Ashadha Maas 2023 : ಆಷಾಢದಲ್ಲಿ ಪತಿ-ಪತ್ನಿ ಯಾಕೆ ದೂರವಿರಬೇಕು?

ಹಿಂದೂ ಸಂಪ್ರದಾಯದ ಪ್ರಕಾರ, ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು (Ashadha Maas 2023) ಮಾಡುವುದಿಲ್ಲ. ಇನ್ನುಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಜೊತೆಗಿರಬಾರದು ಎನ್ನುವ ವಾಡಿಕೆ ಕೂಡ ಇದೆ. ಹೀಗಾಗಿ ಈ ಸಮಯದಲ್ಲಿ ಪತ್ನಿಯನ್ನು ಅವಳ ತವರಿಗೆ ಕಳುಹಿಸಿಕೊಂಡ ಸಂಪ್ರದಾಯ ಇದೆ. ಈ ಸಂಪ್ರಾದಯವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ.

ಕರ್ನಾಟಕದಲ್ಲಿ ಹೊಸದಾಗಿ ಮದುವೆಯಾದವರು ಗಂಡ ಹೆಂಡತಿ ಜೊತೆಗಿರಬಾರದು ಎಂದು ಹೇಳಲಾಗುತ್ತದೆ. ಇನ್ನು ಆಂಧ್ರಪ್ರದೇಶದಲ್ಲಿ ಅತ್ತೆ ಸೊಸೆ ಒಂದೇ ಮನೆಯಲ್ಲಿ ಇರಬಾರದು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದವರು ಜೊತೆಗಿರಬಾರದು ಎನ್ನುವ ಉದ್ದೇಶ ಈ ಆಚರಣೆಯಲ್ಲಿ ಇರುತ್ತದೆ.

ಆದರೆ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆ ಆಗಿರುವ ನವ ಜೋಡಿಗಳಿಗೆ ಒಂದು ರೀತಿ ವಿರಹ ವೇದನೆ ಎಂದರೆ ತಪ್ಪಗಾಲ್ಲ, ಇದು ಅನಿವಾರ್ಯ ಆಗಿರುತ್ತದೆ. ಎಲ್ಲರಲ್ಲೂ ಕಾಡುವ ಪ್ರಶ್ನೆ ಎಂದರೆ ನಮ್ಮ ಹಿರಿಯರು ಈ ರೀತಿಯ ಆಚರಣೆ ತಂದಿರುವುದರ ಹಿಂದಿನ ಉದ್ದೇಶ ಏನಿರಬಹುದು ಎನ್ನುವುದು. ಈ ಪ್ರಶ್ನೆ ಈಗೀನ ಕಾಲದವರಿಗೂ ಕಾಡುವುದುಂಟು, ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಪತ್ನಿಯನ್ನು ತವರು ಮನೆಗೆ ಕಳಿಸಬೇಕು ಎಂದರೆ ಸಾಕು ಈಗೀನ ಕಾಲದಲ್ಲೂ ಈ ಆಚರಣೆಯ ಅಗತ್ಯವಿದೆಯೇ ಎಂದು ಹೇಳುತ್ತಾರೆ. ನಮ್ಮ ಪೂರ್ವಜರು ಮಾಡಿಕೊಂಡು ಬಂದ ಆಚಾರ ವಿಚಾರ ಯಾವತ್ತಿಗೂ ಸುಳ್ಳಗುವುದಿಲ್ಲ. ಗಾದೆ ಮಾತೇ ಹೇಳುವಂತೆ ವೇದ ಸುಳ್ಳಾದರೂ ಗಾದೆ ಸುಳ್ಳಗಾಲ್ಲ ಎನ್ನುವ ಮಾತಿದೆ. ಅದರಂತೆ ಹಿರಿಯರು ಮಾಡಿಕೊಂಡು ಬಂದಿರುವ ಆಚರಣೆ ಪಕ್ಕ ಲೆಕ್ಕಚಾರವಿದೆ. ಈ ಕಾರಣದಿಂದಲೇ ಈ ಸಮಯದಲ್ಲಿ ನವ ದಂಪತಿ ಜೊತೆಯಾಗಿ ಇರಬಾರು ಎನ್ನಲಾಗುತ್ತದೆ.

ಆಷಾಢದಲ್ಲಿ ಪತಿ ಪತ್ನಿ ಸೇರಬಾರದು ಏನಿದರ ಲೆಕ್ಕಾಚಾರ ?
ಸಾಮಾನ್ಯವಾಗಿ ಈ ಸಮಯದಲ್ಲಿ ಹೊಸದಾಗಿ ಮದುವೆಯಾಗಿರುವ ದಂಪತಿಗಳು ದೈಹಿಕ ಸಂಪರ್ಕ ಮಾಡಿದರೆ, ಜೂನ್‌ – ಜುಲೈ ತಿಂಗಳಲ್ಲಿ ಗರ್ಭಿಣಿಯಾದರೆ ಮಾರ್ಚ್‌ -ಏಪ್ರಿಲ್‌ ನಲ್ಲಿ ಹೆರಿಗೆಯಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಬೇಸಿಗೆ ತಾಪಮಾನ ಹೆಚ್ಚು ಇರುವುದರಿಂದ ಆಗ ತಾನೇ ಹುಟ್ಟಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಈ ಸಮಯದಲ್ಲಿ ಹೊಸದಾಗಿ ಮದುವೆ ಆಗಿರುವ ಪತಿ-ಪತ್ನಿ ದೂರವಿರಬೇಕುವ ಎನ್ನುವ ಹಿರಿಯರ ಲೆಕ್ಕಚಾರದ ಉದ್ದೇಶವಾಗಿದೆ.

ಇದನ್ನೂ ಓದಿ : World Richest Beggar : ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್: ಭಿಕ್ಷೆ ಬೇಡಿ ಈತ ಸಂಪಾದಿಸಿದ್ದು ಬರೋಬ್ಬರಿ 7.5 ಕೋಟಿ

ಇದನ್ನೂ ಓದಿ : Guru Purnima 2023 : ಗುರು ಪೂರ್ಣಿಮಾ 2023 : ಇಂದು ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಆಷಾಢ ಪೂರ್ಣಿಮೆ ಆಚರಣೆ

ಅದರಲ್ಲೂ ಮೊದಲ ಮಗು ಮನೆಯ ವಾರಸುದಾರ ಎನ್ನುವ ಲೆಕ್ಕಚಾರ ತುಂಬಾ ಜನರಿಗೆ ಇದೆ. ಆಷಾಢದಲ್ಲಿ ಗರ್ಭಿಣಿಯಾದರೆ ಮಗು ಚೈತ್ರ ಮಾಸದಲ್ಲಿ ಜನಿಸುತ್ತದೆ. ಚೈತ್ರ ಮಾಸದಲ್ಲಿ ಸಾಮಾನ್ಯವಾಗಿ ಮೇಷ ರಾಶಿ ಬರುತ್ತದೆ. ಆಗ ಈ ರಾಶಿಗೆ ಬುಧ ಹಾಗೂ ಶುಕ್ರ ಸೂರ್ಯಿಗೆ ಸಮೀಪದಲ್ಲಿ ಇರುತ್ತದೆ. ಈ ಸಮಯದಲ್ಲಿ ಬುಧ ದುರ್ಬಲವಾಗುವುದು, ಬುಧ ದುರ್ಬಲವಾಗಿರುವ ಸಮಯದಲ್ಲಿ ಮಗು ಜನಿಸಿದರೆ ಅದು ಅಷ್ಟು ಶುಭಕರವಲ್ಲ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮೊದಲ ಮುಗುವಿನ ಜನನ ಆಗಬಾರದು ಎನ್ನುವ ಕಾರಣ ಕೂಡ ಇದೆ.

Ashadha Maas 2023 : Why should husband and wife stay away in Ashadha?

Comments are closed.