Health minister Sudhakar : ಪೋನ್ ಎತ್ತಲ್ಲ, ದೂರಿಗೂ ಸ್ಪಂದಿಸಲ್ಲ: ಡಾ.ಸುಧಾಕರ್ ವಿರುದ್ಧ ತಿರುಗಿ ಬಿದ್ದ ಸ್ವಪಕ್ಷಿಯರು

ಬೆಂಗಳೂರು : ಕೊರೋನಾ ಸಂದರ್ಭದಲ್ಲಿ ರಾಜ್ಯದ ಕೊರೋನಾ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಸಚಿವ ಡಾ.ಸುಧಾಕರ್ (Health minister Sudhakar ) ಅದ್ಯಾಕೋ ಸ್ವಪಕ್ಷಿಯರಿಗೇ ವಿಲನ್ ಆಗಿದ್ದಾರೆ. ಹಿಂದಿನಿಂದಲೂ ಡಾ.ಸುಧಾಕರ್ ವಿರುದ್ಧ ಕೇಳಿ ಬಂದಿದ್ದ ಅಸಮಧಾನಕ್ಕೆ ಈಗ ಮತ್ತಷ್ಟು ಬಲಬಂದಿದ್ದು, ಡಾ. ಸುಧಾಕರ್ ವಿರುದ್ಧ ಬಿಜೆಪಿಯ ಹಾಲಿ ಮಾಜಿ ನಾಯಕರುಗಳೇ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹೌದು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದು ತಮ್ಮ ಸ್ಥಾನಮಾನಕ್ಕೆ ಧಕ್ಕೆಯಾಗದಂತೆ ಸಚಿವರಾಗಿಯೇ ಮುಂದುವರೆಯುತ್ತಿರುವ ಡಾ.ಸುಧಾಕರ್ ಸಿಎಂ ಬೊಮ್ಮಾಯಿ ಸೇರಿದಂತೆ ರಾಜ್ಯ ಸಚಿವ ಸಂಪುಟದ ಬಹುತೇಕರಿಗೆ ಆಪ್ತರು. ಆದರೆ ಈಗ ಸುಧಾಕರ್ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಸನಗೌಡ್ ಪಾಟೀಲ್ ಯತ್ನಾಳ ಸಚಿವ ಸಂಪುಟದ ಕೆಲ ಸಚಿವರನ್ನು ಮಾತನಾಡಿಸುವುದೇ ಕಷ್ಟವಿದೆ ಎಂದು ಕಿಡಿ ಕಾರಿದ್ದರು. ಬಳಿಕ ಮಾತನಾಡಿದ್ದ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೇರಾನೇರ ಡಾ.ಸು್ಧಾಕರ್‌ಮೇಲೆ ಹರಿಹಾಯ್ದಿದ್ದರು.

ಈಗ ಈ ಸಾಲಿಗೆ ಮಾಜಿ ವಿಧಾನಪರಿಷತ್ ಸದಸ್ಯ ಆಯನೂರು ಹೊಸ ಸೇರ್ಪಡೆ. ಆಯನೂರು ಮಂಜುನಾಥ್ ಸುಧಾಕರ್ ಕಾರ್ಯವೈಖರಿಯ ಬಗ್ಗೇ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸುಧಾಕರ್ ಎಂಥ ಸಂದರ್ಭದಲ್ಲೂ ಕಾಂಗ್ರೆಸ್ಪೋನ್ ರಿಸಿವ್ ಮಾಡಲ್ಲ. ದಪ್ಪ ಚರ್ಮದ ವ್ಯಕ್ತಿ. ಇಂಥವರನ್ನು ಸಚಿವರನ್ನಾಗಿ ಮಾಡಿದ್ದಕ್ಕೇ ನಾವೇ ಪಶ್ಚಾತಾಪ ಪಡಬೇಕು ಎಂಬುರ್ಥದಲ್ಲಿ ಮಾತನಾಡಿದ್ದಾರೆ. ಈ ಹಿಂದೆ ಸಚಿವ ಸಂಪುಟ ಸಭೆಯಲ್ಲೂ ನಾರಾಯಣಗೌಡ, ಎಂಟಿಬಿ , ಅಶ್ವಥ್ ನಾರಾಯಣ ಸುಧಾಕರ್ ವಿರುದ್ಧ ಸಿಡಿದೆದ್ದಿದ್ದರು.

ಹೀಗಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ನಾಯಕರೆಲ್ಲ ಡಾ.ಸುಧಾಕರ್ ವಿರುದ್ದ ತಿರುಗಿ ಬೀಳೋದು ಖಚಿತ ಎನ್ನಲಾಗ್ತಿದೆ. ಕೇವಲ ಅಯನೂರು,ಯತ್ನಾಳ್, ರೇಣುಕಾಚಾರ್ಯ ಮಾತ್ರವಲ್ಲ ಬಿಜೆಪಿಯ ಬಹುತೇಕ ಶಾಸಕರ ಸಮಸ್ಯೆ ಇದಾಗಿದ್ದು, ಡಾ.ಸುಧಾಕರ್ ಆರೋಗ್ಯ ಸಚಿವರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಪೋನ್ ಸ್ವೀಕರಿಸುವುದಿಲ್ಲ ಎಂದು ಬಿಜೆಪಿ ನಾಯಕರು ಹೈಕಮಾಂಡ್ ಗೆ ದೂರು ಸಲ್ಲಿಸಲು ಸಿದ್ಧವಾಗ್ತಿದ್ದಾರೆ.

ಬಿಜೆಪಿಯಲ್ಲಿ ಇದೇ ಮೊದಲ ಬಾರಿಗೆ ಸಚಿವರೊಬ್ಬರ ಬಗ್ಗೆ ಈ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಸಿಎಂಗೆ ಆರೋಗ್ಯ ಸಚಿವರ ಬಗ್ಗೆ ಬರ್ತಿರೋ ಹೇಳಿಕೆಗಳು ಮುಜುಗರ ತಂದಿದ್ದು, ಸಿಎಂ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದುನೋಡಬೇಕಿದೆ.

ಇದನ್ನೂ ಓದಿ : Rajya Sabha elections : ರಾಜಕೀಯ ಗುರು ದೇವೇಗೌಡರಿಗೆ ತಿರುಮಂತ್ರ ಹಾಕಿದ ಸಿದ್ಧರಾಮಯ್ಯ : ಜೆಡಿಎಸ್‌ನ ಕುಪೇಂದ್ರ ರೆಡ್ಡಿಗಿಲ್ಲ ಬೆಂಬಲ

ಇದನ್ನೂ ಓದಿ : Dalit cm in Karnataka : ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಲ್ಲಾ : ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮುಂದಿನ ಸಿಎಂ

BJP Leaders who have turned against health minister Sudhakar

Comments are closed.