ಹಿಂದುಗಳು ಆಚರಿಸುವ ದೊಡ್ಡ ಹಬ್ಬಗಳಲ್ಲಿ ಗಣೇಶ ಚತುರ್ಥಿ (Ganesh Chaturthi 2022)ಯು ಒಂದು. ಗಣೇಶನ ಮೂರ್ತಿ ತಂದು, ಅಲಂಕರಿಸಿ ಪೂಜಿಸುವು ವಿಶೇಷವಾದ ಹಬ್ಬವಿದು. ಕಳೆದೆರಡು ವರ್ಷಗಳಿಂದ ಕರೋನಾದಿಂದ ಮಂಕಾಗಿದ್ದ ಗಣೇಶ ಹಬ್ಬ ಈ ವರ್ಷ ಭರ್ಜರಿ ತಯಾರಿಯಲ್ಲಿದೆ. ಗಲ್ಲಿ ಗಲ್ಲಿಗಳಲ್ಲೂ ಗಣೇಶನ ಮೂರ್ತಿ ರಾರಾಜಿಸಲು ತಯಾರಿ ನಡೆಯುತ್ತಿದೆ. ಜನರು ಅತಿ ಉತ್ಸಾಹದಿಂದ ಅಣಿಯಾಗುತ್ತಿದ್ದಾರೆ. ಗಣೇಶನ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಮಣ್ಣಿನ ಗಣೇಶ, ಪಿಒಪಿ ಗಣೇಶನಿಗೆ ಫೈನಲ್ ಟಚ್ ಕೊಡುವುದರಲ್ಲಿ ಕಲಾವಿದರು ತೊಡಗಿದ್ದಾರೆ. ಗಣೇಶ ಹಬ್ಬದಲ್ಲಿ ಮನೆಗಳನ್ನು ಅಲಂಕರಿಸುವುದು ಒಂದು ವಿಶೇಷ. ಗಣೇಶನ ಮೂರ್ತಿಯ ಸುತ್ತ ಅಲಂಕಾರಿಕ ವಸ್ತುಗಳನ್ನಿಟ್ಟು ಚಂದದಿಂದ ಗಣೇಶನ್ನು ಸ್ವಾಗತಿಸಬೇಕಲ್ಲವೇ?
ಹಬ್ಬಗಳೇ ಹಾಗೆ ಸಂತೋಷ, ಪ್ರೀತಿಯ ಮನೋಭಾವವನ್ನು ತರುತ್ತವೆ. ಚಂದದಿಂದ ಅಲಂಕರಿಸಿದ ಗಣೇಶ, ಎಲ್ಲರ ಆಕರ್ಷಣೆಯ ಕೇಂದ್ರ. ಅದಕ್ಕಾಗಿಯೇ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇವುಗಳು ನಿಮ್ಮ ಮನೆಯ ಗಣೇಶ ಸುಂದರವಾಗಿ ಕಾಣುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ.
ದೀಪಗಳು :
ಅಲಂಕಾರಿಕ ದೀಪಗಳು ಎಲ್ಲ ಹಬ್ಬಗಳಲ್ಲೂ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಗಣೇಶನ ಮಂಟಪದ ಹಿಂದೆ ಹೊಳೆಯುವ ದೀಪಗಳನ್ನು ಹಾಕುವುದರಿಂದ ಮಂಟಪಕ್ಕೆ ಒಂದು ಮೆರಗು ಬರುವುದು. ಇನ್ನೂ ಉತ್ತಮವೆಂದರೆ ಗಣೇಶನ ವಿಗ್ರಹದ ಮೇಲೆ ಬೆಳಕು ಬೀಳಲು ದೀಪಗಳನ್ನು ಲೇಯರ್ ಮಾಡಿ ಹಾಕಿ. ಟ್ರೆಂಡಿ ಮತ್ತು ವಿಂಟೇಜ್ ಗಾಜಿನ ಜಾಡಿಗಳಿದ್ದರೆ ಇನ್ನೂ ಚೆಂದ. ಅವುಗಳು ವಿಶೇಷವಾಗಿ ಬೆಳಕನ್ನು ಪ್ರತಿಫಲಿಸುತ್ತವೆ. ಕೆಲವು ಥೀಮ್‌ಗಳನ್ನು ಆರಿಸಿಕೊಳ್ಳಿ, ಅದಕ್ಕೆ ತಕ್ಕಂತೆ ದೀಪಗಳನ್ನು ಹೊಂದಿಸಿ. ವರ್ಣರಂಜಿತ ಥೀಮ್‌ಗಳು ಗಣೇಶನ ಮಂಟಪದ ಮೆರುಗನ್ನು ಹೆಚ್ಚಿಸಬಲ್ಲದು.
ಎಲೆ ಮತ್ತು ಹೂವುಗಳಿಂದ ಅಲಂಕರಿಸಿ :
ಗಣೇಶನ ಮಂಟಪ ಮತ್ತು ನಿಮ್ಮ ಮನೆಯನ್ನು ಎಲೆ ಮತ್ತು ಹೂವುಗಳಿಂದ ಅಲಂಕರಿಸಿ. ಬಾಗಿಲು ತೋರಣಕ್ಕೆ ನೈಜ ಹೂವು ಮತ್ತು ಎಲೆಗಳನ್ನು ಸೇರಿಸಿ ತೋರಣ ಮಾಡಿ. ನರ್ಸರಿಯಿಂದ ಕೆಲವು ಅಲಂಕಾರಿಕ ಗಿಡಗಳನ್ನು ತನ್ನಿ ಮತ್ತು ಅವುಗಳನ್ನು ಜೋಡಿಸಿ. ಆಗ ಸಹಜ ಸೌಂದರ್ಯದಿಂದ ಗಣೇಶ ಕಂಗೊಳಿಸುತ್ತಾನೆ. ಆ ಗಿಡಗಳು ಹಬ್ಬದ ನಂತರ ನಿಮ್ಮ ಮನೆಯನ್ನು ಅಲಂಕರಿಸುತ್ತವೆ. ಇನ್ನು ಹೂವು ಮತ್ತು ಎಲೆಗಳನ್ನು ಸೇರಿಸಿ ಮಾಲೆಗಳನ್ನು ಮಾಡಿ ಮಂಟಪದ ಸುತ್ತ ತೂಗುಹಾಕಿ. ಹೂವುಗಳ ಪರಿಮಳ ಅಲ್ಲಿ ಸುಂದರ ಲೋಕವನ್ನೇ ಸೃಷ್ಟಿಸುತ್ತದೆ.
ಇದನ್ನೂ ಓದಿ :Sony Compact Phone : ಸೆಪ್ಟೆಂಬರ್ 1ಕ್ಕೆ ಲಾಂಚ್ ಆಗಿಲಿರುವ ಹೊಸ ಸೋನಿ ಕಾಂಪೆಕ್ಟ್ ಸ್ಮಾರ್ಟ್‌ಫೋನ್
ಒರಿಗಮಿ ಕಾಗದ :
ಬಣ್ಣ ಬಣ್ಣದ ಒರಿಗಮಿ ಕಾಗದ ಬಳಸಿ ಹಂಸಗಳು, ಚಿಟ್ಟೆಗಳು ಮತ್ತು ಛತ್ರಿಗಳನ್ನು ಮಾಡಿ ಮಂಟಪದ ಸುತ್ತಲೂ ಅಲಂಕರಿಸಿ. ಈ ಚಿತ್ರಗಳನ್ನು ಹಾಗೆಯೇ ಅಂಟಿಸಿ ಅಥವಾ ಒಂದು ಗಾಢ ಬಣ್ಣದ ಬಟ್ಟೆಯ ಮೇಲೆ ಅಂಟಿಸಿ ಮಂಟಪದ ಅಕ್ಕ ಪಕ್ಕ ಅಲಂಕರಿಸಿ. ಹಾಗೆ ಬಣ್ಣಗಳ ಆಯ್ಕೆ ಮತ್ತು ಥೀಮ್‌ಗಳನ್ನು ಮಾಡಬಹುದಾಗಿದೆ. ಎಲೆ, ಹೂವು ಮತ್ತು ಒರಿಗಾಮಿ ಕಾಗದ ಆಕೃತಿಗಳಿಂದ ಅಲಂಕರಿಸಿದ ಮಂಟಪ ನೋಡಲು ಸುಂರವಾಗಿ ಕಾಣಿಸುತ್ತದೆ.
ಧೂಪ ಮತ್ತು ರೂಮ್ ಸ್ಪ್ರೇಗಳು :
ಸುಗಂಧ ದ್ರವ್ಯಗಳು ಸುಂದರ ಅನುಭೂತಿಯನ್ನು ನೀಡುತ್ತವೆ. ಮಂಟಪದ ಸುತ್ತ ಪರಿಮಳ ಬೀರುವ ಧೂಪವನ್ನು ಹಚ್ಚಿ. ರೂಮ್ ಸ್ಪ್ರೇಗಳ ಬಳಕೆಯನ್ನು ಮಾಡಬಹುದು. ಅರೋಮೆಟಿಕ್ ಮೇಣದಬತ್ತಿಗಳನ್ನು ಜೋಡಿಸಿ. ಮೇಜಿನ ಮೇಲೆ ಒಂದು ಪಾಟ್‌ಪೌರಿ ಬೌಲ್ ಅನ್ನು ಇರಿಸಿ. ಅದಕ್ಕೆ ನೀರು ಮತ್ತು ಪರಿಮಳದ ಸುಂಗಧ ದ್ರವ್ಯಗಳನ್ನು ಹಾಕಿ ಇಡಿ.
ಹಬ್ಬವೆಂದರೆ ಸಿಹಿ ತಿಂಡಿಗಳು ಮತ್ತು ಪ್ರಸಾದ ಇದ್ದೇ ಇರುತ್ತದೆ. ಅವುಗಳನ್ನು ಬಡಿಸಲು ಬಾಳೆ ಎಲೆಯನ್ನು ಬಳಸಿ. ಪರಿಸ್ನೇಹಿ ವಸ್ತುಗಳ ಬಳಕೆಯನ್ನೇ ಮಾಡಿ. ಈ ಹಬ್ಬವನ್ನು ಚಂದದಿಂದ ಆಚರಿಸಿ.
(Ganesh Chaturthi 2022 easy decoration ideas to light up your home)