Ahmedabad Hardik Pandya : ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ಮತ್ತು ರಶೀದ್ ಖಾನ್ ಖರೀದಿಸಿದ ಅಹಮದಾಬಾದ್‌

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 15ನೇ ಆವೃತ್ತಿಗಾಗಿ ಸಿದ್ದತೆ ನಡೆಯುತ್ತಿರುವ ಹೊತ್ತಲ್ಲೇ ಹೊಸ ಪ್ರಾಂಚೈಸಿ ಅಹಮದಾಬಾದ್‌ ತಂಡ ತನ್ನ ಮೂವರು ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಈ ಬಾರಿ ಒಟ್ಟು10 ತಂಡಗಳು ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದು, ಹೊಸ ತಂಡ ಅಹಮದಾಬಾದ್‌ ತಂಡ (Ahmedabad IPL 2022) ಐಪಿಎಲ್ 2022 ಕ್ಕೆ ಹಾರ್ದಿಕ್ ಪಾಂಡ್ಯ ( Hardik Pandya ), ಶುಭಮನ್ ಗಿಲ್ ಮತ್ತು ರಶೀದ್ ಖಾನ್ ಅವರನ್ನು ಅಂತಿಮಗೊಳಿಸಿತು.

ಮುಂದಿನ ತಿಂಗಳು ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮೊದಲು 10 ತಂಡಗಳು ತಮ್ಮ ತಂಡವನ್ನು ಅಂತಿಮಗೊಳಿಸಬೇಕಾಗಿದೆ. ಐಪಿಎಲ್ 2022 ರ ಮೆಗಾ ಹರಾಜಿನ ನಿಯಮಗಳ ಪ್ರಕಾರ, 8 ತಂಡಗಳು ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಲ್ಲದೇ ಹೊಸ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್‌ ತಂಡಗಳು ತಲಾ 3 ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿವೆ.

ಅಹಮದಾಬಾದ್ ಮೂಲದ ಫ್ರಾಂಚೈಸಿ ಮುಂಬರುವ ಐಪಿಎಲ್ ಸೀಸನ್‌ಗಾಗಿ ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ಮತ್ತು ರಶೀದ್ ಖಾನ್ ಅವರನ್ನು ಡ್ರಾಫ್ಟ್ ಪಿಕ್ ಆಗಿ ಆಯ್ಕೆ ಮಾಡಿದೆ. ಅಹಮದಾಬಾದ್ ಫ್ರಾಂಚೈಸ್ ಇಶಾನ್ ಕಿಶನ್ ಅವರನ್ನು ಖರೀದಿಸಲು ಹೆಚ್ಚು ಆಸಕ್ತಿಯನ್ನು ಹೊಂದಿತ್ತು. ಆದರೆ ಇಶಾನ್‌ ಕಿಶನ್‌ ಹರಾಜಿನಲ್ಲಿ ಪಾಲ್ಗೊಳ್ಳಲು ಬಯಸಿದ್ದಾರೆ. ಅಲ್ಲದೇ ಇಶಾನ್‌ ಕಿಶಾನ್‌ ಮುಂಬೈ ಇಂಡಿಯನ್ಸ್ (MI) ತಂಡ ಅವರನ್ನು ಮತ್ತೆ ಖರೀದಿಸಲು ಉತ್ಸುಕವಾಗಿದೆ.

ವರದಿಯ ಪ್ರಕಾರ ಅಹಮದಾಬಾದ್ ರಶೀದ್ ಮತ್ತು ಹಾರ್ದಿಕ್ ಇಬ್ಬರಿಗೂ ರೂ 15 ಕೋಟಿ ರೂಪಾಯಿ ಪಾವತಿಸಲಿದ್ದು, ಶುಭಮನ್‌ ಗಿಲ್‌ ಅವರನ್ನು 7 ಕೋಟಿ ರೂಪಾಯಿ ಖರೀದಿ ಮಾಡುವ ಸಾಧ್ಯತೆಯಿದೆ. ಅಲ್ಲದೇ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅಹಮದಾಬಾದ್‌ ತಂಡದ ನಾಯಕರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಹಮದಾಬಾದ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಸೀಮರ್ ಆಶಿಶ್ ನೆಹ್ರಾ ಬರುವ ಸಾಧ್ಯತೆಯಿದೆ. 2017 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನೆಹ್ರಾ, ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅವರ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದರು.

ಹರಾಜಿನ ಮೊದಲು ಲಕ್ನೋ ಹಾಗೂ ಅಹಮದಬಾದ್‌ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ಬಿಸಿಸಿಐ ಎರಡೂ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಜನವರಿ 22 ರವರೆಗೆ ಸಮಯ ನೀಡಿದೆ. ಇನ್ನೊಂದೆಡೆಯಲ್ಲಿ ಲಕ್ನೋ ತಂಡ ಕೂಡ ಆಟಗಾರರನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಕನ್ನಡಿಗ ಕೆ.ಎಲ್.ರಾಹುಲ್‌ ಲಕ್ನೋ ತಂಡದ ಸಾರಥ್ಯವಹಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರವೀಂದ್ರ ಜಡೇಜಾ ನಾಯಕ

ಇದನ್ನೂ ಓದಿ : ವಿರಾಟ್‌ ಕೊಹ್ಲಿ ರಾಜೀನಾಮೆ ಹಿಂದಿದೆ ಆ ಮೂರು ಕಾರಣ

(Ahmedabad finalised Hardik Pandya, Shubman Gill and Rashid Khan for IPL 2022)

Comments are closed.