ಬೆಂಗಳೂರು : Siddaramaiah : ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಲು ಸಾಲು ಕೊಲೆಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕೇವಲ 10 ದಿನಗಳ ಅಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಮೂವರು ಕೊಲೆಯಾಗಿರುವುದು ರಾಜ್ಯದ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ. ಅಪರಾಧ ಕೃತ್ಯಗಳು ಎಸಗದಂತೆ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡ ಬಳಿಕವೂ ನಿನ್ನೆಯಷ್ಟೇ ಸುರತ್ಕಲ್ನಲ್ಲಿ ಮುಸ್ಲಿಮರ ಜಗಳದಲ್ಲಿ ಫಾಜಿಲ್ ಎಂಬ 23 ವರ್ಷದ ಯುವಕ ಕೊಲೆಯಾಗಿದ್ದಾನೆ . ಈ ಕೃತ್ಯಗಳ ಸಂಬಂಧ ಇಂದು ಮಾತನಾಡಿದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ , ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ಕರಾವಳಿ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ನಡೆದ ಈ ಮೂರು ಕೃತ್ಯಗಳೇ ಸಾಕ್ಷಿ . ರಾಜ್ಯ ಸರ್ಕಾರದಿಂದ ಜನತೆಗೆ ಯಾವುದೇ ರಕ್ಷಣೆ ಇಲ್ಲದಾಗಿದೆ. ರಾಜ್ಯದ ಗುಪ್ತಚರ ಇಲಾಖೆಯು ಸಿಎಂ ಬಸವರಾಜ ಬೊಮ್ಮಾಯಿಯ ಅಡಿಯಲ್ಲಿಯೇ ಬರುತ್ತದೆ. ಆದರೂ ರಾಜ್ಯದಲ್ಲಿ ಸರಣಿ ಹತ್ಯೆಗಳು ಹೇಗೆ ಉಂಟಾಗುತ್ತಿದೆ.. ? ರಾಜ್ಯದಲ್ಲಿ ಇಂತಹ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯವಾಗದ ಬಸವರಾಜ ಬೊಮ್ಮಾಯಿ ಒಬ್ಬ ದುರ್ಬಲ ಸಿಎಂ ಎಂದು ಜರಿದಿದ್ದಾರೆ.
ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧವೂ ಕಿಡಿಕಾರಿದ ಸಿದ್ದರಾಮಯ್ಯ, ರಾಜ್ಯದ ಗೃಹ ಸಚಿವನ ಸ್ಥಾನದಲ್ಲಿ ಕುಳಿತುಕೊಳ್ಳಲು ಆರಗ ಜ್ಞಾನೇಂದ್ರರಿಗೆ ನೈತಿಕತೆಯೇ ಇಲ್ಲ. ಇವರು ಯಾರ ಕೈಯಲ್ಲಿಯೂ ರಾಜ್ಯದ ಜನರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಸಂಪೂರ್ಣ ಹೊಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಹೊರಬೇಕು .ಮತಾಂಧ ಶಕ್ತಿಗಳು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗುಡುಗಿದ್ದಾರೆ.
ಇದನ್ನೂ ಓದಿ : Fazil’s final darshan : ಫಾಜಿಲ್ ಹತ್ಯೆ ಪ್ರಕರಣ : ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
Siddaramaiah spoke against CM Basavaraja Bommai