vijayendra will contest from shikaripura : ಶಿಕಾರಿಪುರದಲ್ಲಿನ್ನು ವಿಜಯೇಂದ್ರ ಸ್ಪರ್ಧೆ : ಬಿಎಸ್​ವೈ ರಾಜಕೀಯ ನಿವೃತ್ತಿ ಸಾಧ್ಯತೆ

ಶಿಕಾರಿಪುರ : vijayendra will contest from shikaripura : ಶಿಕಾರಿಪುರ ಎಂಬ ಹೆಸರು ಕೇಳಿದ್ರೆ ಸಾಕು ಮೊದಲು ನೆನಪಾಗೋದೇ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ. ವಿಧಾನಸಭಾ ಚುನಾವಣೆ ಬಂತೆಂದರೆ ಶಿಕಾರಿಪುರವನ್ನೇ ಆಯ್ಕೆ ಮಾಡಿಕೊಳ್ಳುವ ಬಿಎಸ್​ವೈ ಈ ಕ್ಷೇತ್ರದ ಪಾಲಿನ ಗೆಲ್ಲುವ ಕುದುರೆ ಎಂದು ಎನಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಸ್ಪರ್ಧಿಸಿದರೂ ಶಿಕಾರಿಪುರದ ಜನತೆ ಅವರನ್ನೇ ಗೆಲ್ಲಿಸ್ತಾರೆ ಎನ್ನುವುದನ್ನು ಖಡಾಖಂಡಿತವಾಗಿ ಹೇಳಬಹುದು. ಆದರೆ ಬಿ,ಎಸ್​ ಯಡಿಯೂರಪ್ಪ ತಮ್ಮ ಪುತ್ರನಿಗಾಗಿ ಕ್ಷೇತ್ರ ತ್ಯಾಗದ ಮಾತುಗಳನ್ನಾಡಿದ್ದಾರೆ.


ಶಿಕಾರಿಪುರದಲ್ಲಿರುವ ಅಂಜನಾಪುರ ಡ್ಯಾಂಗೆ ಬಾಗೀನವನ್ನು ಅರ್ಪಿಸಿ ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಶಿಕಾರಿಪುರದಿಂದ ಕಣಕ್ಕಿಳಿಯುತ್ತಿಲ್ಲ. ಶಿಕಾರಿಪುರ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ,ವೈ ವಿಜಯೇಂದ್ರ ಎದುರಿಸಲಿದ್ದಾರೆ. ಹೀಗಾಗಿ ನನಗೆ ನೀಡುತ್ತಿದ್ದಕ್ಕಿಂತಲೂ ಹೆಚ್ಚಿನ ಮತಗಳನ್ನು ಶಿಕಾರಿಪುರದ ಜನತೆ ವಿಜಯೇಂದ್ರನಿಗೆ ನೀಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.


ವಿಜಯೇಂದ್ರ ಹಳೆ ಮೈಸೂರು ಭಾಗದಿಂದ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ. ಆದರೆ ಶಿಕಾರಿಪುರ ಕ್ಷೇತ್ರ ತೆರವಾಗುತ್ತಿದೆ, ಹೀಗಾಗಿ ಅವರು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯನ್ನು ಶಿಕಾರಿಪುರ ಕ್ಷೇತ್ರದಿಂದಲೇ ಎದುರಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಬರೋಬ್ಬರಿ 8 ಬಾರಿ ಬಿ.ಎಸ್​ ಯಡಿಯೂರಪ್ಪ ಇದೇ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸೌಧಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಬಾರಿ ತಮ್ಮ ಪುತ್ರನಿಗಾಗಿ ಬಹು ದೊಡ್ಡ ರಾಜಕೀಯ ತ್ಯಾಗವನ್ನೇ ಮಾಡಿದ್ದಾರೆ.

ಬಿಜೆಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ನಾಯಕರನ್ನು ಹಿಂದಕ್ಕೆ ಸರಿಸಿ ಕಿರಿಯರಿಗೆ ಅವಕಾಶ ನೀಡುವ ಕೆಲಸವನ್ನು ಹೈಕಮಾಂಡ್​ ಮಾಡುತ್ತಿದೆ. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿರಿಯರಿಗೆ ಪಕ್ಷದಿಂದ ಟಿಕೆಟ್​ ಸಿಗುವುದು ಕೂಡ ಬಹುತೇಕ ಅನುಮಾನ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಿ.ಎಸ್​ ಯಡಿಯೂರಪ್ಪ ರಾಜಕೀಯ ನಿವೃತ್ತಿಯನ್ನು ಪಡೆಯಲು ನಿರ್ಧರಿಸಿ ಪುತ್ರನಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಅನೇಕ ದಿನಗಳಿಂದ ಬಿ.ವೈ ವಿಜಯೇಂದ್ರ ಕೆ.ಆರ್​ ಪೇಟೆಯಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು . ಆದರೆ ಇದೀಗ ಯಡಿಯೂರಪ್ಪ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡುವ ಮೂಲಕ ರಾಜಕೀಯದಲ್ಲಿ ಹೊಸ ತಿರುವನ್ನು ನೀಡಿದಂತಾಗಿದೆ.

ಇದನ್ನು ಓದಿ :niveditha gowda : ಮಿಸೆಸ್​ ಇಂಡಿಯಾ ಸ್ಫರ್ಧೆಯಲ್ಲಿ ಸಾಧನೆ : ವಿಶೇಷ ಟೈಟಲ್​ ಮುಡಿಗೇರಿಸಿಕೊಂಡ ನಿವೇದಿತಾ ಗೌಡ

ಇದನ್ನೂ ಓದಿ : Senior Citizen FDs : ಈ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ 7% ಗಿಂತಲೂ ಅಧಿಕ ಬಡ್ಡಿ ನೀಡುತ್ತವೆ!

vijayendra will contest from shikaripura big announcement from yediyurappa

Comments are closed.