Matte Mayamruga Serial:’ಮತ್ತೆ ಮಾಯಾಮೃಗ’ : ಅಕ್ಟೋಬರ್‌ 31 ರಿಂದ ಸಿರಿ ಕನ್ನಡ ಆರಂಭ

(Matte Mayamruga Serial)ಟಿ.ಎನ್‌ ಸೀತಾರಾಮ್‌ ಅವರ ನಿರ್ದೇಶನದಲ್ಲಿ ಮೂಡಿ ಬರುವ ಧಾರಾವಾಹಿಗಳು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದೆ. ಇದುವರೆಗಿನ ಅವರ ಎಲ್ಲ ಧಾರಾವಾಹಿಗಳು ಕೂಡ ಯಶಸ್ಸನ್ನು ಕಂಡಿದೆ.ಅದರಲ್ಲೂ ಮಾಯಾಮೃಗ ಧಾರಾವಾಹಿ ಟಿ ಎನ್‌ ಸೀತಾರಾಮ್‌ ಅವರಿಗೆ ಹೆಸರನ್ನು ತಂದುಕೊಟ್ಟಿದಲ್ಲದೇ, ಎಲ್ಲರ ಮನಸ್ಸಿನಲ್ಲಿ ಈ ಧಾರಾವಾಹಿ ಅಚ್ಚುಳಿಯದೆ ಉಳಿದಿದೆ. ವಿಭಿನ್ನವಾದಂತಹ ಕಥಾಹಂದರವನ್ನು ಹೊಂದಿರುವ “ಮಾಯಾಮೃಗ” ಧಾರಾವಾಹಿಯನ್ನು ಈಗಲೂ ಕೂಡ ಜನರು ನೆನೆಪಿಸಿಕೊಳ್ಳುತ್ತಾರೆ. ಈ ಧಾರವಾಹಿಯನ್ನು ಮರು ಪ್ರಸಾರ ಮಾಡಿದರೂ ವೀಕ್ಷಿಸುವರ ಸಂಖ್ಯೆ ಕಡಿಮೆಯಾಗುವುದಿಲ್ಲ.ಈಗ ಈ ಧಾರಾವಾಹಿಯ ತಂಡ ವೀಕ್ಷಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಮಾಯಾಮೃಗದ ಮುಂದುವರೆದ ಭಾಗ “ಮತ್ತೆ ಮಾಯಾಮೃಗ” ಎಂಬ ಹೆಸರಿನಿಂದ ಪ್ರಾರಂಭವಾಗಲಿದೆ. ಅಕ್ಟೋಬರ್‌ 31 ರಿಂದ ಸೋಮವಾರ ಪ್ರತಿದಿನ ರಾತ್ರಿ 9 ಗಂಟೆಗೆ ಸಿರಿ ಕನ್ನಡ ವಾಹಿನಿಯಲ್ಲಿ “ಮತ್ತೆ ಮಾಯಾಮೃಗ” ಧಾರಾವಾಹಿ ಪ್ರಸಾರವಾಗುತ್ತದೆ.

(Matte Mayamruga Serial)ಮಾಧ್ಯಮವೊಂದರಲ್ಲಿ ಟಿ ಎನ್‌ ಸೀತಾರಾಮ್‌ ಅವರು ಮತ್ತೆ ಮಾಯಾಮೃಗ ಧಾರಾವಾಹಿ ಪ್ರಾರಂಭ ಮಾಡುತ್ತಿರುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಸಿರಿ ಕನ್ನಡ ವಾಹಿನಿಯ ಸಂಜಯ್‌ ಶಿಂಧೆ ಅವರು ನನ್ನನ್ನು ಸಂಪರ್ಕಿಸಿ ತಮ್ಮ ವಾಹಿನಿಗಾಗಿ ಒಂದು ಧಾರಾವಾಹಿಯನ್ನು ನಿರ್ದೇಶಿಸುವಂತೆ ಕೇಳಿದರು. ನಾನು ಮಾಯಾಮೃಗ ಧಾರಾವಾಹಿಯ ಮುಂದುವರೆದ ಭಾಗವಾಗಿ ಮತ್ತೆ ಮಾಯಮೃಗ ಧಾರಾವಾಹಿಯನ್ನು ಮುಂದುವರೆಸೋಣ ಎಂದು ಹೇಳಿದಾಗ ಅವರು ಸಂತೋಷದದಿಂದ ಒಪ್ಪಿಕೊಂಡರು ಎಂದು ತಿಳಿಸಿದ್ದಾರೆ.ಮಾಯಾಮೃಗದ ನಿರ್ದೇಶನ ವಿಭಾಗದಲ್ಲಿ ಟಿ ಎನ್‌ ಸೀತಾರಾಮ್‌,ಪಿ.ಶೇಷಾದ್ರಿ ಹಾಗೂ ನಾಗೆಂದ್ರ ಶಾ ಮೂವರ ಕೂಡ ಇದ್ದರು. ಈಗಲು ಈ ಮೂವರ ನಿರ್ದೇಶನದಲ್ಲಿ ಮತ್ತೆ ಮಾಯಾಮೃಗ ಧಾರಾವಾಹಿ ಮೂಡಿಬರಲಿದೆ.ಇನ್ನು ಕಥಾವಿಸ್ತರಣೆಯನ್ನು ಅಶ್ವಿನಿ ಹಾಗೂ ಪ್ರಹ್ಲಾದ್‌ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ:Kannada Rajyotsava 2022 : ಕನ್ನಡ ರಾಜ್ಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು ?

ಇದನ್ನೂ ಓದಿ:Karnataka Rajyotsava 2022 : ಕನ್ನಡ ರಾಜ್ಯೋತ್ಸವದ ಇತಿಹಾಸ, ಮಹತ್ವ, ಆಚರಣೆ : ಸಂಪೂರ್ಣ ಮಾಹಿತಿ

ಮತ್ತೆ ಮಾಯಾಮೃಗದಲ್ಲಿ ಹಳೆ ಕಲಾವಿದರು ಜೊತೆ ಹೊಸ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಹಳೆ ಬೆರು ಮತ್ತು ಹೊಸ ಚಿಗುರನ್ನು ಸೇರಿಸಿ ಹೊಸದೊಂದು ಅಧ್ಯಾಯದೊಂದಿಗೆ ಮತ್ತೆ ಮಾಯಾಮೃಗ ಪ್ರಾರಂಭವಾಗಲಿದೆ. ಮತ್ತೆ ಮಾಯಾಮೃಗದಲ್ಲಿ ಶಾಸ್ತ್ರಿಗಳ ಫ್ಯಾಮಿಲಿ ದೊಡ್ಡದಾಗಿದ್ದು. ಅಜ್ಜ- ಅಜ್ಜಿಯ ಕಥೆ ಜೊತೆಗೆ ಮೊಮ್ಮಕ್ಕಳ ಹೊಸ ಕಥೆ ಸೇರಿಕೊಂಡಿದೆ. ಮತ್ತೆ ಮಾಯಾಮೃಗ ಬದುಕು ಬದಲಾಗಬಹುದು ಭಾವ ಅಲ್ಲ ಅನ್ನೋ ವಾಕ್ಯದೊಂದಿಗೆ ಪ್ರಸಾರವಾಗಲು ಸಿದ್ದವಾಗಿದೆ. ಟಿ ಎನ್‌ ಸೀತಾರಾಮನ್‌ ಧಾರಾವಾಹಿಯನ್ನು ಇಂದು ಕೂಡ ಜನರು ನೆನೆಸಿಕೊಳ್ಳುತ್ತಾರೆ. ಕುಟುಂಬದಲ್ಲಿ ನಡೆಯುವ ಸಣ್ಣ ಸಣ್ಣ ಕಥೆಯನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಒಂದು ವಿಭಿನ್ನವಾದ ಕಥೆಯನ್ನು ತರುವುದರಲ್ಲಿ ಇವರು ಗೆದ್ದಿದ್ದಾರೆ. ಈ ಧಾರಾವಾಹಿ ಹೇಗೆ ಮೂಡಿ ಬರುತ್ತದೆ ಎಂಬ ಕುತೂಹಲದಿಂದ ವೀಕ್ಷಕರು ಕಾಯುತ್ತಿದ್ದಾರೆ.

Matte Mayamruga Serial again start from October 31in Siri Kannada

Comments are closed.