Karnataka school collage close : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಜಾರಿಗೆ ತಂದಿರುವ ನೈಟ್‌ ಕರ್ಪ್ಯೂ, ವೀಕೆಂಡ್‌ ಕರ್ಪ್ಯೂ ಕುರಿತು ಅಪಸ್ವರ ಕೇಳಿಬಂದಿದೆ. ಬಡವರು, ಕೂಲಿ ಕಾರ್ಮಿಕರಿಗೆ ನೈಟ್‌ ಕರ್ಪ್ಯೂ ಇಂದ ಸಮಸ್ಯೆಯಾಗುತ್ತಿದೆ. ಜನರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಜನರ ನೆರವಿಗೆ ಧಾವಿಸಬೇಕಾಗಿದೆ. ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ರಾಜ್ಯ ಸರಕಾರ ಶಾಲೆ, ಕಾಲೇಜುಗಳನ್ನು (Karnataka school collage close) ಕನಿಷ್ಠ 15 ರಿಂದ 20 ದಿನಗಳ ಕಾಲ ಬಂದ್‌ ಮಾಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಶಾಲೆ, ಕಾಲೇಜು, ವಸತಿ ನಿಲಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಶಿಕ್ಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೋರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಶಾಲೆ, ಕಾಲೇಜು ಹಾಗೂ ವಸತಿ ನಿಲಯಗಳನ್ನು ಫೆಬ್ರವರಿ ೧ರ ಒಳಗಾಗಿ ಕನಿಷ್ಠ ೧೫ರಿಂದ ೨೦ ದಿನಗಳ ಕಾಲ ಬಂದ್‌ ಮಾಡುವುದು ಸೂಕ್ತ. ಕೆಲವು ಕಡೆಗಳಲ್ಲಿ ಈಗಾಗಲೇ ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಕಾರ್ಯ ನಡೆಯುತ್ತಿದ್ದು, ಸದ್ಯಕ್ಕೆ ಅದನ್ನೇ ಮುಂದುವರಿಸುವುದು ಒಳಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಜಾರಿಯಲ್ಲಿರುವ ನೈಟ್‌ ಕರ್ಪ್ಯೂಯಿಂದ ಜನರ ಜೀವನಕ್ಕೆ ತೊಂದರೆ ಉಂಟಾಗಿದೆ. ತಜ್ಞರು ಯಾವ ಆಧಾರದ ಮೇಲೆ ಸಲಹೆ ನೀಡಿದ್ದಾರೆಯೋ ಗೊತ್ತಿಲ್ಲ. ಆದರೆ ನೈಟ್‌ ಕರ್ಪ್ಯೂ ಬಗ್ಗೆ ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜನರು ಕೂಡ ನೈಟ್‌ ಕರ್ಪ್ಯೂವನ್ನು ವಿರೋಧಿಸುತ್ತಿದ್ದಾರೆ. ಜನರು ಬದುಕು ಕಟ್ಟಿಕೊಳ್ಳಲು ಸರಕಾರ ಕೂಡ ಚಿಂತನೆ ನಡೆಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ವೀಕೆಂಡ್‌ ಕರ್ಪ್ಯೂ ಜಾರಿ ಮಾಡಿರುವುದರ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರೇ ವಿರೋಧಿಸಿದ್ದಾರೆ. ವೀಕೆಂಡ್‌ ಕರ್ಪ್ಯೂ ಕುರಿತು ಬಿಜೆಪಿ ನಾಯಕರಲ್ಲಿಯೇ ಗೊಂದಲ ಇದೆ. ಈ ನಿಟ್ಟಿನಲ್ಲಿ ಸರಕಾರ ಕೂಡ ಗಮನ ಹರಿಸಬೇಕಾಗಿದೆ ಎಂದಿದ್ದಾರೆ.

ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಮೇಕೆದಾಟು ಯೋಜನೆಯ ಬಗ್ಗೆ ಕಿಡಿಕಾರಿದ ಎಚ್.ಡಿ.ಕುಮಾರಸ್ವಾಮಿ ಅವರು, ಪಾದಯಾತ್ರೆಯಿಂದ ಕೊರೊನಾ ಹರಡಿದೆ ಎಂದಿದ್ದಾರೆ. ಅಲ್ಲದೇ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷ ರಾಜ್ಯದ ೧೮೦ ಕ್ಷೇತ್ರಗಳ್ಲಿ ಹಮ್ಮಿಕೊಂಡಿದ್ದ ಜಲಧಾರೆ ಯಾತ್ರೆ ಮುಂದೂಡಿಕೆ ಮಾಡಿದೆ. ಅಲ್ಲದೇ ಜಲಧಾರೆ ಯಾತ್ರೆಯ ವಿಚಾರಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : 11 ಬಾರಿ ಕೊರೊನಾ ಲಸಿಕೆ ಸ್ವೀಕರಿಸಿದ್ದ ವೃದ್ಧನಿಗೆ ಬಿಗ್​ ರಿಲೀಫ್​​

ಇದನ್ನೂ ಓದಿ : ಹೋಂ ಐಸೋಲೆಟೇಡ್ ರೋಗಿಗಳಿಗೆ ಸಿದ್ಧವಾಯ್ತು 6 ಮೆಡಿಸಿನ್ ಒಳಗೊಂಡ ಕಿಟ್

(Karnataka school collage close 15-20 days, night curfew disturbed in people says ex cm HD Kumaraswamy)

Comments are closed.