Beat the Heat : ಬಿಸಿಲಿನ ಬೇಗೆ ನೀಗಿಸಲು ಉತ್ತಮ ತಂಪು ತಂಪು ಎಳನೀರು ಮತ್ತು ಮಜ್ಜಿಗೆ!

ಬೇಸಿಗೆ(Summer) ಯ ಬಿಸಿಲು ಸಹಿಸುವುದು ಸ್ವಲ್ಪ ಕಷ್ಟವೇ. ಬಿಸಿಲಿನ ತಾಪದಿಂದ ದೇಹವು ಅಧಿಕವಾಗಿ ಬಿಸಿಯಾಗಿಬಿಡುತ್ತದೆ (Beat the Heat ). ಇದಕ್ಕೆ ಕಾರಣ ಹೊರಗಡೆಯ ಕೆಲಸ, ದೈಹಿಕ ಶ್ರಮ. ಬಳಲಿಕೆ ನಿರ್ಜಲೀಕರಣದ ಮೊದಲ ಸಂಕೇತ. ಒಣಗಿದ ತುಟಿಮತ್ತು ನಾಲಿಗೆ, ತಲೆನೋವು, ಸ್ನಾಯುಗಳಲ್ಲಿ ಸೆಳೆತ ಇವೆಲ್ಲವೂ ಇತರೆ ಸಂಕೇತಗಳು.

ಬೇಸಿಗೆಯಲ್ಲಿ ತೆಳುವಾದ ಹತ್ತಿಯ ಬಟ್ಟೆ ಧರಿಸುವುದು ದೇಹಕ್ಕೆ ಆರಾಮ ನೀಡುತ್ತದೆ. ತಾಪಮಾನದಿಂದ ಬರುವ ಆರೋಗ್ಯದ ಸಮಸ್ಯೆಗಳು ಈ ಕಾಲದಲ್ಲಿ ಸಹಜ. ಅದನ್ನು ತಡೆಗಟ್ಟಲು ಕೆಲವು ಉತ್ತಮ ಆಹಾರಗಳು ಇಲ್ಲಿದೆ.

ಇದನ್ನೂ ಓದಿ : protect your kids from heatwaves : ಉಷ್ಣ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಪೋಷಕರಿಗೆ ಇಲ್ಲಿದೆ ಸಲಹೆ

ಎಳನೀರು :
ದೇಹಕ್ಕೆ ಸಾಕಾಗುವಷ್ಟು ನೀರು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಎಳನೀರು ಪೂರೈಸುತ್ತದೆ. ಇದು ದೇಹದ ಉಷ್ಣತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚರ್ಮ ಮತ್ತು ಆರೋಗ್ಯದ ರಕ್ಷಣೆ ಮಾಡಿಕೊಳ್ಳಲು ಮತ್ತು ಉತ್ತಮ ಡಯಟ್‌ ಆಗಿಯೂ ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಬಹುದು.

ಮಜ್ಜಿಗೆ :
ಬೇಸಿಗೆಗೆ ಮಜ್ಜಿಗೆ ಉತ್ತಮ ಪಾನೀಯ. ಇದು ದೇಹ ತಂಪಾಗಿರಿಸುತ್ತದೆ ಮತ್ತು ಅತಿಯಾದ ಬಾಯಾರಿಕೆಯನ್ನು ತಣಿಸುತ್ತದೆ. ಬಿಸಿಲಿಗೆ ಮಜ್ಜಿಗೆ ಕುಡಿಯುವುದರಿಂದ ನಿರ್ಜಲೀಕರಣವನ್ನು ಸಹ ತಪ್ಪಿಸಬಹುದು. ಸೋಡಾ ಮತ್ತು ಸಕ್ಕರೆ ಅಂಶ ಅಧಿಕವಾಗಿರುವ ಪಾನೀಯಗಳಿಂದ ದೂರವಿರಿ.

ಹಣ್ಣುಗಳು ‌ಮತ್ತು ತರಕಾರಿ
ಬೇಸಿಗೆಯಲ್ಲಿ ಈ ಋತುಮಾನದಲ್ಲಿ ಸಿಗುವ ಹಣ್ಣುಗಳನ್ನು ಸೇವಿಸಬೇಕು. ಮಾವಿನ ಹಣ್ಣು, ಕಲ್ಲಂಗಡಿ ಹಣ್ಣುಗಳಲ್ಲಿ ನಾರಿನಂಶ ಅಧಿಕ ವಾಗಿರುವುದರ ಜೊತೆಗೆ ನೀರಿನ ಅಂಶವನ್ನು ಹೊಂದಿದೆ. ಪಪ್ಪಾಯಿ ಕೂಡಾ ಈ ಋತುಮಾನಕ್ಕೆ ಉತ್ತಮವಾಗಿದೆ. ತರಕಾರಿಯಲ್ಲಿ ಅಧಿಕ ನೀರಿನಂಶವಿರುವುದರಿಂದ ಅದರ ಸಲಾಡ್‌ ದೇಹಕ್ಕೆ ತಂಪು ನೀಡುವುದು.

ಸ್ಮೂಥಿ:
ಸ್ಮೂಥಿಗಳನ್ನು ಮೊಸರಿನಿಂದ ಮಾಡುತ್ತಾರೆ. ಅದಕ್ಕೆ ನಿಮ್ಮಿಷ್ಟದ ಹಣ್ಣು ಸೇರಿಸಿ ಸೇವಿಸಿ. ಇದು ದೇಹ ತಂಪಾಗಿರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Gardening Tips : ನಿಮ್ಮ ಗಾರ್ಡನ್‌ನಲ್ಲಿಯ ಗಿಡಗಳನ್ನು ರಕ್ಷಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆಯೇ? ಚಿಂತಿಸಬೇಡಿ, ಇಲ್ಲಿದೆ ಅದಕ್ಕೆ ಪರಿಹಾರ
‌‌
(Beat the Heat from coconut water to smoothies these are best to beat the heat)

Comments are closed.