Baahubali Thali : ಈ ಹೋಟೆಲ್​ನಲ್ಲಿ ನೀವು ತಟ್ಟೆ ಊಟ ತಿಂದರೆ ಸಿಗುತ್ತೆ 8 ಲಕ್ಷ ರೂ ಬಹುಮಾನ..!

Baahubali Thali :ನೀವು ಆಹಾರ ಪ್ರಿಯರಾಗಿದ್ದರೆ ಖಂಡಿತವಾಗಿಯೂ ಈ ಸ್ಟೋರಿ ನಿಮಗೆ ಹೇಳಿ ಮಾಡಿಸಿದಂತಿದೆ. ನಿಮಗಾಗಿ ಒಂದು ತಮಾಷೆಯ ಸವಾಲನ್ನು ಇಲ್ಲಿ ನೀಡಲಾಗಿದೆ. ನೀವು ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ಆಹಾರ ತಿನ್ನುವ ಅಭ್ಯಾಸ ಉಳ್ಳವರಾಗಿದ್ದರೆ ನಿಮಗೆ ಹಣ ಗಳಿಕೆ ಮಾಡಲು ಅವಕಾಶವೊಂದಿದೆ. ದೆಹಲಿಯ ಆರ್ಡೋರ್​ 2.1 ರೆಸ್ಟಾರೆಂಟ್​ ನಿಮಗಾಗಿ ಒಂದು ಚಾಲೆಂಜ್​ನ್ನು ಇಟ್ಟಿದೆ. ಅದೆನೆ.ದರೆ ನೀವು ಒಂದು ದೊಡ್ಡ ಬಾಹುಬಲಿ ಥಾಲಿಯನ್ನು ಕೇವಲ 40 ನಿಮಿಷಗಳಲ್ಲಿ ಸಂಪೂರ್ಣವಾಗಿ ತಿಂದು ಮುಗಿಸಿದರೆ ನಿಮಗೆ 8 ಲಕ್ಷ ರೂಪಾಯಿ ಬಹುಮಾನದ ರೂಪದಲ್ಲಿ ಸಿಗಲಿದೆ.


ಅಂದಹಾಗೆ ಈ ಸವಾಲನ್ನು ಗೆಲ್ಲುವುದು ನೀವು ಅಂದುಕೊಂಡಷ್ಟು ಸುಲಭವಂತೂ ಅಲ್ಲವೇ ಅಲ್ಲ. ಏಕೆಂದರೆ ಈ ಥಾಲಿಯಲ್ಲಿ ನಿಮಗೆ ಬರೋಬ್ಬರಿ 30 ಭಕ್ಷ್ಯಗಳನ್ನು ನೀಡಲಾಗುತ್ತದೆ. ಈ ಎಲ್ಲಾ ಆಹಾರಗಳನ್ನೂ ನೀವು ಕೇವಲ 40 ನಿಮಿಷದಲ್ಲಿ ತಿಂದು ತೇಗಿದರೆ ಮಾತ್ರ ಬಹುಮಾನದ ಮೊತ್ತ ನಿಮ್ಮದಾಗಲಿದೆ.


ಕೆಲ ದಿನಗಳ ಹಿಂದಷ್ಟೇ ಫುಡ್​ ಬ್ಲಾಗರ್​​ ರಜನೀಶ್​ ಜ್ಞಾನಿಯನ್​​ ಈ ಚಾಲೆಂಜ್​ನ್ನು ಸ್ವೀಕರಿಸಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಕೂಡ ಆಗಿತ್ತು. ಈ ವಿಡಿಯೋದಲ್ಲಿ ರಜನೀಶ್​ ಹಾಗೂ ಅವರ ಸ್ನೇಹಿತ ಆಹಾರ ಸೇವಿಸುತ್ತಿದ್ದ ಪರಿಯೇ ನಗು ತರಿಸುವಂತಿತ್ತು. ಇನ್ನೊಂದು ಆಶ್ಚರ್ಯಕರ ವಿಚಾರ ಅಂದರೆ ಇವರು ನಿಗದಿತ ಸಮಯದಲ್ಲಿ ಸಂಪೂರ್ಣ ಥಾಲಿಯನ್ನು ತಿಂದು ತೇಗಿದ್ದರು..!


ಈ ದೊಡ್ಡ ಥಾಲಿಯಲ್ಲಿ ನಿಮಗೆ ಉತ್ತರ ಭಾರತದ ಶೈಲಿಯ ಆಹಾರವನ್ನು ಬಡಿಸಲಾಗುತ್ತದೆ. ಪಾಪ್ಡಿ ಚಾಟ್​, ಗೋಬಿ ಮಟರ್​, ದಾಲ್​ ತಡ್ಕಾ, ಕಡಿ ಪಕೋರಾ, ಆಲೂ ಪಾಲಕ್​. ಮಲಾಯ್​ ಕೋಫ್ತಾ, ಸೋಯಾ ಚಾಪ್​ ಮಸಾಲಾ , ಕಡಾಯಿ ಪನ್ನೀರ್​, ದಾಲ್​ ಮಖಾನಿ, ದಮ್ ಆಲೂ, ಸಾಗ್​, ಪನೀರ್​ ಟಿಕ್ಕಾ ಮಸಾಲಾ, ವೆಜ್​ ಬಿರಿಯಾನಿ, ಅನ್ನ ಸೇರಿದಂತೆ ವಿವಿಧ ಖಾದ್ಯಗಳನ್ನು ನೀಡಲಾಗುತ್ತದೆ.

Viral Video: You Can Win Rs 8 Lakh If You Finish This 8 Kg ‘Baahubali’ Thali in 40 Minutes | Watch

ಇದನ್ನು ಓದಿ : Dolo 650 : ಹುಬ್ಬೇರಿಸುತ್ತೆ ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಮಾರಾಟವಾದ ಡೋಲೋ 650 ಮಾತ್ರೆಗಳ ಸಂಖ್ಯೆ

ಇದನ್ನೂ ಓದಿ : Samantha comeback Bollywood : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು ಮೂರು ಸಿನಿಮಾ ಆಫರ್

Comments are closed.