breast cancer : ರಕ್ತ ಪರೀಕ್ಷೆಯ ಮೂಲಕವೇ ಸ್ತನಕ್ಯಾನ್ಸರ್​ ಪತ್ತೆ ಹಚ್ಚಬಹುದು : ಚಿಕಿತ್ಸೆಯ ಬಗ್ಗೆ ಇಲ್ಲಿದೆ ವಿವರ

breast cancer : ಸ್ತನ ಕ್ಯಾನ್ಸರ್​​ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ಆನುವಂಶಿಕವಾಗಿ ನಮ್ಮ ಜೀವನ ಶೈಲಿಯಿಂದಾಗಿ ಈ ಸ್ತನ ಕ್ಯಾನ್ಸರ್​ ಅಥವಾ ಮೊಲೆ ಕ್ಯಾನ್ಸರ್​ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಫೈನಲ್​ ಸ್ಟೇಜ್​​ಗೆ ಹೋಯ್ತು ಅಂದರೆ ಉಳಿಸಿಕೊಳ್ಳುವುದು ಅತ್ಯಂತ ಕಷ್ಟ ಎಂದು ವೈದ್ಯಲೋಕವೇ ಹೇಳುತ್ತದೆ. ಆದರೆ ಇದೀಗ ಮಹಿಳೆಯರಿಗೆ ಒಂದು ಸಿಹಿ ಸುದ್ದಿ ಸಿಕ್ಕಿದ್ದು ಭಾರತದಲ್ಲಿ ಕೂಡ ಇನ್ಮುಂದೆ ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್​ ಪತ್ತೆ ಮಾಡುವ ಸೌಲಭ್ಯ ಲಭ್ಯವಿರಲಿದೆ. ರಕ್ತದ ಪರೀಕ್ಷೆಯ ಮೂಲಕ ಸ್ತನ ಕ್ಯಾನ್ಸರ್​ನ್ನು ಆರಂಭಿಕ ಹಂತದಲ್ಲಿಯೇ ಕಂಡು ಹಿಡಿಯಬಹುದಾಗಿದೆ. ಅಲ್ಲದೇ ರಕ್ತ ಪರೀಕ್ಷೆಯ ಮೂಲಕ ಬರುವ ಸ್ತನ ಕ್ಯಾನ್ಸರ್​ನ ಫಲಿತಾಂಶವು 99 ಪ್ರತಿಶತ ಸರಿಯಾಗಿಯೇ ಇರಲಿದೆ. ಪ್ರಸ್ತುತ ವಿಶ್ವ 15 ದೇಶಗಳಲ್ಲಿ ಈ ಮಾದರಿಯ ಪರೀಕ್ಷೆ ಲಭ್ಯವಿದೆ. 40 ವರ್ಷ ದಾಟಿದ ಬಳಿಕ ಮಹಿಳೆಯರಲ್ಲಿ ಅತಿಯಾಗಿ ಕಾಣಿಸಿಕೊಳ್ಳುತ್ತಿರುವ ಸ್ತನ ಕ್ಯಾನ್ಸರ್​​ಗೆ ರಕ್ತ ಮಾದರಿಯ ಪರೀಕ್ಷೆ ಲಾಭವಾಗಬಹುದು ಎನ್ನಲಾಗಿದೆ.


ಈಸಿಚೆಕ್​​ ಬ್ರೆಸ್ಟ್​ ಬ್ರ್ಯಾಂಡ್​ ಆಗಿರುವ ಈ ಪರೀಕ್ಷೆಗೆ ಆರು ಸಾವಿರ ರೂಪಾಯಿ ಶುಲ್ಕ ವಿಧಿಸಲಾಗಿದೆ. ಕಳೆದ ವರ್ಷ ನವೆಂಬರ್​ ತಿಂಗಳಲ್ಲಿ ಅಮೆರಿಕದ ಫುಡ್​ & ಡ್ರಗ್​​ ಅಡ್ಮಿನಿಸ್ಟ್ರೇಷನ್​​ ಇದನ್ನು ಅನುಮೋದಿಸಿದೆ. ಯಾವುದೇ ರೋಗ ಲಕ್ಷಣಗಳನ್ನು ಹೊಂದಿರದ ನಲವತ್ತು ವರ್ಷ ಮೇಲ್ಪಟ್ಟ ಆರೋಗ್ಯವಂತ ಮಹಿಳೆಗೆ ವಾರ್ಷಿಕ ಪರೀಕ್ಷೆಯ ರೀತಿಯಲ್ಲಿ ಸೂಚಿಸಲಾಗುತ್ತದೆ.


ಈಸಿಚೆಕ್ ಬ್ರೆಸ್ಟ್ ಎಂದು ಬ್ರಾಂಡ್ ಆಗಿರುವ ಪರೀಕ್ಷೆಗೆ 6,000 ರೂ. ಕಳೆದ ವರ್ಷ ನವೆಂಬರ್‌ನಲ್ಲಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಇದನ್ನು ಅನುಮೋದಿಸಿದೆ ಮತ್ತು ಯಾವುದೇ ರೋಗಲಕ್ಷಣಗಳನ್ನು ಹೊಂದಿರದ 40 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ಮಹಿಳೆಯರಿಗೆ ವಾರ್ಷಿಕ ಪರೀಕ್ಷೆಯಾಗಿ ಸೂಚಿಸಲಾಗುತ್ತದೆ. ಹಂತ 0 ಮತ್ತು ಹಂತ 1 ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಶೇಕಡಾ 99 ರಷ್ಟು ನಿಖರತೆಯೊಂದಿಗೆ ಪತ್ತೆಹಚ್ಚಲಾಗಿದೆ ಎಂದು ಅಧ್ಯಯನವು ತೋರಿಸಿದೆ.


ಸ್ತನ ಕ್ಯಾನ್ಸರ್​​ ಪರೀಕ್ಷೆಯಲ್ಲಿ ಧನಾತ್ಮಕ ವರದಿಯನ್ನು ಪಡೆಯುವ ಮಹಿಳೆಯರು ಸಾಂಪ್ರದಾಯಿಕ ಸ್ಕ್ರೀನಿಂಗ್​ ಪರೀಕ್ಷೆ ಮಾಡಿಸಬಹುದು. ಹಾಗೂ ತಕ್ಷಣವೇ ಬಯಾಪ್ಸಿಯನ್ನು ಮಾಡಿಸಬಹುದು. ಅಲ್ಲದೇ ಕೂಡಲೇ ಕ್ಯಾನ್ಸರ್​ಗೆ ತಮ್ಮ ಚಿಕಿತ್ಸೆಯನ್ನು ಆರಂಭಿಸಬಹುದಾಗಿದೆ.

ಇದನ್ನು ಓದಿ : ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ

ಇದನ್ನೂ ಓದಿ : ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ

Blood test that can detect breast cancer available in India now, know the cost

Comments are closed.