ರಾಜೀವ್‌ ಗಾಂಧಿ ಪುಣ್ಯಸ್ಮರಣೆ : ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಗೌರವ ನಮನ

ಬೆಂಗಳೂರು : ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ (Rajiv Gandhi Remembrance Day) ಮರಣ ಹೊಂದಿದ ದಿನವಾದ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಹಾಕುವ ಮೂಲಕ ಗೌರವ ನಮನವನ್ನು ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌, ಸಚಿವರಾದ ಎಂ.ಬಿ ಪಾಟೀಲ್‌, ಸತೀಶ್‌ ಜಾರಕಿಹೊಳಿ ಹಾಗೂ ಇತರ ನಾಯಕರು ಭಾಗವಹಿಸಿದ್ದರು.

ಆಗಸ್ಟ್ 20, 1944ರಲ್ಲಿ ರಾಜೀವ್ ಗಾಂಧಿ ಜನಿಸಿದ್ದರು. ರಾಜೀವ್‌ ಗಾಂಧಿ ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ರಾಜೀವ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ರಾಹುಲ್ ಮತ್ತು ಪ್ರಿಯಾಂಕ ಇಬ್ಬರು ಮಕ್ಕಳಾದರು. ಆರಂಭಿಕ ದಿನಗಳಲ್ಲಿ ರಾಜೀವ್‌ ಗಾಂಧಿ ಅವರು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ. ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ಸೋಲಿಸಿದ್ದಾರೆ.

ಇದನ್ನೂ ಓದಿ : Big Breaking : 2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ

ಇದನ್ನೂ ಓದಿ : ರಾಷ್ಟ್ರೀಯ ಡೆಂಗ್ಯೂ ದಿನ 2023: ಸೊಳ್ಳೆಯಿಂದ ಹರಡುವ ರೋಗ ತಡೆಗಟ್ಟುವಿಕೆ ಹೇಗೆ ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (40 ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. 1984 ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (404 ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಸದಾ ಮೂಂಚೂಣಿಯಲ್ಲಿದ್ದರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು. ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ರಾಜೀವ್‌ ಗಾಂಧಿ ಅವರ ದೇಹವು ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು.

Rajiv Gandhi Remembrance Day: CM Siddaramaiah pays tribute at KPCC office

Comments are closed.