ಕರಾವಳಿಯ ಈ ಶಾಸಕನಿಗೆ ಒಲಿಯಲಿದೆ ವಿಪಕ್ಷ ನಾಯಕನ ಸ್ಥಾನ : ಹಿಂದುಳಿದ ವರ್ಗಕ್ಕೆ ಗುಡ್ ನ್ಯೂಸ್ ಕೊಟ್ಟ ಬಿಜೆಪಿ

ವೀರಶೈವ, ಲಿಂಗಾಯತ, ಒಕ್ಕಲಿಗ ಎಂಬ ಜಾತಿ ಲೆಕ್ಕಾಚಾರ, ಪ್ರಾದೇಶಿಕತೆ ಹಾಗೂ ಹಿಂದುಳಿದ ವರ್ಗಗಳನ್ನು ಪರಿಗಣಿಸುವ ಬದ್ಧತೆ ಹೀಗೆ ನಾನಾ ಆಯಾಮದಲ್ಲಿ ಲೆಕ್ಕಾಚಾರ ನಡೆದಿದ್ದು, ಶುಕ್ರವಾರ ಸಂಜೆ ವಿಪಕ್ಷ ಸ್ಥಾನದ ಆಯ್ಕೆ ಬಹುತೇಕ ಖಚಿತಗೊಂಡಿದೆ.

BJP Opposition Leader :  ಅಂತೂ ಇಂತೂ ಅಳೆದು ತೂಗಿ ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ರಾಜಾಹುಲಿ ಖ್ಯಾತಿಯ ಬಿಎಸ್‌ ಯಡಿಯೂರಪ್ಪ (BS Yediyurappa)  ಪುತ್ರ ಬಿ.ವೈ.ವಿಜಯೇಂದ್ರ (BY Vijayendra) ಅವರನ್ನು ಹೈಕಮಾಂಡ್ ನೇಮಿಸುತ್ತಿದ್ದಂತೆ ವಿಪಕ್ಷ ನಾಯಕ ಸ್ಥಾನದ ಆಯ್ಕೆ ಕುತೂಹಲ ಮೂಡಿಸಿದೆ. ವೀರಶೈವ, ಲಿಂಗಾಯತ, ಒಕ್ಕಲಿಗ ಎಂಬ ಜಾತಿ ಲೆಕ್ಕಾಚಾರ, ಪ್ರಾದೇಶಿಕತೆ ಹಾಗೂ ಹಿಂದುಳಿದ ವರ್ಗಗಳನ್ನು ಪರಿಗಣಿಸುವ ಬದ್ಧತೆ ಹೀಗೆ ನಾನಾ ಆಯಾಮದಲ್ಲಿ ಲೆಕ್ಕಾಚಾರ ನಡೆದಿದ್ದು, ಶುಕ್ರವಾರ ಸಂಜೆ ವಿಪಕ್ಷ ಸ್ಥಾನದ ಆಯ್ಕೆ ಬಹುತೇಕ ಖಚಿತಗೊಂಡಿದೆ. ಅಷ್ಟೇ ಅಲ್ಲ ಈ ಭಾರಿ ಹಿಂದುಳಿದ ವರ್ಗದ (Backword Class Leader)  ನಾಯಕ ಸುನಿಲ್‌ ಕುಮಾರ್‌ಗೆ ( V Sunil Kumar) ಪಟ್ಟ ಕಟ್ಟೋ ನಿರೀಕ್ಷೆ ದಟ್ಟವಾಗಿದೆ.

ನೊರೆಂಟು ಲೆಕ್ಕಾಚಾರದ ಬಳಿಕ ರಾಜ್ಯದಲ್ಲಿ ಚುನಾವಣೆ ಮುಗಿದು ಆರು ತಿಂಗಳು ಕಳೆದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಘೋಷಿಸಿದೆ. ಇದರ ಬೆನ್ನಲ್ಲೇ ರಾಜ್ಯದ ಉಭಯ ಸದನಗಳಲ್ಲಿ ಕಾಂಗ್ರೆಸ್ ನ ಆಟಾಟೋಪವನ್ನು ಎದುರಿಸುವ ನಾಯಕ ಯಾರು ಬಿಜೆಪಿಯಿಂದ ? ಎಂಬ ಪ್ರಶ್ನೆ ಇನ್ನೂ ಪ್ರಶ್ನೆಯಾಗೇ ಉಳಿದಿದೆ.

MLA Sunil Kumar will Leader of Opposition BJP has given good news to the backward class
Image Credit to Original Source

ಬಿ.ವೈ.ವಿಜಯೇಂದ್ರ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನವೆಂಬರ್ 17 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಖಾಸಗಿ ಹೊಟೆಲ್ ನಲ್ಲಿ ನಡೆಯಲಿರೋ ಈ ಸಭೆಯಲ್ಲಿ ಶಾಸಕರ ಅಭಿಪ್ರಾಯ ಪಡೆದು ವಿರೋಧ ಪಕ್ಷದ ನಾಯಕನ ಆಯ್ಕೆ ಬಹುತೇಕ ಅಂತಿಮಗೊಳ್ಳಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.

ಇದನ್ನೂ ಓದಿ : ಬಿಜೆಪಿಗೆ ಅನಿವಾರ್ಯವಾದ್ರಾ ಬಿವೈ ವಿಜಯೇಂದ್ರ ! ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ BJP ಹೈಕಮಾಂಡ್

ಈ ಮಧ್ಯೆ ಲಿಂಗಾಯತ, ವೀರಶೈವ ಸಮುದಾಯಕ್ಕೆ ಸೇರಿದ ಬಿ.ವೈ.ವಿಜಯೇಂದ್ರ ಗೆ ರಾಜ್ಯಾಧ್ಯಕ್ಷ ಸ್ಥಾನ ಲಭ್ಯವಾಗಿರೋದರಿಂದ ರಾಜ್ಯದ ಇನ್ನೊಂದು ಪ್ರಬಲ ವರ್ಗವಾಗಿರೋ ಒಕ್ಕಲಿಗ ಸಮುದಾಯದ ಶಾಸಕರೊಬ್ಬರಿಗೆ ವಿಪಕ್ಷ ನಾಯಕ ಸ್ಥಾನ ಒಲಿದು ಬರಲಿದೆ ಎಂದು ನೀರಿಕ್ಷಿಸಲಾಗಿತ್ತು. ಅಷ್ಟೇ ಅಲ್ಲ ಒಕ್ಕಲಿಗ ನಾಯಕರ ಪೈಕಿ ಪ್ರಭಾವ ಉಳಿಸಿಕೊಂಡಿರೋ ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥ್ ನಾರಾಯಣ ಅಥವಾ ಪದ್ಮನಾಭ ನಗರದ ಶಾಸಕ ಆರ್.ಅಶೋಕ್ ಗೆ ಸ್ಥಾನ ನೀಡಬಹುದೆಂಬ ನೀರಿಕ್ಷೆ ಇತ್ತು.

ಆದರೆ ಸದ್ಯದ ರಾಜಕೀಯ ಸ್ಥಿತಿಯನ್ನು ಅವಲೋಕಿಸಿದ ಬಿಜೆಪಿ ಹೈಕಮಾಂಡ್ ಒಕ್ಕಲಿಗ ಪ್ರಭಾವಿ ಮುಖಂಡ ಎಚ್‌ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪಕ್ಷ ಬಿಜೆಪಿಗೆ ಬೆಂಬಲ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಬದಲು ಹಿಂದುಳಿದ ವರ್ಗದ ನಾಯಕರಿಗೆ ಮಣೆ ಹಾಕಲು ನಿರ್ಧರಿಸಿದೆ. ಇದುವರೆಗೂ ಹಲವು ಭಾರಿ ಒಕ್ಕಲಿಗ ನಾಯಕರಿಗೆ ಸ್ಥಾನಮಾನ ನೀಡಲಾಗಿದೆ. ಅಲ್ಲದೇ ಈಗಲೂ ಕೂಡ ಒಕ್ಕಲಿಗ ಸಮುದಾಯಕ್ಕೆ ವಿರೋಧ ಪಕ್ಷದ ಸಲ ನಾಯಕರ ಸ್ಥಾನ ನೀಡಲು ಅವಕಾಶವಿದೆ.

MLA Sunil Kumar will Leader of Opposition BJP has given good news to the backward class
Image Credit to Original Source

ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ಧರಾಮಯ್ಯನವರು ಹಿಂದುಳಿದ ವರ್ಗಕ್ಕೆ ಸೇರಿದವರು. ಹೀಗಾಗಿ ಸಿದ್ಧರಾಮಯ್ಯನವರಿಗೆ ಎದುರಾಳಿಯಾಗಿ ಅವರದ್ದೇ ಸಮುದಾಯದ ನಾಯಕರನ್ನು ಬಿಜೆಪಿ ಯಿಂದಲೂ ಆಯ್ಕೆ‌ ಮಾಡಿದರೇ ಬಿಜೆಪಿ ಹಿಂದುಳಿದ ವರ್ಗಗಳನ್ನು ಕಡೆಗಣಿಸಿದೆ ಎಂಬ ಹೇಳಿಕೆಯಿಂದ ಬಿಡುಗಡೆ ಪಡೆಯಬಹುದು ಎಂಬುದು ಹೈಕಮಾಂಡ್ ಲೆಕ್ಕಾಚಾರ.

ಇದನ್ನೂ ಓದಿ : ಪುಷ್ಪಾ, ರೂಪಾ, ವೀಣಾ, ಸೌಮ್ಯ, ರಮ್ಯ, ಕುಸುಮಾ : ಕಾಂಗ್ರೆಸ್ ಲೋಕಸಭಾ ಟಿಕೇಟ್ ಗೆ 15 ಮಹಿಳಾ ಮಣಿಗಳ ಲಾಬಿ

ಹೀಗಾಗಿ ಬಿಜೆಪಿಯಲ್ಲಿ ಉತ್ತಮ‌ಸಂಘಟಕರಾಗಿ ಗುರುತಿಸಿಕೊಂಡಿರುವ ಕಾರ್ಕಳ‌ಶಾಸಕ ಸುನೀಲ್ ಕುಮಾರ್ ಅವರನ್ನೇ ಬಿಜೆಪಿ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಿದೆ ಎನ್ನಲಾಗ್ತಿದೆ. ಈಗಾಗಲೇ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಕೂಗು ಧ್ವನಿ ಪಡೆದು ಕೊಳ್ಳುತ್ತಿದೆ. ಪಕ್ಷಗಳು ಕೇವಲ ಮತಕ್ಕಾಗಿ ಹಿಂದುಳಿದ ವರ್ಗಗಳನ್ನು ಒಲೈಸುತ್ತವೆ‌.

ಆದರೆ ಹುದ್ದೆ ಹಾಗೆ ಸ್ಥಾನಮಾನದ ಪ್ರಶ್ನೆ ಬಂದಾಗ ಮೇಲ್ವರ್ಗದವರಿಗೆ ಮಾತ್ರ ಹುದ್ದೆಗಳನ್ನು ನೀಡುತ್ತದೆ ಎಂಬ ಆರೋಪವಿದೆ. ಈ ಎಲ್ಲ ಆರೋಪಗಳಿಗೆ ಬಿಜೆಪಿಯೂ ಗುರಿಯಾಗಿದೆ. ಹೀಗಾಗಿ ಹಿಂದುಳಿದ ವರ್ಗದ ಸಿದ್ಧರಾಮಯ್ಯನವರಿಗೆ ಟಕ್ಕರ್ ಕೊಡಲು ಸುನೀಲ್ ಕುಮಾರ್ ರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಿದೆ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಬರ್ತಿಲ್ಲ ಯಾಕೆ ? ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಅಸಲಿ ಕಾರಣ

ಆದರೆ ಸಿದ್ಧರಾಮಯ್ಯನವರನ್ನು ಎದುರಿಸುವುದು ಸುಲಭದ ಮಾತಲ್ಲ. ಸುನೀಲ್ ಕುಮಾರ್ ಮೇಲೆ‌ ಇತ್ತೀಚಿಗಷ್ಟೇ ಪರಶುರಾಮ್ ಥೀಮ್ ಪಾರ್ಕ್ ಹೆಸರಿನಲ್ಲಿ ಗೋಲ್ ಮಾಲ್‌ ಮಾಡಿದ ಆರೋಪ ಕೇಳಿಬಂದಿದೆ. ಹೀಗಾಗಿ ಸಿದ್ಧು ಎದುರಿಸುವ ಮುನ್ನ ಅವರ ಹಗರಣದ ಆರೋಪವೇ ಅವರನ್ನು ಕಾಡೋ ಸಾಧ್ಯತೆ ದಟ್ಟವಾಗಿದೆ.

MLA Sunil Kumar will Leader of Opposition: BJP has given good news to the backward class

Comments are closed.