ಇದು ವಾಮನ ಮಹಿಮೆಯನ್ನು ಸಾರುವ ಕ್ಷೇತ್ರ : ಇಲ್ಲೇ ವಾಮನ ಬಲಿಚಕ್ರವರ್ತಿ ಪಾತಾಳಕ್ಕೆ ತುಳಿದಿದ್ದನಂತೆ

Thrikkakara vamanamoorthy temple ernakulam : ತೃತ್ಕಾಕರ ದೇವಸ್ಥಾನ : ವಾಮನ , ವಿಷ್ಣುವಿನ ದಶ ಅವತಾರದಲ್ಲಿ ಕಂಡು ಬರುವ ಒಂದು ಮುಖ್ಯ ಅವತಾರ . ಬಾಲಕನಾಗಿ ಬಂದು ಜಗತ್ತಿಗೆ ದೇವರ ಶಕ್ತಿಯನ್ನು ತೋರಿದಾತ.

Thrikkakara vamanamoorthy temple ernakulam : ತೃತ್ಕಾಕರ ದೇವಸ್ಥಾನ : ವಾಮನ , ವಿಷ್ಣುವಿನ ದಶ ಅವತಾರದಲ್ಲಿ ಕಂಡು ಬರುವ ಒಂದು ಮುಖ್ಯ ಅವತಾರ . ಬಾಲಕನಾಗಿ ಬಂದು ಜಗತ್ತಿಗೆ ದೇವರ ಶಕ್ತಿಯನ್ನು ತೋರಿದಾತ. ಜೊತೆಗೆ ಬಲಿ ಎನ್ನುವ, ಶ್ರದ್ಧಾವಂತ ಅಸುರ ರಾಜನಿಗೆ ಮುಕ್ತಿಯನ್ನು ನೀಡಿ ಚಿರಂಜೀವಿಯನ್ನಾಗಿ ಮಾಡಿದ ಕಥೆ ನಮಲ್ಲಿ ಸಾಕಷ್ಟು ಜನರಿಗೆ ಗೊತ್ತೇ ಇದೆ.

Kerala Temples thrikkakara vamanamoorthy temple ernakulam This is the realm of Vamana's glory
Image Credit to Original Source

ಆದ್ರೆ ಬಲಿ ಚಕ್ರವರ್ತಿಗೆ ತನ್ನ ರೂಪ ತೋರಿ ಉದ್ಧರಿಸಿದ ಜಾಗ ಯಾವುದು ಅನ್ನೋದು ಸಾಕಷ್ಟು ಜನರಿಗೆ ಗೊತ್ತೇ ಇರಲ್ಲ. ಹೌದು ಈ ಜಾಗ ಇಂದಿಗೂ ನಮ್ಮ ದೇಶದಲ್ಲಿದೆ ಅನ್ನೋದೇ ವಿಶೇಷ. ಅದರಲ್ಲೂ ನಮ್ಮ ನೆರೆ ರಾಜ್ಯ ಕೇರಳದ ಕೊಚ್ಚಿಯ ಸಮೀಪದ ತ್ರಿಕ್ಕಾಕರ ಎಂಬ ಸ್ಥಳವೇ ವಾಮನನ ಲೀಲಾಕ್ಷೇತ್ರ.

ಹೌದು ಇದು ಬಲಿ ಚಕ್ರವರ್ತಿ ಹಾಗೂ ವಾಮನನಿಗೆ ಅರ್ಪಣೆಯಾಗಿರೋ ಪುಣ್ಯ ಕ್ಷೇತ್ರ. ಇಲ್ಲಿ ಸಾಕ್ಷಾತ್ ಮಹಾ ವಿಷ್ಣು, ವಾಮನನ ರೂಪದಲ್ಲಿ ಬಂದು ಅಸುರರಾಜ ಬಲಿ ಚಕ್ರವರ್ತಿಯನ್ನು ಉದ್ಧರಿಸಿದ್ದ . ಸಾಮಾನ್ಯವಾಗಿ ವಿಷ್ಣುವಿನ ಅವತಾರಗಳಾದ ಕೃಷ್ಣ , ರಾಮ ಹಾಗೂ ನರಸಿಂಹ ರೂಪವನ್ನು ಹೆಚ್ಚಾಗಿ ಭಾರತದಲ್ಲಿ ಪೂಜಿಸುತ್ತಾರೆ. ಆದರೆ ವಾಮನ ವರಾಹಾ ದಂತಹ ಅವತಾರಗಳ ದೇವಾಲಯಗಳು ಇರೋದು ಬೆರಳೆಣಿಕೆಯಷ್ಟೇ.

ಇದನ್ನೂ ಓದಿ : ಇದು ಹನುಮನ ಮೊದಲ ದೇವಾಲಯ – ಇಲ್ಲಿ ತೀರ್ಥ ಸೇವಿಸಿದ್ರೆ ಸರ್ಪದೋಷ ಪರಿಹಾರ

ಆದ್ರೆ ಇಲ್ಲಿ ಮಾತ್ರ ವಾಮನ ಸ್ವಾಮಿಯನ್ನು ಮುಖ್ಯಸಾನಿಧ್ಯವಾಗಿ ಪೂಜಿಸಲಾಗುತ್ತೆ. ವಾಮನನ್ನು ದೇವರ ಮೂರ್ತಿ ರೂಪದಲ್ಲಿ ಆರಾಧಿಕೊಂಡು ಬರಲಾಗುತ್ತಿದೆ. ಇದರ ಇನ್ನೊಂದು ವಿಶೇಷ ವೆಂದರೆ ಇಲ್ಲಿ ಈ ವಾಮನ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಖುದ್ದು ವಿಷ್ಣುವಿನ ಅವತಾರ ಅನ್ನಿಸಿಕೊಂಡಿರೋ ಪರಶುರಾಮರೇ ಅನ್ನೋದು ಮತ್ತೊಂದು ವಿಶೇಷ.

ಇಲ್ಲಿಯ ಸ್ಥಳಪುರಾಣದ ಬಗ್ಗೆ ಕೆದಕುತ್ತಾ ಹೋದಂತೆಲ್ಲಾ ಸತ್ಯಯುಗ ನಂಟು ಈ ಸ್ಥಳಕ್ಕಿದೆ ಅನ್ನೋದು ಗೊತ್ತಾಗುತ್ತೆ. ಸತ್ಯ ಯುಗದಲ್ಲಿ ಬಲಿಯು ಪ್ರಹಲ್ಲಾದನ ಮೊಮ್ಮಗನಾಗಿ ಜನಿಸಿದ್ದ. ತಾತನಂತೆ ಆತನು ಧರ್ಮಿಷ್ಟ. ಆದರೆ ಅಸುರ ಜನಾಂಗದಲ್ಲಿ ಹುಟ್ಟಿದ್ದರಿಂದ ಆತ ಎಲ್ಲರಂತೆ ದೇವತೆಗಳನ್ನು ವಿರೋಧಿಸುತ್ತಿದ್ದ. ಆದರೆ ಆತ ಧರ್ಮಕಾರ್ಯವನ್ನು ಮಾತ್ರ ಮಾಡೋದು ಬಿಡುತ್ತಿರಲಿಲ್ಲ.

Kerala Temples thrikkakara vamanamoorthy temple ernakulam This is the realm of Vamana's glory
Image Credit to Original Source

ಮತ್ತೊಂದೆಡೆ ರಾಕ್ಷಸರ ರಕ್ಷಣೆಗಾಗಿ ಬಲಿ ಚಕ್ರವರ್ತಿ, ದೇವತೆಗಳ ಮೇಲೆ ಯುದ್ಧ ಮಾಡಲು ಆರಂಭಿಸಿದ್ದ. ಇದರಿಂದ ತೊಂದರೆಗೊಳಗಾದ ದೇವತೆಗಳು ಸಹಾಯಕ್ಕಾಗಿ ಮಹಾ ವಿಷ್ಣುವನ್ನು ಬೇಡಿಕೊಂಡರು. ಆಗ ವಿಷ್ಣು ಕಾಷ್ಯಪ ಮುನಿಯ ಮಗನಾಗಿ ಜನಿಸಿ ಬಂದ. ಒಂದು ಬಾರಿ ಬಲಿಯು ಮಹಾ ಯಜ್ಞ ಮಾಡಲು ನಿಶ್ಚಯಿಸಿ, ಹಿನ್ನೆಲೆಯಲ್ಲಿ ಮಹಾದಾನಗಳನ್ನು ನೀಡುತ್ತಿದ್ದ.

ಅಲ್ಲಿಗೆ ಆಗಮಿಸಿದ ಮಹಾವಿಷ್ಣು , ಬಾಲಕ ವಾಮನನ ರೂಪದಲ್ಲಿ ಮೂರು ಹೆಜ್ಜೆ ದಾನವನ್ನು ನೀಡುವಂತೆ ಕೇಳಿದ. ಅದಕ್ಕೆ ಬಲಿಯು ಒಪ್ಪಿದಾಗ ಒಂದು ಹೆಜ್ಜೆ ಭೂಮಿಯಲ್ಲೂ, ಒಂದು ಹೆಜ್ಜೆ ಆಕಾಶದಲ್ಲೂ ಇಟ್ಟ ವಾಮನ ಸಮಸ್ತ ಬ್ರಹ್ಮಾಂಡವನ್ನೇ ಆಕ್ರಮಿಸಿದ . ಅದನ್ನು ನೋಡಿದ ಬಲಿ ಇವನೇ ಮಹಾವಿಷ್ಣು ಎಂದು ಅರಿತು, ತನ್ನ ತಲೆಯ ಮೇಲೆ ಮೂರನೇ ಹೆಜ್ಜೆಯನ್ನು ಇಡುವಂತೆ ಕೇಳಿದ.

ಇದನ್ನೂ ಓದಿ : ಇದು ಶೃಂಗೇರಿ ಶಾರದೆ ಮೂಲ ಕ್ಷೇತ್ರ – ನಿಂತ ಭಂಗಿಯಲ್ಲೇ ಪೂಜಿಸಲ್ಪಡುತ್ತಾಳೆ ತಾಯಿ

ಇದರಿಂದ ಸಂತುಷ್ಟನಾದ ಹರಿ, ಚಿರಂಜೀವಿಯಾಗುವಂತೆ ಹರಸಿ , ವರ್ಷಕ್ಕೆ ಒಂದು ಬಾರಿ ತನ್ನ ಪ್ರಜೆಗಳಿಗೆ ದರ್ಶನ ನೀಡುವಂತೆ ಹರಸಿ ಪಾತಾಳಕ್ಕೆ ಅಧಿಪತಿಯಾಗಿ ಮಾಡಿದ . ಇದೇ ಜಾಗ ಇಂದು ದೇವಾಲಯವಾಗಿದೆ ಅಂತ ಭಕ್ತರು ನಂಬುತ್ತಾರೆ. ಕೇರಳದ ಎರ್ನಾಕುಳಂ ನಲ್ಲಿ ಸ್ಥಿತವಾಗಿರೋ ಈ ದೇವಾಲಯ , ಕೊಚ್ಚಿಯಿಂದ ೧೦ ಕಿಲೋ ಮೀಟರ್ ದೂರದಲ್ಲಿದೆ.

ಅಂದಿನಿಂದ ಇಂದಿನ ವರಗೆ ಕೇರಳದಲ್ಲಿ ಈ ದಿನವನ್ನು ಓಣಂ ಎಂದು ಆಚರಣೆ ಮಾಡಲಾಗುತ್ತೆ. ಇದೇ ದಿನವೇ ಬಲಿ ಚಕ್ರವರ್ತಿಯ ಆಗಮನಕ್ಕಾಗಿ ಕಾದು ನಿಲ್ಲುತ್ತಾರೆ. ಮನೆಯಲ್ಲಿ ದೀಪ ಹಚ್ಚಿ ಹಾಡಿ ನಲಿಯುತ್ತಾರೆ. ಈ ತ್ರಿಕ್ಕಾಕರ ವಾಮನ ಮೂರ್ತಿ ದೇವಾಲಯದಲ್ಲೂ ಓಣಂನ 10 ದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತೆ.

ಆನೆಯಲ್ಲಿ ದೇವರನ್ನು ಕುಳ್ಳಿರಿಸಿ ಜಾತ್ರೆ ಮಾಡಲಾಗುತ್ತೆ. ಇಷ್ಟಾದ್ರೂ ಇಲ್ಲಿ ಮೊದಲು ಪೂಜೆ ಗೊಳ್ಳೋದು ವಾಮನ ಅಲ್ಲ. ಬದಲಾಗಿ ಶಿವಲಿಂಗ . ಇದು ಬಲಿ ಚಕ್ರವರ್ತಿಯು ಪೂಜಿಸಿದ ಶಿವಲಿಂಗ ಅಂತ ನಂಬಲಾಗುತ್ತೆ. ಹೀಗಾಗಿ ಇಲ್ಲಿ ಶಿವನಿಗೆ ಪೂಜೆ ಸಲ್ಲಿಸಿ ನಂತರವೇ ವಾಮನನಿಗೆ ಪೂಜೆ . ಒಟ್ಟಾರೆ ಹೇಗೆ ಪ್ರತಿ ದೇವರಿಗೂ ಒಂದೊಂದು ಕಥೆ ಇದೆಯೋ, ಅಂತೆಯೇ ನಮ್ಮಲ್ಲಿ ಪ್ರತಿ ಊರಿಗೂ ದೇವರ ಒಂದು ನಂಟಿದೆ. ಇದೇ ನಮಗೆ ಪುರಾಣವನ್ನು ಇತಿಹಾಸವನ್ನು ಜೊತೆಯಾಗಿ ಮಾಡೋದು ಅಂದ್ರೆ ತಪ್ಪಾಗಲ್ಲ .

ಇದನ್ನೂ ಓದಿ : ಇದು ಕರ್ನಾಟಕದ ಮೊದಲ ಸಾಲಿಗ್ರಾಮ ನರಸಿಂಹ: ನಾರದರಿಂದಲೇ ಪೂಜಿಸಲ್ಪಟ್ಟಿದ್ದಾನೆ ಈ ಗುರುವರಿಯ

thrikkakara vamanamoorthy temple ernakulam This is the realm of Vamana’s glory – it is here that Vamana’s sacrificial knight had trod the underworld.

Comments are closed.