ಭಾನುವಾರ, ಏಪ್ರಿಲ್ 27, 2025
Homekarnatakaವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಆರ್‌ ಅಶೋಕ್‌ ಆಯ್ಕೆ : ಉತ್ತರ ಕರ್ನಾಟಕ ಭಾಗಕ್ಕೆ ನಿರಾಸೆ

ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಆರ್‌ ಅಶೋಕ್‌ ಆಯ್ಕೆ : ಉತ್ತರ ಕರ್ನಾಟಕ ಭಾಗಕ್ಕೆ ನಿರಾಸೆ

- Advertisement -

ಬೆಂಗಳೂರು : ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆ ಕೊನೆಗೂ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಆಯ್ಕೆಯಾದ ಬೆನ್ನಲ್ಲೇ, ಬಿಜೆಪಿ ಬಿಜೆಪಿ ವಿರೋಧ ಪಕ್ಷದ (Leader of the Opposition) ನಾಯಕನನ್ನಾಗಿ ಆರ್‌ ಅಶೋಕ್‌ (R Ashok) ಆಯ್ಕೆ ಆಗಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರ ಈ ಬಾರಿ ನಿರಾಸೆಯಾಗಿದೆ.

ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಆರ್‌. ಅಶೋಕ್‌ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕನನ್ನಾಗಿ ಬಿಜೆಪಿ ಶಾಸಕರು ಆಯ್ಕೆ ಮಾಡಿದ್ದಾರೆ. ಆರ್‌. ಅಶೋಕ್‌ ನೇಮಕವಾಗುತ್ತಿದ್ದಂತೆಯೇ ಅವರ ಪದ್ಮನಾಭ ನಗರದಲ್ಲಿರುವ ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ. ಅಲ್ಲದೇ ಹೋಟೆಲ್‌ ಮುಂಭಾಗದಲ್ಲಿ ಸಂಭ್ರಮಾಚರಣೆಗೆ ಬೆಂಬಲಿಗರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಕೊನೆಗೂ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್‌ನಿಂದ ಆಗುತ್ತಿದ್ದ ಮುಜುಗರನ್ನು ತಪ್ಪಿಸಿಕೊಂಡಿದೆ.

R Ashok Leader of the Opposition in the Legislative Assembly Disappointment for North Karnataka
Image Credit to Original Source

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯಿತು. ವಿಧಾನಸಭೆ, ವಿಧಾನ ಪರಿಷತ್‌ ವಿಪಕ್ಷ ನಾಯಕನ ಬಗ್ಗೆ ಚರ್ಚೆ ನಡೆದಿದೆ. ವಿಪಕ್ಷ ನಾಯಕನ ಆಯ್ಕೆಯ ಚುನಾವಣೆಗೆ ವೀಕ್ಷಕರಾಗಿ ನಿರ್ಮಲಾ ಸೀತಾರಾಮನ್‌, ದುಷ್ಯಂತ್‌ ಕುಮಾರ್‌ ಉಪಸ್ಥಿತರಿದ್ದರು.

ಇದನ್ನೂ ಓದಿ : ಮಲ್ಪೆ ಬೀಚ್‌ನಲ್ಲಿ ಪ್ಯಾರಾಸೈಲಿಂಗ್ ವೇಳೆ ಅವಘಡ, ಯುವಕನಿಗೆ ಗಾಯ : ತಪ್ಪಿದ ಬಾರೀ ದುರಂತ

ಆರ್‌ ಅಶೋಕ್‌ ನೇಮಕದ ಕುರಿತು ವೀಕ್ಷಕರು ತಿಳಿಸುತ್ತಿದ್ದಂತೆಯೇ ಬಿಜೆಪಿ ಶಾಸಕರಾದ ರಮೇಶ್‌ ಜಾರಕಿಹೊಳಿ, ಅರವಿಂದ್‌ ಬೆಲ್ಲದ್‌, ಬಸನಗೌಡ ಪಾಟೀಲ ಯತ್ನಾಳ್‌ ಸಭೆಯಿಂದ ಹೊರ ನಡೆದಿದ್ದಾರೆ. ಇನ್ನು ಎಸ್‌ಟಿ ಸೋಮಶೇಖರ್‌ ಅವರು ಸಭೆಗೆ ಹಾಜರಾಗದೇ ದೆಹಲಿಗೆ ತೆರಳಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು, ಬಿಎಸ್‌ ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ, ವಿಜಯೇಂದ್ರ ಸೇರಿದಂತೆ ಬಿಜೆಪಿ ಶಾಸಕರು ತನ್ನನ್ನು ಬಿಜೆಪಿ ವಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ್ದರು. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಉತ್ತರಹಳ್ಳಿ ಹಾಗೂ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ನನ್ನನ್ನು ಸತತ ಏಳು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ : ಕರಾವಳಿಯ ಈ ಶಾಸಕನಿಗೆ ಒಲಿಯಲಿದೆ ವಿಪಕ್ಷ ನಾಯಕನ ಸ್ಥಾನ : ಹಿಂದುಳಿದ ವರ್ಗಕ್ಕೆ ಗುಡ್ ನ್ಯೂಸ್ ಕೊಟ್ಟ ಬಿಜೆಪಿ

ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಉತ್ತರಹಳ್ಳಿ ಹಾಗೂ ಪದ್ಮನಾಭನಗರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಬೆಳೆದಿದ್ದೇನೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜೊತೆಗೆ ಜೋಡೆತ್ತುಗಳಾಗಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ಕೇಂದ್ರ ನಾಯಕರು ನೀಡಿದ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಆರ್‌.ಅಶೋಕ್‌ ತಿಳಿಸಿದ್ದಾರೆ.

R Ashok Leader of the Opposition in the Legislative Assembly Disappointment for North Karnataka

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular