ಮಲ್ಪೆ ಬೀಚ್‌ನಲ್ಲಿ ಪ್ಯಾರಾಸೈಲಿಂಗ್ ವೇಳೆ ಅವಘಡ, ಯುವಕನಿಗೆ ಗಾಯ : ತಪ್ಪಿದ ಬಾರೀ ದುರಂತ

parasailing accident in Malpe :  ಪ್ರವಾಸಿಗರ ನೆಚ್ಚಿನ ತಾಣವಾಗಬೇಕಿದ್ದ ಉಡುಪಿಯ ಪ್ರಸಿದ್ದ ಸಮುದ್ರ ತೀರ ಎನಿಸಿಕೊಂಡಿರುವ ಮಲ್ಪೆ ಬೀಚ್‌ ಪ್ರವಾಸಿಗರಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಇಂದು ಪ್ಯಾರಾಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗನೋರ್ವ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಘಟನೆ ನಡೆದಿದೆ.

parasailing accident in Malpe :  ಪ್ರವಾಸಿಗರ ನೆಚ್ಚಿನ ತಾಣವಾಗಬೇಕಿದ್ದ ಉಡುಪಿಯ ಪ್ರಸಿದ್ದ ಸಮುದ್ರ ತೀರ ಎನಿಸಿಕೊಂಡಿರುವ ಮಲ್ಪೆ ಬೀಚ್‌ ಪ್ರವಾಸಿಗರಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಇಂದು ಪ್ಯಾರಾಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗನೋರ್ವ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಸಾರ್ವಜನಿಕರು ಮಲ್ಪೆ ಬೀಚ್‌ ಅಭಿವೃದ್ದಿ ಸಮಿತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಮೂಲದ ಇಕ್ಷ್ಯಾನ್ ಚೌದರಿ ಎಂಬವರೇ ಗಾಯಗೊಂಡವರು. ಇಂದು ಪ್ಯಾರಾಸೈಲಿಂಗ್ ಮಾಡುತ್ತಿದ್ದ ವೇಳೆಯಲ್ಲಿ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಚೌದರಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ಯಾರಾಸೈಲಿಂಗ್ ಮಾಡುವ ವೇಳೆಯಲ್ಲಿ ಟೆಂಡರ್‌ದಾರರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದೇ ಕಾರಣದಿಂದಲೇ ಯುವಕ ಗಾಯಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆಯ ಬೆನ್ನಲ್ಲೇ ಇದೀಗ ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ : ಸೂರ್ಯ ಮುಳುಗದ ವಿಶ್ವದ 8 ದೇಶಗಳು ! ಇಲ್ಲಿ ದಿನದ 24 ಗಂಟೆಯೂ ಸೂರ್ಯನ ಬೆಳಕು

ಮಲ್ಪೆ ಬೀಚ್‌ನಲ್ಲಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು. ಮಲ್ಪೆ ಬೀಚ್‌ನಲ್ಲಿ ಅಡ್ವೇಂಚರ್‌ ಚಟುವಟಿಕೆ, ಮಲ್ಪೆ ಬೀಚ್‌ಗೆ ದೋಣಿ ವಿಹಾರ ಆರಂಭವಾಗಿತ್ತು. ಆದರೆ ಈ ಕುರಿತು ಟೆಂಡರ್‌ ಪಡೆದಿರುವವರು ಕೇವಲ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

Paragliding accident in Malpe, youth injured admited Hospital in Udupi
Image Credit to Original Source

ಪ್ರವಾಸಿಗರಿಗೆ ರಕ್ಷಣೆ ನೀಡದೇ ಇರುವ ಕುರಿತು ಮಲ್ಪೆ ಅಭಿವೃದ್ದಿ ಸಮಿತಿಯ ಸಭೆಯಲ್ಲಿ ಖುದ್ದು ಶಾಸಕ ಯಶಪಾಲ್‌ ಸುವರ್ಣ ಅವರೇ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು. ಆದರೂ ಗುತ್ತಿದೆಗಾರರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದೇ ಕಾರಣದಿಂದಲೇ ಇಂದು ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

ಜಿಲ್ಲಾಧಿಕಾರಿಗಳ ಸೂಚನೆಗೂ ಡೋಂಟ್‌ ಕೇರ್‌

ಮಲ್ಪೆ ಕಡಲತೀರದಲ್ಲಿ ಪ್ರವಾಸಿಗರಿಗೆ ಆಧುನಿಕ ಮೂಲಸೌಕರ್ಯದ ಜೊತೆಗೆ ಸುರಕ್ಷತೆಯನ್ನು ಒದಗಿಸಬೇಕು. ಅಲ್ಲದೇ ಸೈಂಟ್‌ ಮೇರಿಸ್‌ ದ್ವೀಪ ಹಾಗೂ ಮಲ್ಪೆ ಬೀಚ್‌ನಲ್ಲಿ ಸುರಕ್ಷತಾ ಫಲಕಗಳನ್ನು ಅಳವಡಿಸುವಂತೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಸೂಚನೆಯನ್ನು ನೀಡಿದ್ದರು.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಬರ್ತಿಲ್ಲ ಯಾಕೆ ? ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಅಸಲಿ ಕಾರಣ

ಸೈಂಟ್‌ ದ್ವೀಪಕ್ಕೆ ಲೈಫ್‌ ಜಾಕೇಟ್‌ ನೀಡದೇ ಪ್ರವಾಸಿಗರನ್ನು ಕರೆದೊಯ್ಯುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದು, ಕೂಡಲೇ ಗುತ್ತಿಗೆದಾರರಿಗೆ ನೋಟಿಸ್‌ ನೀಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದರು. ಜಿಲ್ಲಾಧಿಕಾರಿಗಳು ಸೂಚನೆ ನೀಡಿದ ಒಂದು ದಿನದಲ್ಲೇ ಇದೀಗ ಮಲ್ಪೆ ಬೀಚ್‌ನಲ್ಲಿ ಅನಾಹುತ ಸಂಭವಿಸಿದೆ.

Paragliding accident in Malpe, youth injured admited Hospital in Udupi
Image Credit to Original Source

ಮಲ್ಪೆ ಬೀಚ್ ಅನ್ನು ಪ್ರವಾಸೋದ್ಯಮದ ದೃಷ್ಟಿಯಲ್ಲಿ ಅಭಿವೃದ್ದಿ ಪಡಿಸುವ ಸಲುವಾಗಿ ಮಲ್ಪೆ ಬೀಚ್‌ ಅಭಿವೃದ್ದಿ ಸಮಿತಿಯನ್ನು ಆರಂಭಿಸಲಾಗಿತ್ತು. ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಆಧ್ಯತೆ ನೀಡುವುದು ಮುಖ್ಯ ಉದ್ದೇಶವಾಗಿತ್ತು. ಆದ್ರೆ ಇದೀಗ ಗುತ್ತಿಗೆದಾರರು ಕೇವಲ ಹಣಗಳಿಕೆಯನ್ನಷ್ಟೇ ಉದ್ದೇಶವನ್ನಾಗಿಸಿ ಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಟೆಂಡರ್‌ ರದ್ದು ಮಾಡಿ : ಸಾರ್ವಜನಿಕ ಆಗ್ರಹ

ಮಲ್ಪೆ ಬೀಚ್‌ಗೆ ವರ್ಷಂಪ್ರತಿ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರಿಂದ ಪಾರ್ಕಿಂಗ್‌, ಸಾಹಸ ಕ್ರೀಡೆ, ಬೋಟಿಂಗ್ ಚಟುವಟಿಕೆಗಳಿಂದ ಹಣ ಸಂಗ್ರಹವಾಗುತ್ತಿದೆ. ಆದರೆ ಗುತ್ತಿಗೆದಾರರು ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುತ್ತಿಲ್ಲ. ಬೋಟಿಂಗ್‌ ವೇಳೆಯಲ್ಲಿ ದೋಣಿಯ ಸಾಮರ್ಥ್ಯಕ್ಕಿಂತ ಅಧಿಕ ಜನರನ್ನು ಹತ್ತಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವಿದೆ.

ಇದನ್ನೂ ಓದಿ : ಯಕ್ಷಗಾನ ಲೋಕಕ್ಕೆ ಮಕ್ಕೆಕಟ್ಟು ಮೇಳ ಎಂಟ್ರಿ : ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಗೆ ಆರೂಢ ಪ್ರಶ್ನೆ !

ಅಲ್ಲದೇ ಪ್ಯಾರಾಸೈಲಿಂಗ್  ವೇಳೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಅನ್ನೋ ಆರೋಪವೂ ಕೇಳಿಬರುತ್ತಿದೆ. ಹೀಗಾಗಿ ಜಿಲ್ಲಾಡಳಿತ ನೀಡಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಇರುವ ಗುತ್ತಿಗೆದಾರರ ಟೆಂಡರ್‌ ರದ್ದು ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

parasailing accident in Malpe, youth injured admited Hospital in Udupi

Comments are closed.