bjp janostava postpone : ಉಮೇಶ್​ ಕತ್ತಿ ನಿಧನ : ಬಿಜೆಪಿ ಜನೋತ್ಸವ ಕಾರ್ಯಕ್ರಮ ಸೆ.11ಕ್ಕೆ ಮುಂದೂಡಿಕೆ

ಬೆಂಗಳೂರು : bjp janostava postpone : ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಜನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಬೇಕು ಅಂತಾ ಸಿದ್ಧತೆ ನಡೆಸುತ್ತಲೇ ಇದೆ. ಆದರೆ ಅದನೋ ಗೊತ್ತಿಲ್ಲ ಬಿಜೆಪಿಯ ಈ ಜನೋತ್ಸವ ಕಾರ್ಯಕ್ರಮಕ್ಕೆ ಪದೇ ಪದೇ ವಿಘ್ನಗಳು ಎದುರಾಗುತ್ತಲೇ ಇದೆ. ಸಚಿವ ಉಮೇಶ್​ ಕತ್ತಿ ನಿಧನದ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್​ 11ಕ್ಕೆ ಮುಂದೂಡಲಾಗಿದೆ.


ನಾಳೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮವನ್ನು ನಡೆಸಬೇಕೆಂದು ಎಲ್ಲಾ ರೀತಿಯ ತಯಾರಿಗಳನ್ನು ಮಾಡಲಾಗಿತ್ತು. ಆದರೆ ಸಚಿವ ಉಮೇಶ್​ ಕತ್ತಿ ನಿನ್ನೆ ರಾತ್ರಿ ಹೃದಯಾಘಾತದಿಂದ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಒಂದು ದಿನಗಳ ಶೋಕಾಚರಣೆಯನ್ನೂ ಆಚರಿಸಲಾಗುತ್ತಿದೆ. ಅಲ್ಲದೇ ಸಂಪುಟದ ಸಚಿವರೊಬ್ಬರು ಮೃತರಾದ ಈ ದುಃಖದ ಸಂದರ್ಭದಲ್ಲಿ ಜನೋತ್ಸವದಂತಹ ಕಾರ್ಯಕ್ರಮವನ್ನು ಆಚರಿಸುವುದು ಬೇಡ ಎಂದು ನಿರ್ಧರಿಸಿದ ಬೊಮ್ಮಾಯಿ ಸರ್ಕಾರ ಈ ನಿರ್ಧಾರವನ್ನು ಘೋಷಿಸಿದೆ.


ಉಮೇಶ್​ ಕತ್ತಿ ನಿಧನಕ್ಕೂ ಮುನ್ನಾ ಕೂಡ ಬಿಜೆಪಿಯ ಜನೋತ್ಸವ ಕಾರ್ಯಕ್ರಮ ಆಚರಣೆಯು ವಿರೋಧವನ್ನು ಎದುರಿಸುತ್ತಲೇ ಇತ್ತು. ರಾಜ್ಯದಲ್ಲಿ ನೆರೆ ಬಂದಿದೆ. ಸಾಕಷ್ಟು ಜನರು ಮನೆ – ಮಠಗಳನ್ನು ಕಳೆದುಕೊಂಡಿದ್ದಾರೆ. ಜೀವ ಹಾನಿ ಕೂಡ ಸಂಭವಿಸಿದೆ. ರಾಜ್ಯದ ಜನತೆಯ ಬದುಕೇ ದುಸ್ಥರಗೊಂಡಿರುವ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಂಭ್ರಮ ಬೇಕೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಲೇ ಇದ್ದವು.


ಈ ಹಿಂದೆ ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿಯೇ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರವು ಸಾಧನಾ ಸಮಾವೇಶ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಆದರೆ ಹಿಂದೂ ಕಾರ್ಯಕರ್ತ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್​ ನೆಟ್ಟಾರು ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದರು. ಪಕ್ಷದ ಕಾರ್ಯಕರ್ತ ಮೃತಪಟ್ಟ ಹಿನ್ನೆಲೆಯಲ್ಲಿ ನಾವು ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸುತ್ತಿದ್ದೇವೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.

ಇದನ್ನು ಓದಿ : Umesh Katthi : ಬೆಂಗಳೂರಿನಿಂದ ಸಚಿವ ಉಮೇಶ್​ ಕತ್ತಿ ಪಾರ್ಥಿವ ಶರೀರ ಏರ್​ಲಿಫ್ಟ್​ : ಜನೋತ್ಸವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಎಂದ ಆರಗ ಜ್ಞಾನೇಂದ್ರ

ಇದನ್ನೂ ಓದಿ : Umesh Katthi :ಎಂಟು ಬಾರಿ ಶಾಸಕನಾಗಿ ಆಯ್ಕೆ, ನೇರ ನುಡಿ, ಮುತ್ಸದ್ಧಿ ನಾಯಕ : ಹೀಗಿತ್ತು ಕತ್ತಿ ನಡೆದುಬಂದ ರಾಜಕೀಯ ಹಾದಿ

bjp janostava postpone over minister umesh katti death

Comments are closed.