India vs South Africa T20 series : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು!

ಗುವಾಹಟಿ: ರನ್ ಮಳೆಗೆ ಸಾಕ್ಷಿಯಾದ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯವನ್ನು ಭಾರತ 16 ರನ್’ಗಳಿಂದ ರೋಚಕವಾಗಿ ಗೆದ್ದುಕೊಂಡು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ (India vs South Africa T20 series) ಕೈವಶ ಮಾಡಿಕೊಂಡಿದೆ. ಭಾರತದ ಇನ್ನಿಂಗ್ಸ್ ವೇಳೆ ಮೈದಾನಕ್ಕೆ ಹಾವೊಂದು ನುಗ್ಗಿದ್ದರಿಂದ ಪಂದ್ಯ ಕೆಲ ಕಾಲ ಸ್ಥಗಿತಗೊಂಡ ಘಟನೆಯೂ ನಡೆದಿದೆ.

(India vs South Africa T20 series)ಗುವಾಹಟಿಯ ಬರ್ಸಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ (Assam Cricket Association) ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಒಟ್ಟು 40 ಓವರ್’ಗಳಲ್ಲಿ ಬರೋಬ್ಬರಿ 458 ರನ್ ಹರಿದು ಬಂತು. ಈ ವೇಳೆ ಎರಡೂ ತಂಡಗಳಿಂದ ಸಿಡಿದ ಬೌಂಡರಿ-ಸಿಕ್ಸರ್’ಗಳ ಸಂಖ್ಯೆ 65 (40 ಬೌಂಡರಿ, 25 ಸಿಕ್ಸರ್). ಈ ಪೈಕಿ ಭಾರತದ ದಾಂಡಿಗರು 25 ಬೌಂಡರಿ ಮತ್ತು 13 ಸಿಕ್ಸರ್’ಗಳನ್ನು ಬಾರಿಸಿದರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್’ಗಳ ಭಾರೀ ಮೊತ್ತ ಕಲೆ ಹಾಕಿತು. ಓಪನರ್ ಕೆ.ಎಲ್ ರಾಹುಲ್ 28 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್’ಗಳನ್ನೊಳಗೊಂಡ 57 ರನ್ ಬಾರಿಸಿದ್ರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ ಅಜೇಯ 49 ರನ್ (7 ಬೌಂಡರಿ, 1 ಸಿಕ್ಸರ್) ಗಳಿಸಿದರು. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಕೇವಲ 22 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್’ಗಳನ್ನೊಳಗೊಂಡ ಸಿಡಿಲಬ್ಬರದ 61 ರನ್ ಬಾರಿಸಿದರು.


ನಂತರ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ವೀರೋಚಿತ ಸೋಲು ಅನುಭವಿಸಿತು. ಹರಿಣಗಳ ಪರ ಡೇವಿಡ್ ವಾರ್ನರ್ ಸ್ಫೋಟಕ ಶತಕ (106* ರನ್, 47 ಎಸೆತ, 8 ಬೌಂಡರಿ, 7 ಸಿಕ್ಸರ್) ಬಾರಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.

ಇದನ್ನೂ ಓದಿ : Mayank Agarwal : ಡಿಯರ್ ಮಯಾಂಕ್ ; “ಹೀಗೇ ಆಡಿದ್ರೆ ಟೀಮ್ ಇಂಡಿಯಾ ಕಂಬ್ಯಾಕ್ ಕನಸು ಮರೆತು ಬಿಡಿ”

ಇದನ್ನೂ ಓದಿ : Assam boy spent 23k to meet Virat Kohli : ವಿರಾಟ್ ಕೊಹ್ಲಿ ಸೆಲ್ಫಿಗಾಗಿ ಬರೋಬ್ಬರಿ 23 ಸಾವಿರ ಖರ್ಚು ಮಾಡಿದ ಅಸ್ಸಾಂ ಹುಡುಗ, ಅಭಿಮಾನಿಯ ಆಸೆ ನೆರವೇರಿಸಿದ ಕಿಂಗ್

ಇದನ್ನೂ ಓದಿ : Rajat Patidar : ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ RCB ಸ್ಟಾರ್ ಪಾಟಿದಾರ್

ಇದನ್ನೂ ಓದಿ : Road Safety World Series 2022: ಸಚಿನ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಇಂಡಿಯಾ ಲೆಜೆಂಡ್ಸ್

ಭಾರತ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 7ನೇ ಓವರ್’ನಲ್ಲಿ ಅಚ್ಚರಿಯ ಘಟನೆಯೊಂದು ನಡೆಯಿತು. ಮೈದಾನಕ್ಕೆ ಹಾವೊಂದು ನುಗ್ಗಿದ್ದರಿಂದ ಪಂದ್ಯ ಕೆಲ ನಿಮಿಷಗಳ ಕಾಲ ಸ್ಥಗಿತಗೊಂಡಿತು. ಟಿವಿ ಸ್ಕ್ರೀನ್’ನಲ್ಲಿ ಹಾವನ್ನು ನೋಡಿದ ಕೂಡಲೇ ಮೈದಾನಕ್ಕೆ ನುಗ್ಗಿದ ಕ್ರೀಡಾಂಗಣದ ಸಿಬ್ಬಂದಿ ಹಾವನ್ನು ಹಿಡಿದು ಪಂದ್ಯ ಮುಂದುವರಿಯಲು ನೆರವಾದರು.

A snake entered the field during the India vs South Africa T20 match!

Comments are closed.