Heavy Rainfall alert : ಕರ್ನಾಟಕ, ಕೇರಳದಲ್ಲಿ ಜೂನ್ 11 ರವರೆಗೆ ಭಾರೀ ಮಳೆ

ಬೆಂಗಳೂರು : ಪಶ್ಚಿಮ ಮಾರುತಗಳ ಪರಿಣಾಮದಿಂದಾಗಿ ದಕ್ಷಿಣ ಭಾರತದಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆ ಸುರಿಯುವ (Heavy Rainfall alert) ಸಾಧ್ಯತೆಯಿದೆ. ಅದ್ರಲ್ಲೂ ಜೂನ್ 11 ರವರೆಗೆ ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಮಳೆ ಕೆಲವು ದಿನಗಳಿಂದಲೂ ಬಿಡುವು ಪಡೆದಿದೆ. ಆದರೆ ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಉತ್ತಮ ಮಳೆ ಸುರಿದಿದೆ. ಇದೀಗ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಕೇರಳ ಹಾಗೂ ಕರ್ನಾಟಕಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅದ್ರಲ್ಲೂ ಎರಡು ರಾಜ್ಯಗಳಲ್ಲಿ ದಿನಕ್ಕೆ 50 ಮಿಮೀ ಮಳೆ ಸುರಿಯಲಿದೆ ಎಂದು ಹವಾಮಾನ ಡಾಟ್ ಕಾಮ್ ಹವಾಮಾನ ತಜ್ಞರು ಸೂಚಿಸಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶದಲ್ಲಿ ಚದುರಿದ ತುಂತುರು ಮಳೆ ಸುರಿಯಲಿದೆ. ಆದರೆ ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಜೂನ್ 9 ರಿಂದ 11ರ ವರೆಗೆ ಕರ್ನಾಟಕ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ತಗ್ಗು ಪ್ರದೇಶದಲ್ಲಿನ ಜನರು ಎಚ್ಚರದಿಂದ ಇರುವಂತೆಯೂ ಸೂಚಿಸಲಾಗಿದೆ. ಮುಂಗಾರು ಆರಂಭದಲ್ಲಿ ಸಾಮಾನ್ಯವಾಗಿ ಹಲವು ಭಾಗಗಳಲ್ಲಿ ಸರಾಸರಿ 6 ರಿಂದ 8 ಸೆಂ.ಮೀ ಮಳೆಯಾಗುತ್ತದೆ. ಆದರೆ ಈ ಬಾರಿ ಕಳೆದ ಶುಕ್ರವಾರದಂದು ಅಲಪ್ಪುಳ ಜಿಲ್ಲೆಯ ಮಾನ್‌ಕೊಂಪುನಲ್ಲಿ ಗರಿಷ್ಠ 5 ಸೆಂ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಜೂನ್ 2022 ರ ಮೊದಲ ಆರು ದಿನಗಳಲ್ಲಿ, ಕೇರಳವು ಅದರ ಆರಂಭಿಕ ವಾರದ ಸರಾಸರಿ 120.6 ಮಿಮೀಗೆ ಹೋಲಿಸಿದರೆ 62.8 ಮಿಮೀ ಮಳೆಯನ್ನು 48% ಮಳೆ ಕೊರತೆ ದಾಖಲಾಗಿದೆ. ತಮಿಳುನಾಡು (17.9 ಮಿಮೀ) 21% ‘ಹೆಚ್ಚುವರಿ’ ಮಳೆ ಸುರಿದಿದೆ. ಆದರೆ ಕರ್ನಾಟಕ (34.6 ಮಿಮೀ) ಮತ್ತು ಆಂಧ್ರ (19.2 ಮಿಮೀ) ಇದುವರೆಗೆ ಮಳೆ ದಾಖಲಾಗಿದೆ. ಆದರೆ ಈ ಬಾರಿ ಮಳೆಯ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Health minister Sudhakar : ಪೋನ್ ಎತ್ತಲ್ಲ, ದೂರಿಗೂ ಸ್ಪಂದಿಸಲ್ಲ: ಡಾ.ಸುಧಾಕರ್ ವಿರುದ್ಧ ತಿರುಗಿ ಬಿದ್ದ ಸ್ವಪಕ್ಷಿಯರು

ಇದನ್ನೂ ಓದಿ : ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿ: ಬೀಸಣಿಗೆಯಲ್ಲಿ ಗಾಳಿ ಬೀಸಿದ ವಿದ್ಯಾರ್ಥಿನಿ

Heavy Rainfall alert in Karnataka and Kerala until June 11

Comments are closed.