ಬುಧವಾರ, ಏಪ್ರಿಲ್ 30, 2025
HomeNationalChildren’s Day 2022 : ಜವಾಹರಲಾಲ್‌ ನೆಹರು ಕೋಟ್‌ ಮೇಲೆ ಯಾವಾಗಲೂ ಗುಲಾಬಿ ಇರುತ್ತೆ ಏಕೆ...

Children’s Day 2022 : ಜವಾಹರಲಾಲ್‌ ನೆಹರು ಕೋಟ್‌ ಮೇಲೆ ಯಾವಾಗಲೂ ಗುಲಾಬಿ ಇರುತ್ತೆ ಏಕೆ ಗೊತ್ತಾ ?

- Advertisement -

ಪಂಡಿತ್ ಜವಾಹರಲಾಲ್ ನೆಹರು ಅವರ ಸ್ಮರಣಾರ್ಥವಾಗಿ (Children’s Day 2022)ಮಕ್ಕಳ ದಿನವನ್ನು ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನಿ ನೆಹರೂ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ ಜವಾಹರಲಾಲ್‌ ನೆಹರು ಅವರ 133 ನೇ ವರ್ಷದ ಜನ್ಮದಿನಾಚರಣೆ ಆಗಿರುತ್ತದೆ. ಅವರ ಮರಣದ ಮೊದಲು ವಿಶ್ವಸಂಸ್ಥೆಯ ಸಾರ್ವತ್ರಿಕ ಮಕ್ಕಳ ದಿನಾಚರಣೆಯನ್ನು ನವೆಂಬರ್ 20 ರಂದು ಮಕ್ಕಳ ದಿನ ಅಥವಾ ಬಾಲ ದಿವಸ್‌ನ್ನು ಆಚರಿಸಲಾಗಿತ್ತು. ಆದರೆ 1964 ರಲ್ಲಿ ನೆಹರು ಮರಣದ ನಂತರ, ಅವರ ಜನ್ಮದಿನವನ್ನು ಭಾರತದಲ್ಲಿ ಮಕ್ಕಳ ದಿನಾಚರಣೆಯ ದಿನಾಂಕವಾಗಿ ಆಯ್ಕೆ ಮಾಡಲಾಯಿತು. ಈ ದಿನದಂದು ಶಾಲೆಗಳು ಮತ್ತು ಕಾಲೇಜುಗಳು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಸಂಸ್ಥೆಗಳು ಮುಂದೆ ಬರುತ್ತವೆ.

ಮಕ್ಕಳ ದಿನಾಚರಣೆ 2022 ಇತಿಹಾಸ ಮತ್ತು ಮಹತ್ವ :
ಪಂಡಿತ್ ಜವಾಹರಲಾಲ್ ನೆಹರು ಅವರು ನವೆಂಬರ್ 14, 1889 ರಂದು ಜನಿಸಿದರು. ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಂತಹ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರು ಮಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದರು. ಹಾಗೆ ಮಕ್ಕಳು ಅವರನ್ನು ಆರಾಧಿಸುತ್ತಿದ್ದರಿಂದ ಪ್ರೀತಿಯಿಂದ ಅವರನ್ನು ‘ಚಾಚಾ ನೆಹರು’ ಎಂದು ಕೆರೆಯುತ್ತಿದ್ದರು. ಜವಾಹರಲಾಲ್ ನೆಹರೂ ಅವರ ಮರಣದ ನಂತರ ಅವರ ಜನ್ಮದಿನವನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲು ಅವರಿಗೆ ಮಕ್ಕಳ ಮೇಲಿನ ಅಪಾರ ಪ್ರೀತಿ ಕಾರಣವಾಯಿತು.

ಮಕ್ಕಳ ದಿನಾಚರಣೆಯ ಇತಿಹಾಸವು 1956 ರ ಹಿಂದಿನದ್ದಾಗಿದೆ. ನೆಹರು ಅವರ ಮರಣದ ಮೊದಲು ಮಕ್ಕಳ ದಿನಾಚರಣೆಯನ್ನು ನವೆಂಬರ್ 20 ರಂದು ಆಚರಿಸಲಾಗಿತ್ತು. ಆದರೆ 1964 ರಲ್ಲಿ ಅವರ ಮರಣದ ನಂತರ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಅವರ ಜನ್ಮದಿನವನ್ನು ಭಾರತದಲ್ಲಿ ಮಕ್ಕಳ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. ಮಕ್ಕಳ ಹಕ್ಕುಗಳು, ಮಕ್ಕಳ ಶಿಕ್ಷಣದ ಹಕ್ಕು ಮತ್ತು ಸೂಕ್ತ ಕಾಳಜಿಯ ಬಗ್ಗೆ ಧ್ವನಿ ಎತ್ತಲು ಈ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. “ಇಂದಿನ ಮಕ್ಕಳು ನಾಳಿನ ಭಾರತವನ್ನು ಮಾಡುತ್ತಾರೆ, ನಾವು ಅವರನ್ನು ಬೆಳೆಸುವ ರೀತಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ.” ಎಂದು ಪಂಡಿತ್‌ ಜವಾಹರಲಾಲ್ ನೆಹರು ಹೇಳಿದ್ದಾರೆ.

ಇದನ್ನೂ ಓದಿ : Pramod Muthalik‌ : ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮುಳ್ಳಾಗ್ತಾರಾ ಮುತಾಲಿಕ್ ?! ಹಿಂದುತ್ವಕ್ಕಾಗಿ ಚುನಾವಣಾ ಕಣಕ್ಕಿಳಿಯೋದಾಗಿ ಪ್ರಮೋದ್ ಘೋಷಣೆ

ಇದನ್ನೂ ಓದಿ : Garden Terminal : 13 ಸಾವಿರ ಕೋಟಿಯಲ್ಲಿ ನಿರ್ಮಾಣಗೊಂಡ ಗಾರ್ಡನ್ ಟರ್ಮಿನಲ್: ವಿಶೇಷತೆಗಳೇನು? ಇಲ್ಲಿದೆ ಡಿಟೇಲ್ಸ್

ಇದನ್ನೂ ಓದಿ : Uniform color for schools: ಶಾಲೆಗಳಿಗೆ ಏಕರೂಪದ ಬಣ್ಣ :8,100 ಶಾಲಾ- ಕಾಲೇಜು ಕೊಠಡಿಗೆ ವಿವೇಕಾನಂದರ ಹೆಸರಿಡಲು ಶಿಕ್ಷಣ ಇಲಾಖೆ ಚಿಂತನೆ

ಜವಾಹರಲಾಲ್ ನೆಹರು ತಮ್ಮ ಕೋಟ್ ಮೇಲೆ ಕೆಂಪು ಗುಲಾಬಿಯನ್ನು ಪಿನ್ ಮಾಡಿರುವ ರಹಸ್ಯ :
ಚಾಚಾ ನೆಹರೂ ಅವರು ಕೆಂಪು ಗುಲಾಬಿಗಳನ್ನು ಇಷ್ಟಪಡುತ್ತಿದ್ದರು. ಅದಕ್ಕಾಗಿಯೇ ಅವರು ತಮ್ಮ ಕೋಟ್‌ನಲ್ಲಿ ಗುಲಾಬಿಯನ್ನು ಸೇರಿಸಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅನೇಕ ಹೇಳಿದ್ದಾರೆ. ಇತರರು ತಮ್ಮ ರಾಲಿಯೊಂದರಲ್ಲಿ ಅವರಿಗೆ ಚಿಕ್ಕ ಹುಡುಗಿ ಗುಲಾಬಿಯನ್ನು ಉಡುಗೊರೆಯಾಗಿ ನೀಡಲಾಯಿತು. ಅಂದಿನಿಂದ ಅವರು ಅದನ್ನು ತಮ್ಮೊಂದಿಗೆ ಕೊಂಡೊಯ್ಯಲು ನಿರ್ಧರಿಸಿದರು ಎಂದು ಹೇಳುತ್ತಾರೆ. ಆದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಪರಿಶೀಲಿಸಿದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಂತೆ, ಭಾರತದ ಮೊದಲ ಪ್ರಧಾನಿ ತನ್ನ ಹೆಂಡತಿಯ ನೆನಪಿಗಾಗಿ ಗುಲಾಬಿಯನ್ನು ಪಿನ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜವಾಹರಲಾಲ್ ನೆಹರು ಅವರು ತಮ್ಮ ಕೋಟ್‌ಗೆ ಪ್ರತಿದಿನ ತಾಜಾ ಕೆಂಪು ಗುಲಾಬಿಯನ್ನು ಪಿನ್ ಮಾಡುತ್ತಿದ್ದರು. ಅವರು ತಮ್ಮ ಪತ್ನಿ ಶ್ರೀಮತಿ ಕಮಲಾ ನೆಹರು ಅವರೊಂದಿಗೆ ತಮ್ಮ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಅವರು ದೀರ್ಘಕಾಲದ ಅನಾರೋಗ್ಯದ ನಂತರ 1938 ರಲ್ಲಿ ನಿಧನರಾಗಿದ್ದಾರೆ.

Children’s Day 2022: Do you know why there is always a rose on Jawaharlal Nehru’s coat?

RELATED ARTICLES

Most Popular