ಭಾನುವಾರ, ಏಪ್ರಿಲ್ 27, 2025
Homekarnatakaರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಮಾಸ್ಟರ್ ಪ್ಲ್ಯಾನ್ : ಸ್ವತಃ ಕಣಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡರು

ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಮಾಸ್ಟರ್ ಪ್ಲ್ಯಾನ್ : ಸ್ವತಃ ಕಣಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡರು

- Advertisement -

ಬೆಂಗಳೂರು : ರಾಜಕಾರಣದಲ್ಲೇ‌ ಪಳಗಿದವರು ಮಾಜಿ ಪ್ರಧಾನಿ ದೇವೇಗೌಡರು. ಅವರಿಗೆ ಗೊತ್ತಿಲ್ಲದ ರಾಜಕೀಯ ತಂತ್ರಗಳೇ ಇಲ್ಲ. ಸದ್ಯ ರಾಜ್ಯಸಭಾ ಚುನಾವಣೆಯ ಸಿದ್ಧತೆಯಲ್ಲಿರೋ ದೇವೇಗೌಡರು ಮತಗಳ ಕೊರತೆ ಇದ್ದರೂ ತಮ್ಮ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರನ್ನು ಗೆಲ್ಲಿಸಲೇ ಬೇಕೆಂದು ಪಣತೊಟ್ಟಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಪ್ರಮುಖವಾಗಿ ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡೋ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ .‌ ಹೀಗಾಗಿ ಸ್ವತಃ ದೇವೇಗೌಡರೇ (HD Devegowda Master Plan) ಕಣಕ್ಕಿಳಿದಿದ್ದು ಶಾಸಕರಿಗೆ ಪೋನ್ ಮಾಡಿ ಮಾತನಾಡಿ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಮಾಡದಂತೆ ಮನವಿ‌ಮಾಡ್ತಿದ್ದಾರಂತೆ‌

ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆಯ ಕಣ ರಂಗೇರಿದೆ. ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ಸರ್ಕಸ್ ನಡೆಸಿದ್ದರೇ, ಇದ್ದೊಬ್ಬ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್ ಕೂಡ ಸಾಕಷ್ಟು ಸಿದ್ಧತೆ ನಡೆಸಿದೆ. ಜೆಡಿಎಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳಿವೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪಿಎಂ ಹೆಚ್ ಡಿ ದೇವೇಗೌಡರಿಗೆ ಆತಂಕ ಎದುರಾಗಿದೆ. ಹೀಗಾಗಿ ಅಭ್ಯರ್ಥಿ ಗೆಲ್ಲದಿದ್ದರೂ ಪರವಾಗಿಲ್ಲ ಅಡ್ಡ ಮತದಾನ ಆಗಬಾರದು.ಅಡ್ಡ ಮತದಾನವದರೆ ಪಕ್ಷದ ಇಮೇಜಿಗೆ ಡ್ಯಾಮೇಜ್ ಆಗಲಿದೆ ಎಂದು ದೇವೆಗೌಡರು ರಣತಂತ್ರ ರೂಪಿಸಿದ್ದಾರೆ.

ವಿಪಕ್ಷ‍ ನಾಯಕ ಸಿದ್ದರಾಮಯ್ಯ ಆತ್ಮಸಾಕ್ಷಿ ಮತದ ಹೇಳಿಕೆ. ನಾವು ಹೇಗೋ ಗೆಲ್ತೀವಿ ಅನ್ನೋ ಸಿಎಂ ಮಾತು. ಇದರಿಂದ ಅಲರ್ಟ್ ಆಗಿರೋ ಮಾಜಿ ಪ್ರಧಾನಿ ದೇವೇಗೌಡರು ಅಡ್ಡ ಮತದಾನ ಅಥವಾ ಗೈರಾಗುವುದನ್ನು ಅಥವಾ ಮತಗಳು ಇನ್ ವ್ಯಾಲಿಡ್ ಆಗುವುದನ್ನು ತಪ್ಪಿಸಲು ಹೆಚ್ ಡಿ ಡಿ ಸ್ವತಃ ಜೆಡಿಎಸ್ ಶಾಸಕರಿಗೆ ಕರೆ ಮಾಡುತ್ತಿದ್ದಾರಂತೆ. ಅಡ್ಡ ಮತದಾನದ ಅನುಮಾನ ಇರೋ ಶಾಸಕರಿಗೆ ಹೆಚ್ಚು ಕರೆ ಮಾಡ್ತಿರೋ ದೇವೇಗೌಡರು, ಅಡ್ಡ ಮತದಾನ ಮಾಡದಂತೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.

ಸಣ್ಣಪುಟ್ಟ ಗೊಂದಲಗಳು, ಅಸಮಾಧಾನಗಳು ಸಹಜ ಹಾಗಂತ ಪಕ್ಷಕ್ಕೆ ಅನ್ಯಾಯ ಮಾಡಬೇಡಿ.ಮತದಾರರು ಹಾಗೂ ರಾಜ್ಯದ ಜನರ ಮುಂದೆ ವಿಲನ್ ಗಳಾಗಬೇಡಿ. ನನ್ನ ಮರ್ಯಾದೆ ಉಳಿಸಿ ಎಂದು ಹೆಚ್ ಡಿ ದೇವೇಗೌಡ್ರು ಮನವಿ ಮಾಡ್ತಿದ್ದಾರಂತೆ. ಇನ್ನು ದೇವೇಗೌಡರು ಈ ದಾಳದಿಂದ ಬಿಜೆಪಿ ಕಾಂಗ್ರೆಸ್ ನತ್ತ ಒಲವು ತೋರಿದ್ದ ಹಲವು ಜೆಡಿಎಸ್ ನಾಯಕರಿಗೆ ಮುಜುಗರವಾಗಿದ್ದು, ಪಕ್ಷ ಬಿಡೋ ಸಮಯದಲ್ಲಿ ಕೆಟ್ಟ ಹೆಸರು ಯಾಕೆ ಕೆಡಿಸಿಕೊಳ್ಳಬೇಕು ಎಂಬ ಚಿಂತನೆಗೆ ಬಿದ್ದಿದ್ದಾರಂತೆ.

ಅಲ್ಲದೇ ಕುದುರೆ ವ್ಯಾಪಾರ ಆದೆವೆಂಬ ಅಪವಾದ ಬೇಕಾ ಎಂದು ಯೋಚಿಸುತ್ತಿದ್ದಾರಂತೆ. ಇನ್ನೊಂದೆಡೆ ಇಳಿ ವಯಸ್ಸಿನ ದೇವೇಗೌಡರು ಕಾಲ್ ಮಾಡಿ ಮನವಿ ಮಾಡಿ ಕೊಳ್ಳುತ್ತಿದ್ದಾರೆ. ದೇವೇಗೌಡರಿಗೆ ನೋವು ಉಂಟು ಮಾಡೋಕೆ ಮನಸು ಬರ್ತಿಲ್ಲ ಎಂದು ಬಿಜೆಪಿ ಪರ ಒಲವು ತೋರಿದ್ದ ಶಾಸಕರು ಈಗ ಸೈಲೆಂಟ್ ಆಗ್ತಿದ್ದಾರಂತೆ. ಇದರಿಂದ
ಇದು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಖುಷಿಯಲ್ಲಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ : Health minister Sudhakar : ಪೋನ್ ಎತ್ತಲ್ಲ, ದೂರಿಗೂ ಸ್ಪಂದಿಸಲ್ಲ: ಡಾ.ಸುಧಾಕರ್ ವಿರುದ್ಧ ತಿರುಗಿ ಬಿದ್ದ ಸ್ವಪಕ್ಷಿಯರು

ಇದನ್ನೂ ಓದಿ : Rohit chakratirtha : ದ್ವಿತೀಯ PUC ಪಠ್ಯ ಪರಿಷ್ಕರಣಾ ಸಮಿತಿಯಿಂದ ರೋಹಿತ್​ ಚಕ್ರತೀರ್ಥಗೆ ಕೊಕ್​

Rajya Sabha Election HD Devegowda Master Plan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular