ರಾಜ್ಯ ಕಾಯೋ ರೂಪದಲ್ಲಿ ನೆಲೆನಿಂತಿದ್ದಾಳೆ ರಾಜ ರಾಜೇಶ್ವರಿ- ನಿಂಬೆ ದೀಪ ಬೆಳಗಿದ್ರೆ ಮನೆಮನಗಳಲ್ಲಿ ನೆಮ್ಮದಿ ಶಾಂತಿ

Rajarajeshwari Temple: ತಾಯಿ, ಭಾರತೀಯ ಪರಂಪರೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿದಾಕೆ. ದೇವರಲ್ಲೂ ಸಹಾ ತಾಯಿ ಅಂದ್ರೆ ಸ್ತ್ರೀ ರೂಪದ ದೇವರಿಗೆ ಬಹಳ ಪ್ರಾಮುಖ್ಯತೆ ಇದೆ. ಊರನ್ನು ಕಾಯೋಕೆ ಬೇರೆ ಬೇರೆ ಹೆಸರಲ್ಲಿ ನೆಲೆನಿಂತಿದ್ದಾಳೆ ಈ ರಾಜರಾಜೇಶ್ವರಿ ತಾಯಿ.

Rajarajeshwari Temple: ತಾಯಿ, ಭಾರತೀಯ ಪರಂಪರೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿದಾಕೆ. ದೇವರಲ್ಲೂ ಸಹಾ ತಾಯಿ ಅಂದ್ರೆ ಸ್ತ್ರೀ ರೂಪದ ದೇವರಿಗೆ ಬಹಳ ಪ್ರಾಮುಖ್ಯತೆ ಇದೆ. ಊರನ್ನು ಕಾಯೋಕೆ ಬೇರೆ ಬೇರೆ ಹೆಸರಲ್ಲಿ ನೆಲೆನಿಂತಿದ್ದಾಳೆ ಈ ರಾಜರಾಜೇಶ್ವರಿ ತಾಯಿ. ಇಲ್ಲೂ ಕೂಡಾ ಈಕೆ ತನ್ನದೇ ಹೆಸರಲ್ಲಿ ಊರನ್ನು ಕರೆಸಿಕೊಳ್ಳುತ್ತಾ ನೆಲೆ ನಿಂತು ಭಕ್ತರನ್ನು ಕಾಯುತ್ತಾಳೆ,

Rajarajeshwari Temple Rajarajeshwari Nagar Bangalore
Image Credit to Original Source

ನಮ್ಮನ್ನು ದುಷ್ಟರಿಂದ , ದುಷ್ಟ ಶಕ್ತಿಯಿಂದ ಕಾಪಾಡೋದು ದುರ್ಗೆ ಅನ್ನೋ ನಂಬಿಕೆ ನಮ್ಮಲ್ಲಿದೆ. ಅದರ ಅಂಗವಾಗಿ ಇಂದಿಗೂ ದೇಶಾದ್ಯಂತ ದಸರವನ್ನು ಆಚರಿಸಿಕೊಂಡು ಬರುತ್ತಾರೆ . ಕೇವಲ ದಸರದಲ್ಲಿ ಬರುವ ದುರ್ಗೆಯ ರೂಪವನ್ನು ಬಿಟ್ಟು ಹಲವು ರೂಪಗಳು ಆ ಮಹಾ ತಾಯಿಗಿದೆ . ಹೌದು ಅದರಲ್ಲಿ ಅತಿ ಸುಂದರ ರೂಪ ಅಂದ್ರೆ ಅದು ರಾಜರಾಜೇಶ್ವರಿಯ ರೂಪ. ಆಳುವ ಅರಸರ ಕಾಯುವವಳು ಅನ್ನೋ ಕಾರಣಕ್ಕೆ ಆಕೆಯನ್ನು ಈ ಹೆಸರಿನಿಂದ ಕರೆಯುತ್ತಾರೆ. ಇಲ್ಲೂ ಸಹ ಇದೇ ರೂಪದಲ್ಲಿ ನೆಲೆ ನಿಂತಿದ್ದಾಳೆ ಆ ತಾಯಿ

Rajarajeshwari Temple Rajarajeshwari Nagar Bangalore
Image Credit to Original Source

ಹೌದು ಸಿಂಹ ವಾಹಿನಿಯಾಗಿ ಕಪ್ಪು ಶಿಲೆಯಲ್ಲಿ ನೆಲೆನಿಂತಿರೋ ತಾಯಿಯನ್ನು ನೋಡೋಕೆ ಎರಡು ಕಣ್ಣು ಸಾಕಾಗಲ್ಲ ಅಂದ್ರೆ ತಪ್ಪಾಗಲ್ಲ. ಇನ್ನು ಈ ದೇವಾಲಯವನ್ನು ಕೈಲಾಸ ಸಂಸ್ಥಾನ ಆಶ್ರಮದಿಂದ 1961 ರಲ್ಲಿ ಸ್ಥಾಪನೆ ಮಾಡಲಾಯಿತು. ಇಲ್ಲಿಗೆ ದೇವಿಯ ಅಲಂಕಾರ ರೂಪವನ್ನು ನೋಡೋಕೆ ಅಂತಾನೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

Rajarajeshwari Temple Rajarajeshwari Nagar Bangalore
Image Credit to Original Source

ಇದನ್ನೂ ಓದಿ : ಶ್ರೀ ಕೃಷ್ಣನೇ ನೀಡಿದ್ದ ತನ್ನ ವಿಗ್ರಹ – ಇವನನ್ನು ಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳು ಪರಿಹಾರ

ಇನ್ನು ಬರೋ ಭಕ್ತರನ್ನು ಕಾಯುತ್ತಾನೇ ಬಂದಿದ್ದಾಳೆ ರಾಜರಾಜೇಶ್ವರಿ ತಾಯಿ. ಇಲ್ಲಿ ರಾಹುಕಾಲದಲ್ಲಿ ಭಕ್ತರು ನಿಂಬೆಹಣ್ಣಿನ ದೀಪವನ್ನು ಹಚ್ಚಿ ಪೂಜೆ ಮಾಡಿದ್ರೆ ಸಕಲ ಇಷ್ಟಾರ್ಥಗಳು ಈಡೇರುತ್ತೆ ಅನ್ನೋ ನಂಬಿಕೆ ಇದೆ. ಇನ್ನು ಇಲ್ಲಿ ನಾಗ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗಿದೆ.

Rajarajeshwari Temple Rajarajeshwari Nagar Bangalore
Image Credit to Original Source

ಇಲ್ಲಿ ಪೂಜೆ ಮಾಡಿದ್ರೆ ನಾಗ ದೋಷ ಪರಿಹಾರವಾಗುತ್ತೆ ಅನ್ನೋದು ನಂಬಿಕೆ. ಇನ್ನು ಇಲ್ಲಿ ಶೈವಾಗಮ ರೀತಿಯಲ್ಲಿ ಪೂಜೆ ಸಲ್ಲಿಸಲಾಗುತ್ತಿದ್ದು, ನವರಾತ್ರಿಯಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾವಿಧಿಗಳು ನಡೆಯುತ್ತದೆ.

Rajarajeshwari Temple Rajarajeshwari Nagar Bangalore
Image Credit to Original Source

ಇದನ್ನೂ ಓದಿ : ಭಕ್ತರನ್ನು ಕಾಯುತ್ತಾಳೆ ಪರಶುರಾಮರ ತಾಯಿ – ಬೇವಿನ ಸೇವೆಯೇ ಈಕೆಗೆ ಅತಿಪ್ರಿಯ

ಇನ್ನು ಈ ದೇವಾಲಯಕ್ಕೆ ಹೋಗೋಕೆ ಬಯಸೋದೇ ಆದ್ರೆ ಇದು ಬೆಂಗಳೂರಿನ ಮೆಜೆಸ್ಟಿಕ್ ನಿಲ್ಧಾಣದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರಿನ ನಗರವ್ಯಾಪ್ತಿಗೆ ಬರೋ ಈ ಜಾಗವನ್ನು ಆ ತಾಯಿಯ ಹೆಸರಿನಿಂದ ರಾಜ ರಾಜೇಶ್ವರಿ ನಗರ ಅಂತ ಕರೆಯುತ್ತಾರೆ. ಇಲ್ಲಿಗೆ ತೆರಳೋಕೆ ಮೆಟ್ರೋ ಸಂಪರ್ಕವೂ ಇದೆ.

Rajarajeshwari Temple Rajarajeshwari Nagar Bangalore
Image Credit to Original Source

ಇದನ್ನೂ ಓದಿ : ಭೂಮಿಯಾಳದಿಂದ ಉಕ್ಕುತ್ತಾಳೆ ಗಂಗಾಮಾತೆ – ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಮಾಯ

ಬಸ್ ನಲ್ಲಿ ಹೋಗೋದಾದ್ರೆ ಮೆಜೆಸ್ಟಿಕ್ ನಿಂದ ಬಸ್ ನಂಬರ್ 225 ಎ ಹಾಗೂ ಬಿ ಬಸ್ ನಲ್ಲಿ ತೆರಳ ಬಹುದು .ಇನ್ನು ಇಲ್ಲಿ ಬೆಳಗ್ಗೆ 7 ರಿಂದ 12 ಗಂಟೆ ಹಾಗೂ ಸಂಜೆ 6.30 ರಿಂದ ರಾತ್ರಿ 8 ಗಂಟೆವರೆಗೆ ಈ ದೇವಾಲಯವು ತೆರೆದಿರುತ್ತೆ . ಅದೇ ಸಮಯದಲ್ಲಿ ನೀವು ಇಲ್ಲಿ ದರ್ಶನವನ್ನು ಮಾಡಬಹುದು .

Rajarajeshwari Temple Rajarajeshwari Nagar Bangalore
Image Credit to Original Source

Rajarajeshwari Temple Rajarajeshwari Temple Bangalore

Comments are closed.