ಕೇರಳ ಬೆನ್ನಲ್ಲೇ ಹೆಚ್ಚುತ್ತಿದೆ ಕೊರೊನಾ : ಕರ್ನಾಟಕದಲ್ಲೂ ಶುರುವಾಯ್ತಾ ಮೂರನೇ ಅಲೆ

ಬೆಂಗಳೂರು : ಕಳೆದ ಹಲವು ದಿನಗಳಿಂದಲೂ ಇಳಿಕೆಯನ್ನು ಕಾಣುತ್ತಿದ್ದ ಕೊರೊನಾ ವೈರಸ್‌ ಸೋಂಕು ಇದೀಗ ಏರಿಕೆಯನ್ನು ಕಾಣುತ್ತಿದೆ. ಕೇರಳದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕರ್ನಾಟಕದಲ್ಲಿಯೂ ಮೂರನೇ ಅಲೆ ಶುರುವಾಗಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ಸಿಲಿಕಾನ್‌ ಸಿಟಿ ಬೆಂಗಳೂರು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಗುರುವಾರ 2,052 ಹೊಸ ಸೋಂಕಿನ ಪ್ರಕರಣ ಗಳು ವರದಿಯಾಗಿವೆ. ಬುಧವಾರ 1,531 ಪ್ರಕರಣ ದಾಖಲಾಗಿದ್ದು, ಕೇವಲ ಒಂದೇ ದಿನದಲ್ಲಿ ಶೇಕಡಾ 34 ರಷ್ಟು ಕೊರೊನಾ ಪ್ರಕರಣ ಏರಿಕೆಯನ್ನು ಕಂಡಿದೆ.

ಬೆಂಗಳೂರಲ್ಲಿ ಒಂದೇ ದಿನ 505 ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 391 ಪ್ರಕರಣ ದಾಖಲಾಗಿದೆ. ಅಲ್ಲದೇ ರಾಜ್ಯದಲ್ಲಿ 23,253 ಸಕ್ರಿಯ ಪ್ರಕರಣಗಳಿವೆ. ಗುರುವಾರ ಒಟ್ಟ 1,48,861 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಸದ್ಯ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 1.37 ಇದೆ.

ರಾಜ್ಯದಲ್ಲಿ ಇಳಿಕೆಯತ್ತ ಸಾಗುತ್ತಿದ್ದ ಕೊರೊನಾ ಸೋಂಕು ಇದೀಗ ನಿಧಾನವಾಗಿ ಏರಿಕೆಯನ್ನು ಕಾಣುತ್ತಿರುವುದು ಆತಂಕ ಮೂಡಿಸಿದೆ. ಕೇರಳದ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗುತ್ತಿದ್ದರೂ ಕೂಡ ಸೋಂಕು ಏರಿಕೆಯಾಗುತ್ತಿದೆ. ಇಂದೂ ಕೂಡ ನಿನ್ನೆಗಿಂತ ಹೆಚ್ಚಿನ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Comments are closed.