LIC Policy : ಎಲ್‌ಐಸಿ ಯ ವಿಮಾ ಬಚತ್‌ ಪಾಲಿಸಿ ನಿಮಗೆ ಗೊತ್ತಾ? ಒಂದೇ ಸಲ ಪ್ರೀಮಿಯಂ ಪಾವತಿಸಿ ಹೆಚ್ಚಿನ ಲಾಭ ಗಳಿಸಬಹುದು!!

ನಿಮ್ಮ ಹಣ ಹೂಡಿಕೆ ಮಾಡಲು ಇರುವ ಅತ್ಯಂತ ಜನಪ್ರಿಯ ಮಾರ್ಗಗಳಲ್ಲಿ LIC ಯು ಒಂದು(LIC Policy). ಲೈಫ್‌ ಇನ್ಶೂರೆನ್ಸ್‌ ಕಾರ್ಪೋರೇಶನ್‌ ಇಂಡಿಯಾ (LIC India) ಇದು ಭಾರತೀಯರು ತಮ್ಮ ಭವಿಷ್ಯಕ್ಕಾಗಿ ಹಣವನ್ನು ತೊಡಗಿಸಲು ಆಯ್ದುಕೊಳ್ಳುವ ಉತ್ತಮ ದಾರಿಯಾಗಿದೆ. ಇದರಲ್ಲಿ ಹಣ ತೊಡಗಿಸುವದರಿಂದ ಯಾವುದೇ ರೀತಿಯ ತೊಂದರೆಗಳು ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ. ಬ್ಯಾಂಕ್‌ ಮತ್ತು ಫೋಸ್ಟ್‌ ಆಫೀಸಿನ ಯೋಜನೆಗಳಂತೆಯೇ ಎಲ್‌ಐಸಿ ಯು ಸಹ ಗ್ಯಾರಂಟಿಯಾಗಿ ಹಣವನ್ನು ಮರುಪಾವತಿಸುತ್ತದೆ. ಅದಕ್ಕಾಗಿಯೇ ಎಲ್‌ಐಸಿ ಕಾಲಕಾಲಕ್ಕೆ ತನ್ನ ಗ್ರಾಹಕರಿಗೆ ಹೊಸ ಹೊಸ ಪಾಲಿಸಿಗಳನ್ನು ಪರಿಚಯಿಸುತ್ತಲೇ ಬಂದಿದೆ. ಎಲ್‌ಐಸಿ ಯಲ್ಲಿ ಹಲವಾರು ಪಾಲಿಸಿಗಳು (Bima Bachat Plan) ದೊರೆಯುತ್ತವೆ. ಈ ಪಾಲಿಸಿಗಳು ಉಳಿತಾಯದ ಜೊತೆಗೆ ಸುರಕ್ಷಾ ಯೋಜನೆಗಳನ್ನು ಪಾಲಿಸಿದಾರರಿಗೆ ಮತ್ತು ಅವರ ಕುಟುಂಬಕ್ಕೆ ನೀಡಿದೆ.

ಎಲ್‌ಐಸಿಯ ವಿಮಾ ಬಚತ್‌ ಪ್ಲಾನ್‌ (Bima Bachat Plan) ಇದು ಒಂದೇ ಸಲ ಪ್ರೀಮಿಯಂ ಹಣ ಪಾವತಿಸಿ ಹೆಚ್ಚಿನ ಲಾಭ ಗಳಿಸಬಹುದಾದ ಪಾಲಿಸಿಯಾಗಿದೆ. ವಿಮಾ ಬಚತ್‌ ಪ್ಲಾನ್‌ ನಲ್ಲಿ ಒಟ್ಟು ಹಣವನ್ನು ಪಾಲಿಸಿ ಪ್ರಾರಂಭದಲ್ಲೆ ಪಾವತಿಸಲಾಗುತ್ತದೆ. ಇದು ಮನಿ–ಬ್ಯಾಕ್‌ ಯೋಜನೆಯಾಗಿದ್ದು, ಪಾಲಿಸಿಯ ಅವಧಿಯಲ್ಲೇ ಮರಣ ಸಂಭವಿಸಿದಾಗಲೂ ಆರ್ಥಿಕ ರಕ್ಷಣೆ ಒದಗಿಸುತ್ತದೆ. ಮತ್ತು ನಿರ್ದಿಷ್ಟ ಅವಧಿಯಲ್ಲಿ ಜೀವಿತಾವಧಿಯ ಪ್ರಯೋಜನಗಳನ್ನು ಒದಗಿಸುತ್ತದೆ. ಪಾಲಿಸಿಯ ಮುಕ್ತಾಯದ ನಂತರ ಒಂದು ಪ್ರೀಮಿಯಂ ಅನ್ನು ಲಾಯಲ್ಟಿಯಾಗಿ ಸೇರಿಸಿ ಹಿಂತಿರುಗಿಸಲಾಗುತ್ತದೆ. ಈ ಯೋಜನೆಯು ಸಾಲ ಸೌಲಭ್ಯವನ್ನೂ ಒಳಗೊಂಡಿದೆ. ಈ ಯೋಜನೆಯಲ್ಲಿ ಮೂಲ ವಿಮಾ ಮೊತ್ತದ ಶೇಕಡಾ 15 ರಷ್ಟನ್ನು ಸರ್ವೈವಲ್‌ ಬೆನಿಫಿಟ್‌ ಎಂದು ಪ್ರತಿ ಮೂರು ವರ್ಷಗಳ ಕೊನೆಯಲ್ಲಿ ಪಾವತಿಸಲಾಗುತ್ತದೆ.

ವಿಮಾ ಬಚತ್‌ ಪಾಲಿಸಿಯ ಕನಿಷ್ಟ ಮೊತ್ತ ಮತ್ತು ಅರ್ಹತೆ :
ಎಲ್‌ಐಸಿಯ ವಿಮಾ ಬಚತ್‌ ಪಾಲಿಸಿಯನ್ನು 9, 12 ಮತ್ತು 15 ವರ್ಷಗಳಿಗೆ ತೆಗೆದುಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ 9 ವರ್ಷಗಳ ಪಾಲಿಸಿಯ ಕನಿಷ್ಟ ಮೊತ್ತವು 35,000 ರೂ.ಗಳಾಗಿದೆ. ಅದೇ ರೀತಿ 12 ವರ್ಷದ ಪಾಲಿಸಿಗೆ 50,000 ರೂ.ಗಳಾದರೆ, 15 ವರ್ಷದ ಪಾಲಿಸಿಗೆ 70,000 ರೂ.ಗಳಾಗಿದೆ.

ಈ ಯೋಜನೆಯ ಪಾಲಿಸಿದಾರ ವಯಸ್ಸು ಕನಿಷ್ಠ 15 ವರ್ಷ ಮತ್ತು ಗರಿಷ್ಠ 50 ವರ್ಷ ಆಗಿದೆ. ಗರಿಷ್ಠ ವಯೋಮಿತಿಯ ಪಾಲಿಸಿದಾರರು ಅವರ ಹಣವನ್ನು 9, 12 ಮತ್ತು 15 ವರ್ಷಗಳ ಪಾಲಿಸಿಯನ್ನು ಕ್ರಮವಾಗಿ 59, 62 ಮತ್ತು 65 ವರ್ಷಗಳ ಪಾಲಿಸಿಯ ಮ್ಯಾಚುರಿಟಿ ಅವಧಿಯ ನಂತರ ಪಡೆಯಬಹುದಾಗಿದೆ.

ವಿಮಾ ಬಚತ್‌ ಪ್ಲಾನ್‌ನ ಡೆತ್‌ ಬೆನಿಫಿಟ್‌:
ಪಾಲಿಸಿದಾರನು ಮೊದಲ ಐದು ಪಾಲಿಸಿ ವರ್ಷಗಳಲ್ಲಿ ಮರಣಹೊಂದಿದರೆ, ಅವನ ಅಥವಾ ಅವಳ ಕುಟುಂಬವು ಪಾಲಿಸಿಯ ಅಡಿಯಲ್ಲಿ ಖಚಿತವಾಗಿ ವಿಮಾ ಮೊತ್ತವನ್ನು ಪಡೆದುಕೊಳ್ಳುತ್ತದೆ. ಐದು ಪಾಲಿಸಿ ವರ್ಷಗಳನ್ನು ಪೂರೈಸಿದ ನಂತರ ಪಾಲಿಸಿದಾರನು ಮರಣ ಹೊಂದಿದರೆ ಆತನ ಅಥವಾ ಆಕೆಯ ಕುಟುಂಬವು ಲಾಯಲ್ಟಿ ಸೇರ್ಪಡೆಯೊಂದಿಗೆ ವಿಮಾ ಮೊತ್ತವನ್ನು ಪಡೆಯುತ್ತದೆ.

ಇದನ್ನೂ ಓದಿ : Senior Citizens : ಹಿರಿಯ ನಾಗರಿಕರಿಗೆ FDಗಳ ಮೇಲೆ ಹೆಚ್ಚಿನ ಬಡ್ಡಿ!!

ಇದನ್ನೂ ಓದಿ : Realme Buds Air 3 Neo : ಹೊಸ ಇಯರ್‌ ಬಡ್ಸ್‌ ಬಿಡುಗಡೆ ಮಾಡಿದ ರಿಯಲ್‌ಮಿ! 30 ಗಂಟೆ ಬ್ಯಾಟರಿ ಲೈಫ್‌ ನೀಡುವ ಏರ್‌ 3 ನಿಯೊ!!

(LIC Single Premium Policy returns you extra benefits)

Comments are closed.