ನದಿಗಳು ಸಮುದ್ರವನ್ನು ಸೇರುವ ತಾಣಗಳಲ್ಲಿನ ಉಪ್ಪು ಹಾಗೂ ಸಿಹಿನೀರಿನ ಮಿಶ್ರಿತ ನೀರಿನೊಳಗೆ ಕೆಲವು ನಿರ್ದಿಷ್ಟ ಪ್ರಭೇದ ಗಿಡಮರಗಳ ಸಸ್ಯವರ್ಗದಿಂದ ಕೂಡಿದ ಕಾಡೇ ಈ ಕಾಂಡ್ಲ ಕಾಡು. (Mangrove Forest)
ಸಮುದ್ರದ ಜಲಚರಗಳು ತಮ್ಮ ಸಂತಾನೋತ್ಪತ್ತಿ ನಡೆಸಿ ತಮ್ಮ ಸಂತಾನಗಳನ್ನು ಉಳಿಸಿ, ಬೆಳಸಿಕೊಳ್ಳುವಲ್ಲಿ, ಸಮುದ್ರದ ನೀರಿನ ಮಲೀನತೆ ಕಡಿಮೆಗೊಳಿಸುವಲ್ಲಿ, ಸಾಗರದಲ್ಲುಂಟಾಗುವ ವಿನಾಶಕಾರಿ ಸುನಾಮಿ (Tsunami), ಚಂಡಮಾರುತಗಳು ಸಾಗರದಂಚಿನ ಜನವಸತಿ ಪ್ರದೇಶಕ್ಕೆ ಬೀರುವ ದುಷ್ಪರಿಣಾಮ ಕಡಿಮೆಗೊಳಿಸುವಲ್ಲಿ, ಕಡಲ್ಕೊರೆತ ತಗ್ಗಿಸುವಲ್ಲಿ ಕಾಂಡ್ಲಾ ಕಾಡುಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕಾಂಡ್ಲಾಕಾಡಿನ ಸಸ್ಯವರ್ಗ ಇತರ ಸಸ್ಯವರ್ಗಗಳಿಗೆ ಹೋಲಿಸಿದರೆ ಸಾಕಷ್ಟು ಹೆಚ್ಚಿನ ಪ್ರಮಾಣದ ಇಂಗಾಲವನ್ನು ಹೀರಿಕೊಳ್ಳುತ್ತದೆ ಎಂಬ ಅಂಶ ವೈಜ್ಞಾನಿಕ ಅಧ್ಯಯನ ವರದಿಗಳಿಂದ ಸಾಭೀತಾಗಿದೆ.
ಪಶ್ಚಿಮ ಬಂಗಾಳದ ಸುಂದರ್ ಬನ್ಸ್ (Sundarbans) ಅರಣ್ಯ ವಿಶ್ವದ ಅತ್ಯಂತ ದೊಡ್ಡ ಕಾಂಡ್ಲ ಅರಣ್ಯ ಎನಿಸಿದೆ. (ಸುಂದರ್ ಬನ್ಸ್ ಅರಣ್ಯದ ವ್ಯಾಪ್ತಿ ನಮ್ಮ ಪಶ್ಚಿಮ ಬಂಗಾಳದ ಜೊತೆಗೆ ಬಾಂಗ್ಲಾದೇಶಕ್ಕೂ ಕೂಡ ವಿಸ್ತರಿಸಿದೆ) ನಮ್ಮ ಕರ್ನಾಟಕದಲ್ಲಿ ಹೊನ್ನಾವರ ಹಾಗೂ ಕುಂದಾಪುರದ ಸಮುದ್ರ ತೀರದ ಭಾಗಗಳಲ್ಲಿ ಅತ್ಯುತ್ತಮವಾದ ಕಾಂಡ್ಲ ಕಾಡುಗಳಿವೆ. ಇತ್ತೀಚೆಗೆ ಹೊನ್ನಾವರದ ಬಳಿ ಕಾಂಡ್ಲ ನಡಿಗೆ (Mongrove Walk) ಎಂಬ ವಾಕಿಂಗ್ ಪಾತ್ ಅನ್ನು ಕಾಂಡ್ಲ ವನದೊಳಗೆ ನಿರ್ಮಿಸಿದ್ದು, ಇಲ್ಲಿ ಬಹಳ ಹತ್ತಿರದಿಂದ ಕಾಂಡ್ಲ ಸಸ್ಯವರ್ಗವನ್ನು ವೀಕ್ಷಿಸಬಹುದಾಗಿದೆ.
ಈ ಕಾಂಡ್ಲಾ ಸಸ್ಯಗಳು ಇರುವ ಪ್ರದೇಶ ಮೀನು, ಏಡಿಯಂತಹ ಜಲಚರಗಳ ಸಂತಾನೋತ್ಪತ್ತಿಗೆ ಹಾಗೂ ಜೇನು ಉತ್ಪಾದನೆಗೆ ಪೂರಕ ವಾತಾವರಣ ಸೃಷ್ಟಿ ಮಾಡುತ್ತಿದೆ. ಅಲ್ಲದೇ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹಾದು ಹೋಗುವ ಅಘನಾಶಿನಿ, ಗಂಗಾವಳಿ, ಕಾಳಿ, ವೆಂಕಟಾಪುರ, ಶರಾವತಿ, ಮೊದಲಾದ ನದಿ ಅಳಿವೆಗಳಲ್ಲಿ ನಡೆದಾಡುವ ಮರದಂತೆ ಕಾಣುವ ಈ ಕಾಂಡ್ಲಾ ಬೀಡು ಬಿಟ್ಟಿದೆ.
ಈ ಕಾಂಡ್ಲಾ ವನದ ಮತ್ತೊಂದು ವಿಶೇಷತೆ ಎಂದರೆ ಕಾಂಡ್ಲಾ ಸಸ್ಯದ ಬಗ್ಗೆ 2012ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಸುಭಾಶ್ಚಂದ್ರನ್ ನೇತೃತ್ವದ ತಂಡ ಕಾಂಡ್ಲಾ ವನದ ವಿಸ್ತಾರ ಹಾಗೂ ಪ್ರಭೇದದ ಕುರಿತು ಅಧ್ಯಯನ ನಡೆಸುತ್ತದೆ ಆಗ ಆ ಭಾಗದಲ್ಲಿ ಒಟ್ಟೂ 12 ಜಾತಿಯ ನೈಜ ಕಾಂಡ್ಲ ಗಿಡಗಳ ಜೊತೆಗೆ 20 ಸಹಚರ ಸಸ್ಯಗಳನ್ನು ಕಾಂಡ್ಲಾವನದಲ್ಲಿ ಗುರುತಿಸಲಾಗಿದೆ. ಈ ಕಾಂಡ್ಲಾ ಸಸ್ಯವನ್ನು ನದಿ ತೀರದ ಜನರು ಉರುವಲಿಗಾಗಿಯೂ ಕೆಲಮಟ್ಟಿಗೆ ಅವಲಂಬಿಸಿಕೊಂಡಿದ್ದಾರೆ. ಹೀಗೆ ಈ ಸಸ್ಯಗಳಿಂದ ಹಲವಾರು ರೀತಿಯ ಪ್ರಯೋಜನಗಳು ಇರೋದನ್ನು ನಾವು ಗಮನಿಸಬಹುದು.
ಇದನ್ನೂ ಓದಿ: Track Train In WhatsApp : ರೈಲ್ವೇ ಪ್ರಯಾಣಿಕರಿಗೆ ವಾಟ್ಸಪ್ ನಲ್ಲಿ ಬಂಪರ್ ಅಪ್ಡೇಟ್
ಇದನ್ನೂ ಓದಿ: Good News for walkers : ಬೆಂಗಳೂರಿನ ವಾಯುವಿಹಾರಿಗಳಿಗೆ ಸಿಹಿಸುದ್ದಿ: ದಿನವೀಡಿ ಪಾರ್ಕ್ ಓಪನ್
(Environmental Sustainability is provided by Mangrove Forest)