ಸೋಮವಾರ, ಏಪ್ರಿಲ್ 28, 2025
Homekarnatakaಕರ್ನಾಟಕದ ವಿರುದ್ಧವೇ ಸಮರ ಸಾರಿದ ಅಣ್ಣಾಮಲೈ…! ಮೇಕೆದಾಟು ವಿರೋಧಿಸಿ ಉಪವಾಸ ಸತ್ಯಾಗ್ರಹ…!!

ಕರ್ನಾಟಕದ ವಿರುದ್ಧವೇ ಸಮರ ಸಾರಿದ ಅಣ್ಣಾಮಲೈ…! ಮೇಕೆದಾಟು ವಿರೋಧಿಸಿ ಉಪವಾಸ ಸತ್ಯಾಗ್ರಹ…!!

- Advertisement -

ಚೆನ್ನೈ: ಖಾಕಿ ತೊಟ್ಟು ಕರ್ನಾಟಕದಾದ್ಯಂತ ಕೆಲಸ ಮಾಡಿ ಕರ್ನಾಟಕದ ಸಿಂಗಂ ಎನ್ನಿಸಿಕೊಂಡ ಮಾಜಿ ಐಪಿಎಸ್ಅಧಿಕಾರಿ ಅಣ್ಣಾಮಲೈ ಈಗ ಕರ್ನಾಟಕದ ವಿರುದ್ಧವೇ ಸಮರ ಸಾರಿದ್ದಾರೆ. ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ, ಅಗಸ್ಟ್ 5 ರಂದು ಕರ್ನಾಟಕ ಸರ್ಕಾರ ಹಾಗೂ ಮೇಕೆದಾಟು ಯೋಜನೆ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಘೋಷಿಸಿದ್ದಾರೆ.

ಕರ್ನಾಟಕದ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಮೇಕೆದಾಟು ಯೋಜನೆ ಸಧ್ಯದಲ್ಲೇ ಆರಂಭವಾಗಲಿದೆ ಎಂದು ಘೋಷಿಸಿದ ಬೆನ್ನಲ್ಲೇ  ಅಣ್ಣಾಮಲೈ ಮತ್ತೊಮ್ಮೆ ಯೋಜನೆ ವಿರೋಧಿಸಿದ್ದು, ಉಪವಾಸ ಸತ್ಯಾಗ್ರಹ ನಡೆಸೋದಾಗಿ ಎಚ್ಚರಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ, ನಾವು ಬಿಜೆಪಿಯವರೇ ಆಗಿದ್ದರೂ ಈ ಯೋಜನೆಯನ್ನು ತಮಿಳುನಾಡಿನ ಹಿತರಕ್ಷಣೆಗಾಗಿ ವಿರೋಧಿಸುತ್ತೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ. 

ಈ ಹಿಂದೆ ತಮಿಳುನಾಡಿನ ಸಿಎಂ  ಸ್ಟಾಲಿನ್ ಮಾಜಿಮುಖ್ಯಮಂತ್ರಿ ಬಿಎಸ್ವೈಗೆ ಪತ್ರ ಬರೆದು ಮೇಕೆದಾಟು ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದರು. ಈ ವೇಳೆಯೂ ಅಣ್ಣಾಮಲೈ ತಮಿಳುನಾಡು ಬಿಜೆಪಿ ಈ ವಿಚಾರದಲ್ಲಿ ತಮಿಳುನಾಡು ಸರ್ಕಾರದ ನಿಲುವನ್ನೇ ಬೆಂಬಲಿಸುತ್ತದೆ ಎಂದಿದ್ದರು.

RELATED ARTICLES

Most Popular