namma clinics : ರಾಜ್ಯ ಸರ್ಕಾರದ ‘ನಮ್ಮ ಕ್ಲಿನಿಕ್’ ಲೋಗೋ ಡಿಸೈನ್​ ಮಾಡಲು ಜನತೆಗೆ ಅವಕಾಶ : ಆಯ್ಕೆಯಾದ ಲೋಗೋ ವಿನ್ಯಾಸಗಾರರಿಗೆ ಸಿಗಲಿದೆ ವಿಶೇಷ ಗೌರವ

ಬೆಂಗಳೂರು : namma clinics : ರಾಜ್ಯದ ಜನತೆಯ ಆರೋಗ್ಯವನ್ನು ಕಾಪಾಡುವ ಸಲುವಾಗಿ ರಾಜ್ಯ ಸರ್ಕಾರವು ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಲೇ ಇದೆ. ಇದೀಗ ರಾಜ್ಯದ ಜನತೆಗೆ ತುರ್ತು ಆರೋಗ್ಯ ಸೇವೆಯನ್ನು ನೀಡುವ ಸಲುವಾಗಿ ಬೊಮ್ಮಾಯಿ ನೇತೃತ್ವದ ಸರ್ಕಾರವು ನಮ್ಮ ಕ್ಲಿನಿಕ್​ ಆರಂಭಗೊಳಿಸಲು ಸಿದ್ಧತೆಯನ್ನು ನಡೆಸುತ್ತಿದೆ. ನಮ್ಮ ಕ್ಲಿನಿಕ್​ ಆರಂಭಕ್ಕೆ ಇದೀಗ ರಾಜ್ಯದ ಜನತೆಯ ಸಹಕಾರವನ್ನು ರಾಜ್ಯ ಸರ್ಕಾರ ಕೋರಿದೆ.

ಹೌದು..! ರಾಜ್ಯ ಸರ್ಕಾರದ ಈ ಯೋಜನೆಯಲ್ಲಿ ಜನ ಸಾಮಾನ್ಯ ಕೂಡ ಕೈ ಜೋಡಿಸಬಹುದಾಗಿದೆ. ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ಈ ಕ್ಲಿನಿಕ್​ಗಳು ಆರಂಭಗೊಳ್ಳಲಿದೆ. ಈ ಕ್ಲಿನಿಕ್​​ಗೆ ಆಕರ್ಷಕ ಗುರುತನ್ನು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕಾಗಿ ಜನರ ಸಹಾಯವನ್ನು ಕೋರಿದೆ. ಆಕರ್ಷಕ ಲೋಗೋದ ಹುಡುಕಾಟದಲ್ಲಿರುವ ರಾಜ್ಯ ಸರ್ಕಾರವು ರಾಜ್ಯದ ಜನತೆಯ ಸಹಕಾರವನ್ನು ಕೋರಿದೆ. ನಮ್ಮ ಕ್ಲಿನಿಕ್​ಗೆ ಆಕರ್ಷಕ ಹಾಗೂ ವಿಭಿನ್ನ ಲೋಗೋವನ್ನು ತಯಾರಿಸಿ ಜನತೆ [email protected] ಕಳುಹಿಸುವಂತೆ ಸೂಚಿಸಲಾಗಿದೆ. ರಾಜ್ಯ ಆರೋಗ್ಯ ಇಲಾಖೆಯ ಉದ್ದೇಶವನ್ನು ಹೊಂದಿರುವ ಲೋಗೋಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ.


ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಮ್ಮ ಕ್ಲಿನಿಕ್​ ಆರಂಭಗೊಳ್ಳಲಿದೆ. ಉತ್ತಮ ವಿನ್ಯಾಸದ ಲೋಗೋವನ್ನು ಬಿಡಿಸಿದ ಕಲಾವಿದರಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ವಿಶೇಷ ವೈಯಕ್ತಿಕ ಗೌರವವನ್ನು ನೀಡಲಿದ್ದಾರೆ.

ಆಸಕ್ತ ಕಲಾವಿದರು ಆಗಸ್ಟ್​ ಐದರಿಂದ ಆಗಸ್ಟ್​ ಹದಿನೈದರ ಒಳಗಾಗಿ ನಮ್ಮ ಕ್ಲಿನಿಕ್​ ಲೋಗೋವನ್ನು ಮೇಲೆ ಸೂಚಿಸಲಾದ ಮೇಲ್​ಗೆ ಕಳುಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್​ ಮಾಹಿತಿ ನೀಡಿದ್ದಾರೆ. ಆಯ್ಕೆಯಾದ ಲೋಗೋವನ್ನು ಬಿಡಿಸಿದವರಿಗೆ ಆಕರ್ಷಕ ಬಹುಮಾನ ದೊರಕುವ ನಿರೀಕ್ಷೆಯಿದೆ.

ಇದನ್ನು ಓದಿ : rashmika mandanna : ಸಿನಿಮಾ ರಂಗಕ್ಕೆ ಗುಡ್​ಬೈ ಹೇಳಿ ರಾಜಕೀಯಕ್ಕೆ ಸೇರಲಿದ್ದಾರಾ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : siddaramotsava : ಸಿದ್ದರಾಮೋತ್ಸವಕ್ಕೆ ಬಂದಿದ್ದು ಸಿದ್ದರಾಮಯ್ಯ ಫ್ಯಾನ್ಸ್​, ಕಾಂಗ್ರೆಸ್​ ಸತ್ತು ಹೋಗಿದೆ : ರೇಣುಕಾಚಾರ್ಯ ವ್ಯಂಗ್ಯ

ಇದನ್ನೂ ಓದಿ : siddaramotsava : ಸಿದ್ದರಾಮೋತ್ಸವಕ್ಕೆ ಬಂದಿದ್ದು ಸಿದ್ದರಾಮಯ್ಯ ಫ್ಯಾನ್ಸ್​, ಕಾಂಗ್ರೆಸ್​ ಸತ್ತು ಹೋಗಿದೆ : ರೇಣುಕಾಚಾರ್ಯ ವ್ಯಂಗ್ಯ

ಇದನ್ನೂ ಓದಿ : Pramod Muthalik : ಹಿಂದುತ್ವಕ್ಕಾಗಿ ಹೊಸ ಪಕ್ಷ, ಯೋಗಿ ಮಾದರಿ ಆಡಳಿತ : ಬಿಜೆಪಿಗೆ ಶಾಕ್‌ ಕೊಟ್ಟ ಪ್ರಮೋದ್‌ ಮುತಾಲಿಕ್‌

health minister drsudhakar announces logo competition for namma clinics

Comments are closed.