BJP MLAs will fall to 60 : ಹಗರಣ, ವಿವಾದದ ಸೈಡ್ ಎಫೆಕ್ಟ್ : ಮುಂದಿನ ಚುನಾವಣೆಯಲ್ಲಿ 60 ಕ್ಕೆ ಕುಸಿಯಲಿದೆ ಬಿಜೆಪಿ ಶಾಸಕರ ಸಂಖ್ಯೆ

ಬೆಂಗಳೂರು : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯೋ ಕನಸಿನಲ್ಲಿರೋ ಬಿಜೆಪಿಗೆ ಇತ್ತೀಚಿಗೆ ಪಕ್ಷ ಹಾಗೂ ಪಕ್ಷದ ಹೈಕಮಾಂಡ್ ನಡೆಸಿದ ಸಮೀಕ್ಷೆಗಳು ನಿದ್ದೆಗೆಡಿಸಿವೆ. ಪಕ್ಷದ ಬಲಾಬಲ 119 ರಿಂದ 60 ಕ್ಕೆ ಕುಸಿಯಲಿದೆ (BJP MLAs will fall to 60) ಎಂಬ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಇದು ರಾಜ್ಯ ಬಿಜೆಪಿ ಹಾಗೂ ಹೈಕಮಾಂಡ್ ನಾಯಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಈ ಬಗ್ಗೆ ಚರ್ಚಿಸಲು ಹಾಗೂ ತುರ್ತು ಚುನಾವಣಾ ರಣತಂತ್ರ ರೂಪಿಸಲು ಶುಕ್ರವಾರ ಬಿಜೆಪಿ ಮಹತ್ವದ ಸಭೆ ನಡೆಸಲು ಮುಂದಾಗಿದೆ.

ನೊರೆಂಟು ರಾಜಕೀಯ ಷಡ್ಯಂತ್ರ, ಮೇಲಾಟ ಹಾಗೂ ಆಫರೇಶನ್ ಕಮಲದಂತಹ ಪ್ಲ್ಯಾನ್ ಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಈಗ ದೇಶದ ಬಹುತೇಕ ರಾಜ್ಯಗಳಲ್ಲಿ ಕಮಲ ಅರಳಿರೋದರಿಂದ ರಾಜ್ಯದಲ್ಲೂ ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳೋದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಶತಾಯ ಗತಾಯ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ. ಮೋದಿ ಹೆಸರಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು ಎಂದು ಹಾಯಾಗಿದ್ದ ಬಿಜೆಪಿ ನಾಯಕರಿಗೆ ಕೇಂದ್ರದ ಬಿಜೆಪಿ ನಾಯಕರು ಹಾಗೂ ಆರ್.ಎಸ್.ಎಸ್ ನಾಯಕರು ನಡೆಸಿದ ಸಮೀಕ್ಷೆ ವರದಿ ಶಾಕ್ ನೀಡಿದೆ. ಬಿಜೆಪಿ ಇದುವರೆಗೂ ಕೈಗೊಂಡ ಮೂರು ಆಂತರಿಕ ಸಮೀಕ್ಷೆಗಳು ಬಿಜೆಪಿಗೆ ರಾಜ್ಯದಲ್ಲಿ ಆಘಾತ ಕಾದಿದೆ ಎಂಬ ಸತ್ಯವನ್ನೇ ಹೇಳಿದೆ.

ಈಗಿರುವುದಕ್ಕಿಂತ ಕಡಿಮೆ ಎಂದರೇ ಸುಮಾರು ಅರ್ಧಕ್ಕೆ ಬಿಜೆಪಿಯ ಸಂಖ್ಯಾಬಲ ಕುಸಿಯಲಿದೆ ಎನ್ನಲಾಗ್ತಿದೆ. 119 ರಿಂದ 60 ಕ್ಕೆ ಬರಲಿದೆ.‌ ಇದರಿಂದ ಬಿಜೆಪಿ ಅಧಿಕಾರಕ್ಕೆ ಬರುವ ಕನಸು ಕನಸಾಗಿಯೇ ಉಳಿಯಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಬೆಲೆ ಏರಿಕೆ, ಪ್ರಮುಖವಾಗಿ ಬಿಜೆಪಿಯ ಹಗರಣಗಳು ಈ ಕುಸಿತಕ್ಕೆ ಕಾರಣ ಎನ್ನಲಾಗ್ತಿದೆ. ಪ್ರಧಾನಿ ಕಚೇರಿಯವರೆಗೂ ಸದ್ದು ಮಾಡಿದ 40% ಕಮಿಷನ್ ರಾಜಕಾರಣ, ಹರ್ಷ ಹತ್ಯೆ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸೇರಿದಂತೆ ಹಲವು ವಿಚಾರಗಳು ಬಿಜೆಪಿ ಸರ್ಕಾರಕ್ಕೆ ನೆಗೆಟಿವ್ ಇಮೇಜ್ ನೀಡಿದ್ದು ಈ ಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಯಿಂದ ದೂರ ಸರಿಯಲಿದ್ದಾರೆ ಎನ್ನಲಾಗ್ತಿದೆ.

ಈ ವರದಿಯಿಂದ ಆತಂಕಕ್ಕಿಡಾಗಿರೋ ಆರ್.ಎಸ್.ಎಸ್ ಹಾಗೂ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಬಲಪಡಿಸುವ ಹಾಗೂ ಚುನಾವಣೆ ಗೆಲ್ಲುವ ಉದ್ದೇಶದಿಂದ ಅಗತ್ಯ ರಣತಂತ್ರ ರೂಪಿಸಲು ಶುಕ್ರವಾರ ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಸಭೆ ಆಯೋಜಿಸಿದೆ. ಇದರಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಚುನಾವಣೆಯ ಸಿದ್ಧತೆ, ಪ್ರಣಾಳಿಕೆ ಹಾಗೂ ಡ್ಯಾಮೇಜ್ ಕಂಟ್ರೋಲ್ ಪ್ಲ್ಯಾನ್ ಕೂಡ ನಡೆಯಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : ಮಾಹಿತಿ ಹಕ್ಕಿನಲ್ಲಿ ಬಯಲಾಲ್ತು ಶಾಸಕರು- ಸಚಿವರ ಕಳ್ಳಾಟ: ಅವಧಿ ಮುಗಿದರೂ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ನಾಯಕರು

ಇದನ್ನೂ ಓದಿ : ಬಿ.ಎಸ್.ಯಡಿಯೂರಪ್ಪ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ : ಕುತೂಹಲ ಮೂಡಿಸಿದೆ ಕಾಂಗ್ರೆಸ್ ಶಾಸಕಿ ನಡೆ

ಇದನ್ನೂ ಓದಿ : Team India has got New Spinner : ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಸ್ಪಿನ್ ಬೌಲಿಂಗ್ ಮಾಡಿದ್ದನ್ನು ನೋಡಿದ್ದೀರಾ ?

Side effect of scandal, controversy, number of BJP MLAs will fall to 60, BJP shocked by survey

Comments are closed.