣ ಕೊಟ್ಟು ಟಿಕೆಟ್ ಖರೀದಿಸಿದವರಿಗೆ ಟಿಕೆಟ್ ಮೊತ್ತದ 50% ಹಣವನ್ನು ಹಿಂದಿರುಗಿಸಲು KACA ನಿರ್ಧರಿಸಿದೆ. ಹಣ ವಾಪಸ್ ಯಾವಾಗ ಮತ್ತು ಎಲ್ಲಿ ಎಂಬುದನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ಟಿಕೆಟ್ ಖರೀದಿಸಿದ ಪ್ರೇಕ್ಷಕರು ಟಿಕೆಟ್ ಹಣ ವಾಪಸ್ ಪಡೆಯಲು ಮೂಲ ಟಿಕೆಟನ್ನು (Original Tickets) ತೋರಿಸಬೇಕು,’’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ICC T20 WC ಟಿ20 ವಿಶ್ವಕಪ್ : ಭಾರತ ತಂಡದ ‘ಫಸ್ಟ್ ಚಾಯ್ಸ್’ ಆಟಗಾರ ಇವನೇ !

ಇದನ್ನೂ ಓದಿ : ಯುವರಾಜ್ ಸಿಂಗ್ ಮಗನಿಗೆ ನಾಮಕರಣ ; ಸಿಕ್ಸರ್ ಸಿಂಗ್ ಪುತ್ರನ ಹೆಸರೇನು ಗೊತ್ತಾ?

IND vs SA 5th T20, KSCA decides to Refund 50% of amounts for all the paid ticket

Comments are closed.