Fire Works: ಪಟಾಕಿಯ ಉತ್ಪಾದನೆಯಲೊಂದು ಕುತೂಹಲ ಸಂಗತಿ!

ನಮ್ಮ ಸುತ್ತ ಮುತ್ತ ಇರುವ ಹಲವು ಅಂಶಗಳು ನಮ್ಮಲ್ಲಿ ಕುತೂಹಲ ಮತ್ತು ಆಶ್ಚರ್ಯವನ್ನು ಮೂಡಿಸುತ್ತವೆ. ಕೆಲವೊಂದರ ಬೆನ್ನತ್ತಿ ಹೋದಾಗ ಹೆಚ್ಚಿನ ಮಾಹಿತಿಗಳು ಸಿಗುತ್ತವೆ. ಪ್ರಾಣಿ, ಪಕ್ಷಿ, ಮನುಷ್ಯ ನಿರ್ಮಿತ ವಸ್ತು, ಮನುಷ್ಯನ ಅಸಾಮಾನ್ಯ ಸಾಧನೆ ಇವೆಲ್ಲವೂ ನಮ್ಮ ಕುತೂಹಲದ ಪಟ್ಟಿಯಲ್ಲಿ ಸೇರ್ಪಡೆ ಆಗಿರುವಂತದ್ದೆ. ನಾವು ದಿನನಿತ್ಯ ಬಳಸುವ ಎಷ್ಟೋ ವಸ್ತುಗಳ ಮೂಲ ನಮಗೆ ತಿಳಿದಿರುವುದಿಲ್ಲ. ಆದರೆ ಅದರ ಬಗ್ಗೆ ಕೇಳಿದಾಗ ನಮಗೆ ಆಶ್ಚರ್ಯ ಉಂಟಾಗುತ್ತದೆ.

ಹೌದು ಈಗ ನಾನು ಹೇಳಲು ಹೊರಟಿರುವುದು ಅಂತಹದೆ ಒಂದು ಅದ್ಬುತ ವಿಷಯದ ಬಗ್ಗೆ. ಪಟಾಕಿ ಎಂಬ ಹೆಸರೇ ಸುಚಿಸುವಂತೆ ಪಟಾಕಿಯ (Fire Cracker) ಪರಿಚಯ ಇಲ್ಲದವರನ್ನು ಕಾಣಸಿಗುವುದು ಕಷ್ಟ ಸಾಧ್ಯ. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ಪಟಾಕಿ ಎಂದರೆ ಬಲು ಇಷ್ಟ. ಅದು ಹೊರಸೂಸುವ ಬೆಳಕು,  ಶಬ್ದ  ಕಂಡರೆ ಮನಸ್ಸಿಗೇನೋ ಖುಷಿಯಾಗುತ್ತದೆ. ನಾವು ಸಾಮಾನ್ಯವಾಗಿ ನಮ್ಮ ಹಬ್ಬ ಹರಿದಿನಗಳಲ್ಲಿ ಬಳಸುವ ಪಟಾಕಿಯೂ ಜಗತ್ತಿನಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಈ ಪಟಾಕಿಯ ಹಿನ್ನಲೆಯನ್ನು ನೋಡುವುದಾದರೆ ಕೆಲವು ಕಥೆಗಳು ಹಾಗೂ ಅನಿಸಿಕೆಗಳು ನಮ್ಮ ಮುಂದೆ ಬರುತ್ತವೆ.

ಪಟಾಕಿ ಆರನೇ ಶತಮಾನದಲ್ಲಿ ಚೀನಾ (China) ದೇಶದಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ಹಾಗಾದರೆ ಪಟಾಕಿ ಉತ್ಪಾದನೆ ಪ್ರಾರಂಭವಾದದ್ದು ಹೇಗೆ? ಎಲ್ಲಿಂದ ಎಂದು ನೋಡಿದರೆ ಅಡುಗೆ ಮಾಡುವಾಗ ತಪ್ಪಾಗಿ ಒಲೆಗೆ ಪೊಟಾಶಿಯಂ ನೈಟ್ರೇಟ್ ಎಂದು ಕರೆಯುವ ಸಾಲ್ಟ್ ಪೀಟರ್ ಎಸೆದಾಗ ಬಣ್ಣದ ಜ್ವಾಲೆಗಳು ಹೊರ ಬಂತಂತೆ. ನಂತರ ಅದಕ್ಕೆ ಕಲ್ಲಿದ್ದಲು ಮತ್ತು ಗಂಧಕದ ಪುಡಿಯನ್ನು ಹಾಕಿದಾಗ ಶಬ್ದ ಕೇಳಿ ಬರಲು ಪ್ರಾರಂಭವಾಯಿತ್ತಂತೆ. ನಂತರ ಇದನ್ನೇ ಬಳಸಿಕೊಂಡು ಗನ್ ಪೌಡರ್ ಅನ್ನು ಕಂಡುಹಿಡಿಯಲಾಯಿತು . ಇದನ್ನೇ ಪಟಾಕಿಯನ್ನಾಗಿ ಬಳಸಲಾಯಿತು ಎನ್ನುತ್ತಾರೆ. ಇನ್ನು ಕೆಲವರು ಇದನ್ನು ಸೈನಿಕರು ದೇಶವನ್ನು ಗಡಿಯನ್ನು ಕಾಯುವುದಕ್ಕಾಗಿ ಸೈನಿಕರೇ ತಯಾರಿಸಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ಸುಮಾರು 15 ನೇ ಶತಮಾನದಲ್ಲಿ ಪಟಾಕಿ ಉತ್ಪಾದನೆ ಪ್ರಾರಂಭವಾಗುತ್ತದೆ.

ಆದರೆ ಇಂದು ಈ ಪಟಾಕಿಯನ್ನು ಉತ್ಪಾದಿಸುವ ದೇಶಗಳ ಪಟ್ಟಿಗಳಲ್ಲಿ ಭಾರತ (India) ಎರಡನೇ ಸ್ಥಾನವನ್ನು ಹೊಂದಿದೆ. ಅಲ್ಲದೇ ತಮಿಳುನಾಡಿನ (Tamilnadu) ಶಿವಕಾಶಿ (Shivkashi) ಎಂಬ ಸ್ಥಳದಲ್ಲಿ ದೇಶದ 90% ರಷ್ಟು ಪಟಾಕಿಯನ್ನು ಉತ್ಪಾದಿಸಲಾಗುತ್ತದೆ. ಹಾಗೆ  ಪಟಾಕಿ ಉತ್ಪಾದನಾ ದೇಶಗಳ ಪಟ್ಟಿಯಲ್ಲಿ ಚೀನಾ  ಪಟಾಕಿ ಉತ್ಪಾದನೆ ಮತ್ತು ರಫ್ತು ಮಾಡುವಲ್ಲಿ ನಂಬರ್ ಒಂದ್ ಸ್ಥಾನದಲ್ಲಿದೆ. ಹೀಗೆ ನಮ್ಮ ಸುತ್ತ ಮುತ್ತ ಕಣ್ಣು ಹಾಯ್ಸಿದಂತೆ ನಮಗೆ ನಮ್ಮ ಜ್ಞಾನ ವೃದ್ಧಿಸಿಕೊಳ್ಳಲು ಮತ್ತು ತಿಳಿದುಕೊಳ್ಳಲು ಹಲವಾರು ವಿಷಯಗಳು ಕಾಣಸಿಗುತ್ತವೆ. ಒಂದೊಂದು ವಿಷಯ, ವಸ್ತುಗಳು ಹೊಸದೇನನ್ನೋ ಅರಿಯಲು ಸಹಾಯ ಮಾಡುತ್ತದೆ. ಅದು ಈ ಜಗತ್ತಿನ ಅದ್ಬುತವಾಗಿರ ಬಹುದು ಅಥವಾ ಯಾವುದೇ ಸಣ್ಣ ವಿಷಯವೇ ಆಗಿರಬಹುದು.

ಇದನ್ನೂ ಓದಿ: South Indian Tourism: ಮಾನ್ಸೂನ್ ನಲ್ಲಿ ಮಿಸ್ ಮಾಡದೆ ಭೇಟಿ ನೀಡಬೇಕಾದ ಟಾಪ್ ಪ್ರವಾಸಿ ತಾಣಗಳು

ಇದನ್ನೂ ಓದಿ: Rakhi Sawant : ಮಾಜಿ ಪತಿ ರಿತೇಶ್​​ ನನಗೆ ತೊಂದರೆ ಕೊಡುತ್ತಿದ್ದಾನೆಂದು ಗಳಗಳನೇ ಅತ್ತ ರಾಖಿ ಸಾವಂತ್​

( Fire Works Do you know some interesting things about shivkashi fire works)

Comments are closed.