10 ವರ್ಷಗಳಿಂದ ಆಧಾರ್​ ಕಾರ್ಡ್ ಮಾಹಿತಿ ಅಪ್​ಡೇಟ್​ ಮಾಡಿಲ್ಲವೇ..? ಡಿ.14ರ ಒಳಗೆ ಉಚಿತವಾಗಿ ಮಾಡಿ

Aadhaar card Free Updates : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಡಿಸೆಂಬರ್​ 14ರವರೆಗೆ ಆನ್​ಲೈನ್​ನಲ್ಲಿ ಆಧಾರ್​ ಕಾರ್ಡ್ ಸಂಬಂಧಿಸಿದ ಯಾವುದೇ ಅಪ್​ಡೇಟ್​ಗಳಿಗೆ ಕನಿಷ್ಟ 50 ರೂಪಾಯಿ ಮಾತ್ರ ಪಾವತಿಸ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

Aadhaar card Free Updates : ಭಾರತದ ಪ್ರಜೆಗಳಿಗೆ ಆಧಾರ್​ ಕಾರ್ಡ್​ ಎಷ್ಟು ಮುಖ್ಯ ಅನ್ನೋದನ್ನು ವಿವರಿಸಿ ಹೇಳಬೇಕಾಗಿಲ್ಲ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಡಿಸೆಂಬರ್​ 14ರವರೆಗೆ ಆನ್​ಲೈನ್​ನಲ್ಲಿ ಆಧಾರ್​ ಕಾರ್ಡ್ ಸಂಬಂಧಿಸಿದ ಯಾವುದೇ ಅಪ್​ಡೇಟ್​ಗಳಿಗೆ ಕನಿಷ್ಟ 50 ರೂಪಾಯಿ ಮಾತ್ರ ಪಾವತಿಸ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಹಾಗೂ ಇಮೇಲ್​​ ಸೇರಿದಂತೆ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳ ಬಹುದಾಗಿದೆ.

Aadhaar Card Udaptes Aadhaar Details Not Updates in 10 Years Change Adress and Other Detail Online for free before december 14
Image Credit to Original Source

ಆದರೆ ಆಧಾರ್​ ಕಾರ್ಡ್​ನಲ್ಲಿರುವ ಯಾವುದೇ ಮಾಹಿತಿಯನ್ನು ನೀವು ಆನ್​ಲೈನ್​ಲ್ಲಿ ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ. ಫೋಟೋ ಹಾಗೂ ಬಯೋಮೆಟ್ರಿಕ್​ ವಿವರಗಳನ್ನು ಬದಲಾವಣೆ ಮಾಡುವವರು ನೇರವಾಗಿ ಆಧಾರ್​ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಹಾಗೂ ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಫಿಲ್​ ಮಾಡಬೇಕು. ಫಿಂಗರ್​ಪ್ರಿಂಟ್​ ಹಾಗೂ ಕಣ್ಣಿನ ಫೋಟೋವನ್ನು ತೆಗೆಯಲು ವಿಶೇಷ ಸಾಧನದ ಅವಶ್ಯಕತೆ ಇರೋದ್ರಿಂದ ಇದನ್ನು ನೀವು ಬೇರೆ ಎಲ್ಲಿಯೂ ನವೀಕರಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀವು ಆಧಾರ್​ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ : ಹೊಸ ಆಧಾರ್ ಕಾರ್ಡ್‌ ಮಾಡಿಸಲು ಈ ದಾಖಲೆಗಳು ಕಡ್ಡಾಯ : ಹೊಸ ಮಾರ್ಗಸೂಚಿಯಲ್ಲೇನಿದೆ ?

ಆಧಾರ್ ಕಾರ್ಡ್ ನವೀಕರಿಸುವುದು ಏಕೆ ಕಡ್ಡಾಯ..?

ಆಧಾರ್​ ಕಾರ್ಡ್​ಗಳನ್ನು ನಿರ್ವಹಣೆ ಮಾಡುವ UIDAI ಸಂಸ್ಥೆಯು ಪ್ರತಿ 10 ವರ್ಷಕ್ಕೆ ಒಮ್ಮೆ ಆಧಾರ್​ ಕಾರ್ಡ್ ಫೋಟೋ ನವೀಕರಿಸುವುದು ಕಡ್ಡಾಯ ಎಂದು ಹೇಳಿದೆ. 10 ವರ್ಷಗಳ ಹಿಂದೆ ನೀವು ನೀಡಿರುವ ದಾಖಲೆಗಳು ಸರಿಯಾಗಿದೆಯೇ ಅಥವಾ ದಾಖಲೆಗಳನ್ನು ನವೀಕರಣಗೊಳಸಬೇಕೆ ಎಂಬುದನ್ನು ನೀವು ಖಾತರಿಪಡಿಸಬೇಕಾಗುತ್ತದೆ .

ಮದುವಯಾದ ಬಳಿಕ ಹೆಸರು ಹಾಗೂ ವಿಳಾಸಂದಹ ಮೂಲಭೂತ ವಿವರಗಳನ್ನು ಬದಲಾವಣೆ ಮಾಡಬೇಕಾಗುತ್ತದೆ . ಹೊಸ ಪ್ರದೇಶಗಳಿಗೆ ಸ್ಥಳಾಂತರಗೊಂಡಾಗಲೂ ವಿಳಾಸ ಬದಲಾವಣೆ ಮಾಡಬೇಕು. ಕೆಲವರಿಗೆ ಮೊಬೈಲ್​ ಸಂಖ್ಯೆ ಬದಲಾವಣೆ ಮಾಡಬೇಕಾಗಿರುತ್ತದೆ. ಈ ಎಲ್ಲಾ ಕಾರ್ಯಗಳನ್ನು ನೀವು ಆನ್​ಲೈನ್​ನಲ್ಲಿ ಮಾಡಬಹುದಾಗಿದೆ.

ಇದನ್ನೂ ಓದಿ : ಜನಧನ್‌ ಖಾತೆ ಹೊಂದಿದವರಿಗೆ ಗುಡ್‌ನ್ಯೂಸ್‌ : ನಿಮ್ಮ ಖಾತೆಗೆ ಜಮೆ ಆಗಲಿದೆ 2 ಲಕ್ಷ ರೂಪಾಯಿ

Aadhaar Card Udaptes Aadhaar Details Not Updates in 10 Years Change Adress and Other Detail Online for free before december 14
Image Credit to Original Source

Aadhaar Card Updates : ಆನ್​ಲೈನ್​ನಲ್ಲಿ ಆಧಾರ್​ ಕಾರ್ಡ್ ಅಪ್​ಡೇಟ್ ಮಾಡುವುದು ಹೇಗೆ..?
ಆನ್​ಲೈನ್​ನಲ್ಲಿ ನಿಮ್ಮ ಆಧಾರ್​ ಕಾರ್ಡ್​ ಅಪ್​ಡೇಟ್​ ಮಾಡಲು ಹಂತ ಹಂತವಾದ ಮಾಹಿತಿ ಇಲ್ಲಿದೆ ನೋಡಿ

  • ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​((uidai.gov.in) ಗೆ ಭೇಟಿ ನೀಡಿ. ಇಲ್ಲಿ ಲಾಗಿನ್​ ಐಡಿ ಹಾಗೂ ಪಾಸ್​ವರ್ಡ್​ನ್ನು ರಚನೆ ಮಾಡಿಕೊಳ್ಳಿ.
  • ಮೈ ಆಧಾರ್​ ಎಂಬ ಟ್ಯಾಬ್​​ನ ಮೇಲೆ ಸೆಲೆಕ್ಟ್​ ಮಾಡಿ. ಇಲ್ಲಿ ನಿಮಗೆ ಅಪ್​ಡೇಟ್​ ಯುವರ್​ ಆಧಾರ್​ ಎಂಬ ಆಯ್ಕೆಯು ಡ್ರಾಪ್​ ಡೌನ್​ ಮೆನುವಿನಲ್ಲಿ ಕಾಣುತ್ತದೆ.
  • ಇಲ್ಲಿ ನಿಮ್ಮ ಆಧಾರ್​ ಸಂಖ್ಯೆಯನ್ನು ನಮೂದಿಸಿ. ಇದಾದ ಬಳಿಕ ಕ್ಯಾಪ್ಚಾ ವೆರಿಫಿಕೇಶನ್​ ಪೂರ್ಣಗೊಳಿಸಿ. ಇದಾದ ಬಳಿಕ ಸೆಂಡ್​ ಒಟಿಪಿ ಎಂಬ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ.
  • ಈಗ ನಿಮ್ಮ ಅಧಿಕೃತ ಮೊಬೈಲ್​ ಸಂಖ್ಯೆಗೆ ಒಟಿಪಿ ಬರುತ್ತದೆ, ಈಗ ಲಾಗಿನ್​ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ. ಈಗ ನೀವು ನಿಮ್ಮ ಆಧಾರ್​ ಕಾರ್ಡ್​ನಲ್ಲಿ ಯಾವೆಲ್ಲ ಮಾಹಿತಿಯನ್ನು ಕ್ಲಿಕ್​ ಮಾಡಬೇಕು ಎಂದುಕೊಂಡಿದ್ದೀರೋ ಆ ಎಲ್ಲಾ ಮಾಹಿತಿಗಳನ್ನು ನಮೂದಿಸಿ. ಎಲ್ಲಾ ಬದಲಾವಣೆಗಳನ್ನು ನಮೂದಿಸಿದ ಬಳಿಕ Submit ಆಯ್ಕೆಯ ಮೇಲೆ ಕ್ಲಿಕ್​ ಮಾಡಬೇಕು.
  • ನೀವು ಅಪ್​ಡೇಟ್​ ಮಾಡಿದ ವಿವರಗಳಿಗೆ ಬೇಕಾದ ದಾಖಲೆಗಳನ್ನು ಸಲ್ಲಿಸಬೇಕಾಗಿ ಬಂದಲ್ಲಿ ಆ ದಾಖಲೆಗಳನ್ನು ಸಾಫ್ಟ್​ ಕಾಪಿಗಳನ್ನು ಸಲ್ಲಿಸಿ.
  • ನಿಮ್ಮ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಬಳಿಕ Submit Update Request ದಾಖಲೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆನ್​ಲೈನ್​ ಅಪ್​ಡೇಟ್​ ಕಾರ್ಯ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಈಗ ನಿಮ್ಮ ಅಧಿಕೃತ ಮೊಬೈಲ್​ ನಂಬರ್​ಗೆ ಯುಆರ್​ಎನ್​ ನಂಬರ್​ ಅಥವಾ ಅಪ್​ಡೇಟ್​ ರಿಕ್ವೆಸ್ಟ್​​ ನಂಬರ್​​​ ಬರುತ್ತದೆ. ಇದರ ಮೇಲೆ ಕ್ಲಿಕ್​ ಮಾಡಿ. ಈ ಟ್ರ್ಯಾಕಿಂಗ್​ ಐಡಿ ಮೂಲಕ ನೀವು ನಿಮ್ಮ ಆಧಾರ್​ ಕಾರ್ಡ್ ಅಪ್​ಡೇಟ್​ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಬಹುದಾಗಿದೆ.

Aadhaar Card Udaptes : Aadhaar Details Not Updates in 10 Years ? Change Adress and Other Detail Online for free before december 14

Comments are closed.