Sumalatha join BJP: ನನ್ನ ಬೆಂಬಲ ನರೇಂದ್ರ ಮೋದಿ ಸರಕಾರಕ್ಕೆ: ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಅಧಿಕೃತ ಘೋಷಣೆ

ಮಂಡ್ಯ : (Sumalatha join BJP) ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ರಾಜಕೀಯ ಕುರುಕ್ಷೇತ್ರ ಮತ್ತೊಂದು ರಣಯುದ್ಧಕ್ಕೆ ಸಜ್ಜಾಗಿದೆ. ಇಂದು ದೇಶ ಅಭಿವೃದ್ಧಿ ಆಗುತ್ತಿರೋದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ. ನಾಲ್ಕು ವರ್ಷದಲ್ಲಿ ನಾನು ಮೋದಿಯವರು ಮಾಡಿದ ಅಭಿವೃದ್ದಿಯನ್ನು ನೋಡಿದ್ದೇನೆ ಎಂದು ಪ್ರಧಾನಿಯನ್ನು ಸುಮಲತಾ ಅಂಬರೀಷ್‌ ಹಾಡಿ ಹೊಗಳಿದ್ದು, ಈ ಮೂಲಕ ತಾನು ಬಿಜೆಪಿಗೆ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಅಂಬಿ ಅಗಲಿಕೆಯ ನಂತರ ಜನರಲ್ಲಿ ಸೆರೆಗೊಡ್ಡಿ ಮತ ಕೇಳಿದ್ದ ಸುಮಲತಾ ಅಂಬರೀಶ್​ ಇದೀಗ ಮತ್ತೊಂದು ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಪಕ್ಷೇತರ ಬಿಟ್ಟು ಬಿಜೆಪಿ ಪಕ್ಷಕ್ಕೆ ಹಾರುವುದಕ್ಕೆ ಸುಮಲತಾ ಅಂಬರೀಶ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಕುರಿತು ಇಂದು ತಮ್ಮ ನಿವಾಸದಲ್ಲಿಯೇ ಪತ್ರಿಕಾ ಸುದ್ದಿಗೋಷ್ಠಿಯನ್ನು ಸಹ ನಡೆಸಿದ್ದಾರೆ.

ಮಂಡ್ಯ ಚಾಮುಂಡೇಶ್ವರಿ ನಗರದ ಸುಮಲತಾ ಅಂಬರೀಷ್‌ ನಿವಾಸದಲ್ಲಿ ಸುಮಲತಾ ಸುದ್ದಿಗೋಷ್ಟಿ ನಡೆಸಿದ್ದು, ” ನಾನು ರಾಜಕೀಯಕ್ಕೆ ಪ್ರವೇಶಿಸಿ ನಾಲ್ಕು ವರ್ಷ ಆಗಿದೆ. ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಸಮಿಶ್ರ ಸರ್ಕಾರ ವೇಳೆ ಮುಖ್ಯಮಂತ್ರಿ ಮಗನನ್ನು ಎದುರಿಗೆ ನಿಂತಿದ್ದು ನನ್ನ ಸ್ವಾರ್ಥವಲ್ಲ. ಅಂದು ನನ್ನ ಬೆಂಬಲಕ್ಕೆ ನಿಂತಿದ್ದು ಅಂಬಿ ಅಪ್ತರು. ಜನ ನನ್ನನ್ನು ಪ್ರೀತಿಸುತ್ತಾರೆ ಅಶೀರ್ವಾದಿಸುತ್ತಾರೆ. ನಾಲ್ಕು ವರ್ಷದಲ್ಲಿ ರಾಜಕೀಯ ವಿಚಾರವಾಗಿ ನಾನು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದೇನೆ. ಹೀಗಾಗಿ ನಾನು ಬೇರೆ ದಾರಿ ಹುಡುಕಲು ಹೋಗುವುದಿಲ್ಲ. ಮಂಡ್ಯದಲ್ಲಿ ನನ್ನನ್ನು ಯಾವ ರೀತಿಯಲ್ಲಿ ನೋಡಿದ್ದಾರೆ ಎಂದು ನನಗೆ ಗೊತ್ತಿದೆ. ಪಕ್ಷೇತರ ಸಂಸದೆಯಾಗಿ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.” ಎಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನನ್ನ ಕೈ ಹಿಡಿದವರನ್ಜು ನಾನು ಎಂದಿಗೂ ಮರೆಯಲ್ಲ. ಬದಲಾವಣೆ ತರುವಂತಹ ಸಂದರ್ಭದಲ್ಲಿ ನನಗೆ ಶಕ್ತಿ ಬೇಕಿದೆ. ಅಂಬಿ ಕುಟುಂಬ ಎಂದಿಗೂ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ.

“ದೇಶದಲ್ಲಿ ಒಂದು ಸಮಯದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗ ಹರಡಿದ್ದು ಆ ವೇಳೆ ಶ್ರಮಪಟ್ಟು ಕೆಲಸ ಮಾಡಿದ್ದೇನೆ. ನನ್ನ ಸ್ವಂತ ಹಣದಲ್ಲೇ ನಾನು ಆಫೀಸ್‌ ನಡೆಸುತ್ತಿದ್ದೆ . ಎಂಪಿ ಅನ್ನೋದು ಇರಲಿ ಒಂದು ಹೆಣ್ಣು ಅನ್ನೋದನ್ನು ಯಾರು ನೋಡಲಿಲ್ಲ. ʼನಾನು ಮನಸ್ಸು ಮಾಡದಿದ್ರೆ ಮೈಶುಗರ್‌ ಓಪನ್‌ ಆಗುತ್ತಿರಲಿಲ್ಲ ಎಂದು ತಮ್ಮ ರಾಜಕೀಯ ಜೀವನದಲ್ಲಿ ನಡೆದ ಕಷ್ಟ ಕಾರ್ಪಣ್ಯಗಳನ್ನು ಹಂಚಿಕೊಂಡಿದ್ದಾರೆ. “ನನ್ನ ಮೇಲೆ ಎರಡು ಕಡೆಗಳಲ್ಲಿ ಹಲ್ಲೆಗೆ ಪ್ರಯತ್ನ ನಡೆದಿತ್ತು. ಭಷ್ಟಾಚಾರ ವಿರುದ್ಧ ಧನಿ ಎತ್ತಿದರೆ ಕೆಲವರಿಗೆ ಭಯ ಶುರುವಾಗುತ್ತದೆ ಎಂದು ಪರೋಕ್ಷವಾಗಿ ದಳಪತಿಗಳು ಮುಟ್ಟಿ ನೋಡಿಕೊಳ್ಳುವಂತೆ ಸುಮಲತಾ ಅಂಬರೀಶ್‌ ಟಾಂಗ್‌ ನೀಡಿದ್ದಾರೆ.

ಇದನ್ನೂ ಓದಿ : MP Sumalatha join BJP: ನಾಳೆ ಬಿಜೆಪಿ ಗೆ ಸೇರಲಿದ್ದಾರೆ ಸಂಸದೆ ಸುಮಲತಾ: ರೆಬೆಲ್‌ ಹೆಂಡತಿಯ ಒಳಗುಟ್ಟು ಬಯಲು

ಮಂಡ್ಯ ಜಿಲ್ಲೆಗೆ ಮೈಸೂರು ಮಹರಾಜರು ಕೊಡುಗೆ ಕೊಟ್ಟಿದ್ದಾರೆ. ಕನ್ನಂಬಾಡಿ ಇಲ್ಲ ಅಂದ್ರೆ ಮಂಡ್ಯವೇ ಇಲ್ಲ. ಮಂಡ್ಯ ಜಿಲ್ಲೆಯನ್ನು ನಾವು ಕಾಪಾಡಿಕೊಳ್ಳಬೇಕು. ಇಲ್ಲಿ ಬರೀ ರಾಜಕಾರಣ ಅಭಿವೃದ್ಧಿ ಬೇಡ. ರಾಜಕಾರಣದ ಭಾಷಣವನ್ನು ಕೇಳಿಕೊಂಡು ಜನರು ಇರಬೇಕಾದ ಪರಿಸ್ಥಿತಿಯಿದೆ ಎಂದಿದ್ದಾರೆ. ಇದರ ಜೊತೆಗೆ ಮಂಡ್ಯದಲ್ಲಿ ಏನ್‌ ಉದ್ದಾರ ಮಾಡಿದ್ದೀರಾ? ಎಂದು ಮಾಜಿ ಸಿಎಂ ಹೆಚ್‌ಡಿಕೆ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪಕ್ಷದ ವಿರುದ್ಧ ಸುಮಲತಾ ಕಿಡಿಕಾರಿದ್ದಾರೆ. ಇಂದು ದೇಶ ಅಭಿವೃದ್ಧಿ ಆಗುತ್ತಿರೋದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ. ನಾಲ್ಕು ವರ್ಷದಲ್ಲಿ ನಾನು ಮೋದಿಯವರು ಮಾಡಿದ ಅಭಿವೃದ್ದಿಯನ್ನು ನೋಡಿದ್ದೇನೆ ಎಂದು ಪ್ರಧಾನಿಯನ್ನು ಸುಮಲತಾ ಅಂಬರೀಷ್‌ ಹಾಡಿ ಹೊಗಳಿದ್ದು, ಈ ಮೂಲಕ ತಾನು ಬಿಜೆಪಿಗೆ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Sumalatha join BJP: My support for Narendra Modi government: Sumalatha official announcement about joining BJP

Comments are closed.