Senior Citizen FDs : ಈ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ 7% ಗಿಂತಲೂ ಅಧಿಕ ಬಡ್ಡಿ ನೀಡುತ್ತವೆ!

Senior Citizen FDs : ಷೇರು ಮಾರುಕಟ್ಟೆಯು (Stock Market) ಹೆಚ್ಚಿನ ಆದಾಯವನ್ನು ನೀಡುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಭಾರತೀಯರು ತಮ್ಮ ಇಳಿ ವಯಸ್ಸಿನ ಆರ್ಥಿಕ ಸ್ವಾವಲಂಬನೆಗಾಗಿ ಸ್ಥಿರ ಠೇವಣಿಗಳ (FDs) ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರಸ್ತುತ, ಹಣದುಬ್ಬರವು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಹೂಡಿಕೆಗಳಿಂದ ಬರುವ ಆದಾಯದ ಮೇಲೆ ಹೊಡೆತ ನೀಡಿದೆ.

ಜೂನ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಸಾಲದ ದರಗಳಲ್ಲಿ ಹೆಚ್ಚಳವನ್ನು ಘೋಷಿಸಿತ್ತು. ಇದು ಬ್ಯಾಂಕುಗಳನ್ನು FD ಬಡ್ಡಿದರಗಳನ್ನು ಹೆಚ್ಚಿಸುವಂತೆ ಮಾಡಿತು. ಈಗ, ಕೆಲವು ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಕೆಲವು ಅವಧಿಗಳಲ್ಲಿ ಹೆಚ್ಚಿನ ಬಡ್ಡಿದರಗಳನ್ನು ಸಹ ನೀಡುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಬ್ಯಾಂಕ್‌ಗಳು ನಿರ್ದಿಷ್ಟ ಅವಧಿಯ FD ಗಳ ಮೇಲೆ ಹೆಚ್ಚಿನ ಬಡ್ಡಿದರ ನಿಗದಿಗೊಳಿಸಿವೆ.

ಹಿರಿಯ ನಾಗರಿಕರಿಗೆ FD ಮೇಲೆ ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್‌ಗಳು :

ಸೂರ್ಯೋದಯ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌:
ಈ ಬ್ಯಾಂಕ್‌ 999 ದಿನಗಳ ಅವಧಿಗೆ 7.99 ಶೇಕಡಾ ಬಡ್ಡಿ ದರವನ್ನು ನೀಡುತ್ತದೆ. 2 ವರ್ಷದಿಂದ 998 ದಿನಗಳು ಮತ್ತು 1000 ದಿನಗಳಿಂದ 3 ವರ್ಷಗಳವರೆಗಿನ ಅವಧಿಯ ಸ್ಥಿರ ಠೇವಣಿಗೆ 7.50 ಪ್ರತಿಶತ ಬಡ್ಡಿ ದರವನ್ನು ನಿಗದಿಸಿದೆ. 5 ವರ್ಷಗಳ ಅವಧಿಗೆ ಬ್ಯಾಂಕ್ 7.25 ಶೇಕಡಾ ಬಡ್ಡಿದರವನ್ನು ನೀಡುತ್ತದೆ.

ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್ :
ಈ ಸಣ್ಣ ಹಣಕಾಸು ಸಾಲ ನೀಡುವ ಬ್ಯಾಂಕ್‌ 18 ತಿಂಗಳು ಮತ್ತು 24 ತಿಂಗಳಿಗಿಂತ ಒಂದು ದಿನ ಕಡಿಮೆ ಅವಧಿಯ FD ಗೆ 7.30 ಪ್ರತಿಶತದಷ್ಟು ಬಡ್ಡಿದರ ನೀಡುತ್ತಿದೆ. 15 ತಿಂಗಳು ಮತ್ತು 18 ತಿಂಗಳಿಗಿಂತ ಒಂದು ದಿನ ಕಡಿಮೆ ಅವಧಿಯ FD ಗೆ 7.70 ಪ್ರತಿಶತದಷ್ಟು ಬಡ್ಡಿದರ ನಿಗದಿಗೊಳಿಸಿದೆ. ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್ 24 ತಿಂಗಳ ಅವಧಿಗೆ 7.20 ಶೇಕಡಾ, 1 ದಿನದಿಂದ 989 ದಿನಗಳವರೆಗೆ ಮತ್ತು 24 ತಿಂಗಳ ಅವಧಿಗೆ 7.80 ಶೇಕಡಾ ಬಡ್ಡಿ ದರವನ್ನು ನೀಡುತ್ತದೆ.

ಉತ್ಕರ್ಷ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್:
ಇದು 700 ರಿಂದ 1000 ದಿನಗಳ ಅವಧಿಯ FD ಗಳಿಗೆ 7.75 ಪ್ರತಿಶತದಷ್ಟು ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್‌ ಆಗಿದೆ. ಅಷ್ಟೇ ಅಲ್ಲದೇ ಇದು 365 ರಿಂದ 699 ದಿನಗಳ ಅವಧಿಯ ಸ್ಥಿರ ಠೇವಣಿ (FD)ಗೆ 7.40 ಪ್ರತಿಶತ ಮತ್ತು 1001 ದಿನದಿಂದ 5 ವರ್ಷಗಳವರೆಗಿನ ಅವಧಿಗೆ 7.25 ಪ್ರತಿಶತ ಬಡ್ಡಿ ಒದಗಿಸುತ್ತದೆ.

ESAF ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌:
ಎರಡರಿಂದ ಮೂರು ವರ್ಷಗಳ ಅವಧಿಗೆ ESAF ಬ್ಯಾಂಕ್ ಗರಿಷ್ಠ 7.75 ಶೇಕಡಾ ಬಡ್ಡಿ ದರವನ್ನು ನೀಡುತ್ತದೆ. 1 ವರ್ಷ, 1 ದಿನದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ FD ಗಳಿಗೆ 7.10 ಪ್ರತಿಶತ ಬಡ್ಡಿ ನೀಡುತ್ತದೆ.

ಈಕ್ವಿಟಾಸ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್ :
ಚೆನೈ ಮೂಲದ ಈಕ್ವಿಟಾಸ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್ 888 ದಿನಗಳ ಅವಧಿಗೆ ಗರಿಷ್ಠ 7.50 ಶೇಕಡಾ ಬಡ್ಡಿ ದರವನ್ನು ನೀಡುತ್ತದೆ. ಇದು 889 ದಿನಗಳಿಂದ 3 ವರ್ಷಗಳವರೆಗಿನ ಅವಧಿಯ ಮೇಲೆ 7.40 ಪ್ರತಿಶತವನ್ನೂ ಮತ್ತು ಒಂದು ವರ್ಷದಿಂದ 18 ತಿಂಗಳವರೆಗಿನ ಅವಧಿಗೆ 7.10 ಶೇಕಡಾ ಬಡ್ಡಿ ದರವನ್ನು ನೀಡುತ್ತದೆ.

AU ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್:
ಜೈಪುರ ಮೂಲದ AU ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ 24 ರಿಂದ 45 ತಿಂಗಳುಗಳು ಮತ್ತು 60 ರಿಂದ 120 ತಿಂಗಳುಗಳ ಅವಧಿಗೆ 7.40 ಪ್ರತಿಶತದಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಈ ಬ್ಯಾಂಕ್‌ 12 ತಿಂಗಳಿನ ಮೇಲೆ 1 ದಿನ ಮತ್ತು 15 ತಿಂಗಳವರೆಗಿನ FD ಗಳಿಗೆ 7.10 ಪ್ರತಿಶತ ಬಡ್ಡಿ ನೀಡುತ್ತದೆ.

ಇದನ್ನೂ ಓದಿ : Grand Vitara : ಭಾರತದ ಹೊಸದಾದ ಕೊಂಪ್ಯಾಕ್ಟ್‌ SUV! 6 ಏರ್‌ಬ್ಯಾಗ್‌ ನಿಂದ ಹೆಚ್ಚಿನ ಸುರಕ್ಷತೆ ನೀಡುವ ಗ್ರಾಂಡ್‌ ವಿಟಾರಾ!!

ಇದನ್ನೂ ಓದಿ : Flipkart Big Saving Day Sale : ಜುಲೈ 23 ರಿಂದ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ಆರಂಭ !!ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ಭಾರಿ ರಿಯಾಯಿತಿ!!

(Senior Citizen FDs Banks offering FD interest rates above 7percent)

Comments are closed.