CM Basavaraja Bommai : ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಗುಡುಗಿದ ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು : CM Basavaraja Bommai : ಕರಾವಳಿ ಜಿಲ್ಲೆಯಲ್ಲಿ ಹರಿಯುತ್ತಿರುವ ಸಾಲು ಸಾಲು ನೆತ್ತರು ಕೋಮು ದಳ್ಳುರಿಯ ಜ್ವಾಲೆಯನ್ನು ಮತ್ತಷ್ಟು ಕುದಿಸುತ್ತಿದೆ. ಕೇವಲ 10 ದಿನಗಳ ಅಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಯುವಕರು ಮರ್ಡರ್​ ಆಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮಸೂದ್​ ಹಾಗೂ ಫಾಜಿಲ್​​ ಮತ್ತು ಹಿಂದೂ ಸಮುದಾಯದ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣಗಳು ಕರಾವಳಿಯಲ್ಲಿ ರಕ್ತಪಾತದ ಚರಿತ್ರೆಯನ್ನೇ ಬರೆಯುತ್ತಿದೆ.


ನಿನ್ನೆ ನೆಟ್ಟಾರುವಿನಲ್ಲಿರುವ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್​ ವಿತರಿಸಿದ್ದ ಸಿಎಂ ಬೊಮ್ಮಾಯಿ ಇನ್ನೂ ಮಂಗಳೂರಿನಲ್ಲಿ ಇರಬೇಕಾದರೇ ಮಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಸುರತ್ಕಲ್​ನಲ್ಲಿ ಫಾಜಿಲ್​ ಎಂಬ ಯುವಕ ಬೀದಿ ಹೆಣವಾಗಿದ್ದಾನೆ. ಇದು ಮೇಲ್ನೋಟಕ್ಕೆ ಲವ್​​ಗೆ ಸಂಬಂಧಿಸಿದ ವಿಚಾರಕ್ಕೆ ನಡೆದ ಕೊಲೆಯಾಗಿದ್ದರೂ ಸಹ ನಡು ರಸ್ತೆಯಲ್ಲಿ ಇಷ್ಟೊಂದು ಧೈರ್ಯದಲ್ಲಿ ಕೊಲೆಗಳು ನಡೆಯುತ್ತಿರುವುದು ಭದ್ರತಾ ಇಲಾಖೆಯ ಮೇಲೆ ಬೊಟ್ಟು ಮಾಡಿ ತೋರಿಸುವಂತಿದೆ.


ಈ ಪ್ರಕರಣಗಳ ಸಂಬಂಧ ಇಂದು ಮಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾವು ಈ ಪ್ರಕರಣಗಳನ್ನು ಕೇವಲ ಕೊಲೆ ಪ್ರಕರಣಗಳೆಂದು ನೋಡುತ್ತಿಲ್ಲ. ಈ ಎಲ್ಲಾ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಫಾಜಿಲ್​ ಕೊಲೆ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.


ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆರೋಪಗಳ ಕುರಿತು ಗುಡುಗಿದ ಸಿಎಂ ಬೊಮ್ಮಾಯಿ ಆತ ಹೇಳಿದ್ದೆಲ್ಲ ವೇದವಾಕ್ಯವಲ್ಲ ಎಂದು ಏಕವಚನದಲ್ಲಿಯೇ ಆಕ್ರೋಶ ಹೊರ ಹಾಕಿದ್ದಾನೆ. ಕಾಂಗ್ರೆಸ್​ ಪಕ್ಷದ ಆರೋಪಗಳು ಹಾಸ್ಯಾಸ್ಪದವಾಗಿದೆ. ನಾವು ಈ ಪ್ರಕರಣಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ. ಯಾವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಈ ಸಂಬಂಧ ಇಂದು ಹಿರಿಯ ಪೊಲೀಸ್​ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಲಿದ್ದೇನೆ ಎಂದು ಹೇಳಿದರು.

ಇದನ್ನು ಓದಿ : Fazil’s final darshan : ಫಾಜಿಲ್​ ಹತ್ಯೆ ಪ್ರಕರಣ : ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ಇದನ್ನೂ ಓದಿ : Siddaramaiah : ಬಸವರಾಜ ಬೊಮ್ಮಾಯಿಯನ್ನು ದುರ್ಬಲ ಮುಖ್ಯಮಂತ್ರಿ ಎಂದು ಕರೆದ ಸಿದ್ದರಾಮಯ್ಯ

CM Basavaraja Bommai spoke singularly against Siddaramaiah

Comments are closed.