Union Minister Prahlad Joshi : ‘ಯುವತಿಯರು ಕೆಲಸಕ್ಕಾಗಿ ಮಂಚ ಹತ್ತಬೇಕು’ : ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಪ್ರಹ್ಲಾದ್​ ಜೋಶಿ ಆಕ್ಷೇಪ

ಧಾರವಾಡ : Union Minister Prahlad Joshi : ಬಿಜೆಪಿ ಸರ್ಕಾರದ ಅವಧಿಯಲ್ಲಿ ಲಂಚ ಹಾಗೂ ಮಂಚಕ್ಕೆ ಮಾತ್ರ ಬೆಲೆ ಉಳಿದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಯೊಂದು ಸರ್ಕಾರಿ ಉದ್ಯೋಗ ಕೂಡ ಮಾರಾಟಕ್ಕಿದೆ . ಕೆಲಸ ಬೇಕು ಅಂದರೆ ರಾಜ್ಯದ ಯುವತಿಯರು ಮಂಚ ಹತ್ತಬೇಕು ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್​ ಖರ್ಗೆ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ವಿಚಾರವಾಗಿ ಇಂದು ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಾಂಗ್ರೆಸ್​ ಒಂದು ಅಯೋಗ್ಯ ಪಕ್ಷ ಎಂದು ಕಿಡಿಕಾರಿದ್ದಾರೆ.

ಕೆಲಸ ಪಡೆಯಬೇಕು ಅಂದರೆ ಯುವತಿಯರು ಮಂಚ ಹತ್ತಬೇಕು ಎಂದು ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ. ಅವರ ಲಂಚ ಹಾಗೂ ಮಂಚದ ಹೇಳಿಕೆಯಲ್ಲಿ ನಾನು ಎರಡನೇ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇನೆ. ಹೆಣ್ಣುಮಕ್ಕಳ ಬಗ್ಗೆ ಅಪಾರ ಶ್ರದ್ಧ, ಗೌರವ ಇರುವ ದೇಶ ನಮ್ಮದು.ಆದರೆ ಪ್ರಿಯಾಂಕ್​ ಖರ್ಗೆ ನಮ್ಮ ರಾಜ್ಯದ ಜನತೆ ಕೆಲಸಕ್ಕಾಗಿ ಮಂಚ ಹತ್ತುತ್ತಾರೆಂದು ಹೇಳಿಕೆ ನೀಡಿದ್ದಾರೆ . ಇದು ಅತ್ಯಂತ ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಇವರಯ ಯಾರು..? ಭ್ರಷ್ಟಾಚಾರದ ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿ ಉತ್ಪತ್ತಿ ಮಾಡಿದ್ದೇ ಇವರು. ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್​ ಅನೇಕ ಹಗರಣಗಳನ್ನು ಮಾಡಿದೆ. 2ಜಿ, ಕಾಮನ್​​ವೆಲ್ತ್​ ಒಂದಾ -ಎರಡಾ..? ದಿನ ಬೆಳಗಾದರೆ ಹಗರಣಗಳ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಭಾರತಕ್ಕೆ ಬರೋರಿಗೆ ವೀಸಾ ಕೊಡಲು ದುಡ್ಡು ತೆಗೆದುಕೊಂಡಿದ್ದರು. ಇಂತಹ ಅಯೋಗ್ಯ ಕಾಂಗ್ರೆಸ್​ ಪಕ್ಷದ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ಕೇಳಿ ನಗು ಬರುತ್ತಿದೆ. ಇಂತಹ ಜೇಳಿಕೆ ನೀಡಿದ ಪ್ರಿಯಾಂಕ್​ ಖರ್ಗೆ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿ : Salman Rushdie : ವಿವಾದಿತ ಲೇಖಕ ಸಲ್ಮಾನ್​ ರಶ್ದಿಗೆ ಬಹಿರಂಗ ವೇದಿಕೆಯಲ್ಲಿ ಚಾಕು ಇರಿತ : ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ

ಇದನ್ನೂ ಓದಿ : sonia gandhi tests positive :ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್​​

ಇದನ್ನೂ ಓದಿ : national flag :ಹರ್​ಘರ್​ ತಿರಂಗಾ ಅಭಿಯಾನ : ಮನೆಯಲ್ಲೇ ತ್ರಿವರ್ಣ ಧ್ವಜ ಹಾರಿಸಿದವರು ರಾಷ್ಟ್ರಧ್ವಜದ ಘನತೆ ಮರೆಯಿರಿ

Union Minister Prahlad Joshi outraged against Congress MLA Priyank Kharge

Comments are closed.