Ramya vs DKS : ನಟಿ ರಮ್ಯ ಟ್ವೀಟ್ ಗೆ ಡಿ.ಕೆ.ಶಿವಕುಮಾರ್ ತಿರುಗೇಟು : ರಮ್ಯ ವಿರುದ್ಧ ಟ್ರೋಲ್ ಗೆ ಸೂಚಿಸಿದ ಮಹಾನಾಯಕ

ಬೆಂಗಳೂರು : ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್‌ ನಡುವಿನ ಸಮರದಲ್ಲಿ ಎಂ.ಬಿ.ಪಾಟೀಲ್ ಬೆಂಬಲಕ್ಕೆ ನಿಂತ ಮಾಜಿ ಸಂಸದೆ ಹಾಗೂ ನಟಿ ರಮ್ಯ ಡಿಕೆಶಿ (Ramya vs DKS ) ಬೆಂಬಲಿಗರಿಂದ ಟ್ರೋಲ್ ಗೆ ಗುರಿಯಾಗಿದ್ದಾರಾ ? ಹೌದು ಅಂತಿದ್ದಾರೆ ಸ್ವತಃ ನಟಿ ರಮ್ಯ. ಮಾತ್ರವಲ್ಲ ನನ್ನನ್ನು ಟ್ರೋಲ್ ಮಾಡೋ ಕಷ್ಟ ಬೇಡ ನಾನೇ ಟ್ರೋಲ್ ಅಗ್ತಿನಿ ಎಂದು ಟ್ವೀಟ್ ಮಾಡೋ ಮೂಲಕ ತಿರುಗೇಟು ನೀಡಿದ್ದಾರೆ.

ನಿನ್ನೆ ಬಹಿರಂಗಗೊಂಡ ಎಂ.ಬಿ.ಪಾಟೀಲ್ ಹಾಗೂ ಬಿಜೆಪಿಯ ಅಶ್ವತ್ಥ್ ನಾರಾಯಣ ಭೇಟಿ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವೇಳೆ ಕಾಂಗ್ರೆಸ್ ನಲ್ಲಿ ಎಂಬಿಪಾಟೀಲ್ ಪರ ಮತ್ತು ವಿರುದ್ಧ ಹೇಳಿಕೆಗಳು ಕೇಳಿಬಂದಿದ್ದವು. ಇದೇ ವಿಚಾರಕ್ಕೆ ರಮ್ಯ ಎಂ.ಬಿ.ಪಿ ಪರ ನಿಂತಿದ್ದರು. ಹೌದು ಎಂ.ಬಿ.ಪಾಟೀಲ್ ರನ್ನು ಕಾಂಗ್ರೆಸ್ ನ ಕಟ್ಟಾಳು ಎಂದಿದ್ದ ರಮ್ಯ ಡಿಕೆಶಿ ವರ್ತನೆ ಅಚ್ಚರಿ ತಂದಿದೆ ಎಂದಿದ್ದರು. ಈ ಟ್ವೀಟ್ ಸಖತ್ ವೈರಲ್ ಆಗಿದ್ದು ಮಾತ್ರವಲ್ಲದೇ ಡಿಕೆಶಿಗೆ ಮುಜುಗರ ತಂದಿತ್ತು.

ಇದಾದ ಕೆಲವೇ ಗಂಟೆಗಳಲ್ಲಿ ಡಿಕೆಶಿ ಅವರ ಆಫೀಸಿನಿಂದ ನಟಿ ರಮ್ಯರನ್ನು ಟ್ರೋಲ್ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಡಿಕೆಶಿ ಅಭಿಮಾನಿಗಳಿಗೆ ಸೂಚನೆ ನೀಡಲಾಗಿದೆ ಎನ್ನಲಾಗ್ತಿದೆ. ರಮ್ಯ ಅಂಬರೀಶ್ ಸತ್ತಾಗ ಎಲ್ಲಿದ್ದ್ಯಮ್ಮಾ, ಮಂಡ್ಯದಿಂದ ಜನರಿಗೆ ಸಿಗದೇ ಓಡಿ ಹೋದ ನೀವು ಯಾರಿಗೆ ಬುದ್ಧಿ ಹೇಳುವ ನೈತಿಕತೆ ಇಟ್ಕೊಂಡಿದ್ದೀರಿ ಎಂದೆಲ್ಲ ಪ್ರಶ್ನೆ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಮಂಡ್ಯ ಸೇರಿದಂತೆ ನಾನಾ ವಿಷ್ಯ ಇಟ್ಕೊಂಡು ಎಲ್ಲರೂ ಒಂದೇ ಪ್ರಶ್ನೆಗಳನ್ನು ಹಾಕಿ ರಮ್ಯ ಟ್ವೀಟ್ ಗೆ ಟ್ರೋಲ್‌ಮಾಡ್ತಿದ್ದಾರೆ.

ಇನ್ನೂ ಈ ಪ್ಲ್ಯಾನ್ ಅರಿತ ನಟಿ ರಮ್ಯ ಡಿಕೆಶಿ ಹಾಗೂ ತಂಡಕ್ಕೆ ಸಖತ್ ತಿರುಗೇಟು ನೀಡಿದ್ದಾರೆ . ಡಿಕೆಶಿಯವರನ್ನೇ ಟಾರ್ಗೇಟ್ ಮಾಡಿ ಟ್ವೀಟ್ ಮಾಡಿರೋ ರಮ್ಯ, ನನ್ನನ್ನು ಟ್ರೋಲ್‌ ಮಾಡುವಂತೆ ಕಚೇರಿಯಿಂದ ಸಂದೇಶ ರವಾನೆಯಾಗಿದೆ. ಅವರು ತೊಂದರೆ ತೆಗೆದುಕೊಳ್ಳುವುದು ಬೇಡ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲದೇ ತಮಗೆ ಬಂದಿರೋ ಕಮೆಂಟ್ ಗಳ ಸ್ಕ್ರಿನ್ ಶಾಟ್ ಶೇರ್ ಮಾಡಿದ್ದಾರೆ.

ಒಟ್ಟಿನಲ್ಲಿ ಎಂ.ಬಿ.ಪಾಟೀಲ್ ರನ್ನು ಬೆಂಬಲಿಸೋದರಿಂದ ಆರಂಭವಾದ ರಮ್ಯ ಡಿಕೆಶಿ ಫೈಟ್ ಮತ್ತಷ್ಟು ತೀವ್ರಗೊಳ್ಳೋ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ ಮಾಜಿ ಸಂಸದೆ ರಮ್ಯಾ, ಡಿಕೆಶಿ ವಿರುದ್ಧ ಬಹಿರಂಗ ಸಮರ ಸಾರಿದಂತೆ ಕಂಡು ಬಂದಿದೆ.

ಇದನ್ನೂ ಓದಿ : ದೇಶಭಕ್ತರಿಗೆ ಸಿಹಿಸುದ್ದಿ: ತೆರೆಗೆ ಬರಲಿದೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಸಿನಿಮಾ

ಇದನ್ನೂ ಓದಿ : ಜೆಡಿಎಸ್ ತೊರೆಯೋಕೆ ಮುಂದಾದ ಜೆಡಿಎಸ್‌ ಮಾಜಿ ಶಾಸಕ ವೈ.ಎಸ್.ವಿ. ದತ್ತಾ: ಕಾಂಗ್ರೆಸ್ ಸೇರ್ತೆನೆ ಎಂದ ಆಡಿಯೋ ವೈರಲ್

Ramya vs DKS Tweet Troll war in Karnataka

Comments are closed.