ಭಾನುವಾರ, ಏಪ್ರಿಲ್ 27, 2025
HomepoliticsSiddaramaiah's contest from Kolar :ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ದೃಢ : ಮುಂದಿನ ತಿಂಗಳಿನಿಂದಲೇ ಪ್ರಚಾರ...

Siddaramaiah’s contest from Kolar :ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ದೃಢ : ಮುಂದಿನ ತಿಂಗಳಿನಿಂದಲೇ ಪ್ರಚಾರ ಕಾರ್ಯ

- Advertisement -

ಕೋಲಾರ : Siddaramaiah’s contest from Kolar : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದೆ. ಈ ನಡುವೆ ರಾಜಕೀಯ ಪಕ್ಷಗಳ ಲೆಕ್ಕಾಚಾರಗಳು ಜೋರಾಗಿದೆ. ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಕಳೆದ ಆರು ತಿಂಗಳಿನಿಂದ ಸಿದ್ದರಾಮಯ್ಯರ ಹೆಸರು ಕೋಲಾರ ವಿಧಾನಸಭಾ ಕ್ಷೇತ್ರದ ಜೊತೆಯಲ್ಲಿ ಥಳುಕು ಹಾಕಿಕೊಂಡಿತ್ತು.ಅದರಂತೆ ಸಿದ್ದರಾಮಯ್ಯ ಕೋಲಾರದಿಂದ ಸ್ಫರ್ಧಿಸಲಿದ್ದು ಮುಂದಿನ ತಿಂಗಳಿನಿಂದ ಚುನಾವಣಾ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ.


ಸಿದ್ದರಾಮಯ್ಯ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ತಾರೆ ಎಂಬ ರಾಜಕೀಯ ಚರ್ಚೆಗಳ ನಡುವೆಯೇ ಮಾಜಿ ಸ್ಪೀಕರ್​ ಹಾಗೂ ಶಾಸಕ ರಮೇಶ್​ ಕುಮಾರ್​ ಸೇರಿದಂತೆ ಅನೇಕ ಕಾಂಗ್ರೆಸ್​ ನಾಯಕರು ಸೇರಿ ಸಿದ್ದರಾಮಯ್ಯರಿಗೆ ಕೋಲಾರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಲೇ ಇದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಗೆದ್ದಿದ್ದರೂ ಸಹ ಬೆಂಗಳೂರಿನಿಂದ ಹೋಗಿ ಬಾದಾಮಿಯಲ್ಲಿ ನಿರಂತರ ಪ್ರಚಾರ ಕಾರ್ಯ ನಡೆಸುವುದು ಈ ವಯಸ್ಸಿನಲ್ಲಿ ಸಿದ್ದರಾಮಯ್ಯರಿಗೆ ತುಸು ಕಷ್ಟವೇ. ಹೀಗಾಗಿ ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂಬುದು ಸಿದ್ದರಾಮಯ್ಯ ಆಲೋಚನೆಯಾಗಿತ್ತು. ಅದರಂತೆಯೇ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಸಿದ್ದರಾಮಯ್ಯ ಸೀತಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಂದಿನ ತಿಂಗಳಿನಿಂದ ಕೋಲಾರ ಚುನಾವಣಾ ಕಣಕ್ಕೆ ಅಧಿಕೃತ ಎಂಟ್ರಿ ನೀಡಲಿದ್ದಾರೆ.


ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಇಲ್ಲಿನ ಮುಸ್ಲಿಂ ಪ್ರಾಬಲ್ಯ, ದಲಿತ ಮತದಾರರ ಸಂಖ್ಯೆ ಸೇರಿದಂತೆ ಸಾಕಷ್ಟು ಸಮೀಕ್ಷೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಎಲ್ಲಾ ರೀತಿಯಿಂದಲೂ ಕೋಲಾರ ತನಗೆ ಸುರಕ್ಷಿತ ಎನಿಸಿದ ಬಳಿಕವೇ ಸಿದ್ದರಾಮಯ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ. ನವೆಂಬರ್​ 11 ಅಥವಾ 13ರಂದು ಕೋಲಾರದ ವೇಮಗಲ್​ ಹೋಬಳಿ ಸೀತಿ ಬೈರವೇಶ್ವರ ದೇವಾಲಯಕ್ಕೆ ಭೇಟಿ ನೀಡಲಿರುವ ಸಿದ್ದರಾಮಯ್ಯ ಇಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.

ಇದನ್ನು ಓದಿ : Bank of Baroda Recruitment 2022 : ಬ್ಯಾಂಕ್ ಆಫ್ ಬರೋಡಾ 2022 : FLC ಕೌನ್ಸಿಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : Kannada Rajyotsava 2022 : ಕನ್ನಡ ರಾಜ್ಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು ?

Siddaramaiah’s contest from Kolar confirmed: Campaigning from next month itself

RELATED ARTICLES

Most Popular