ನಿಮ್ಮ ರಾಶಿಗೆ ಯಾವ ಮಂತ್ರ ? ಇಲ್ಲಿದೆ ಗಣೇಶ ಚತುರ್ಥಿ ಹಬ್ಬದಂದು ಗಣೇಶನ ಫಲ ಪಡೆಯೋ ಸುಲಭವಿಧಾನ 

ಗಣೇಶ ಚತುರ್ಥಿಯಂದು (Ganesha Chaturthi) ಪೂಜೆಯ ಜೊತೆಗೆ ನಿಮ್ಮ ರಾಶಿಯನುಸಾರ ಫಲಕೊಡಬಲ್ಲ ಮಂತ್ರಗಳನ್ನು ಜಪಿಸುವುದರಿಂದ ದೇವರನ್ನು ಸಂಪ್ರೀತಗೊಳಿಸುವ ಮೂಲಕ ಇಷ್ಟಾರ್ಥ ಗಳನ್ನು ಸಿದ್ಧಿಸಿ ಕೊಳ್ಳಬಹುದು ಎಂಬುದು ಜ್ಯೋತಿಷ್ಯರ ಸಲಹೆ. ಹಾಗಿದ್ದರೇ ಯಾವ ಯಾವ ರಾಶಿಯವರು (zodiac sign) ಗಣೇಶ ಹಬ್ಬದಂದು (Ganesha Festival) ಯಾವ ಮಂತ್ರಗಳನ್ನು (Ganesh Mantra), ಶ್ಲೋಕಗಳನ್ನು ಪಠಿಸಿದರೇ ಶುಭಫಲ ಅನ್ನೋದರ ವಿವರ ಇಲ್ಲಿದೆ.

ವಿಘ್ನ ವಿನಾಶಕನಾದ ಗಣೇಶನನ್ನು ಪೂಜಿಸುವ ಗಣೇಶ ಚತುರ್ಥಿಯಂದು (Ganesha Chaturthi) ಶಾಸ್ತ್ರಾನುಸಾರ ಪೂಜೆ ನೆರವೇರಿಸಲಾಗುತ್ತದೆ. ಆದರೆ ಈ ಪೂಜೆಯ ಜೊತೆಗೆ ನಿಮ್ಮ ರಾಶಿಯನುಸಾರ ಫಲಕೊಡಬಲ್ಲ ಮಂತ್ರಗಳನ್ನು ಜಪಿಸುವುದರಿಂದ ದೇವರನ್ನು ಸಂಪ್ರೀತಗೊಳಿಸುವ ಮೂಲಕ ಇಷ್ಟಾರ್ಥ ಗಳನ್ನು ಸಿದ್ಧಿಸಿ ಕೊಳ್ಳಬಹುದು ಎಂಬುದು ಜ್ಯೋತಿಷ್ಯರ ಸಲಹೆ. ಹಾಗಿದ್ದರೇ ಯಾವ ಯಾವ ರಾಶಿಯವರು (zodiac sign) ಗಣೇಶ ಹಬ್ಬದಂದು (Ganesha Festival) ಯಾವ ಮಂತ್ರಗಳನ್ನು (Ganesh Mantra), ಶ್ಲೋಕಗಳನ್ನು ಪಠಿಸಿದರೇ ಶುಭಫಲ ಅನ್ನೋದರ ವಿವರ ಇಲ್ಲಿದೆ.

Ganesha Chaturthi What is the mantra for your zodiac sign Here is an easy way to get the fruit of Ganesha
Image Credit To Original Source

ಮೇಷರಾಶಿ
ಮೇಷ ರಾಶಿಯವರು ತಮ್ಮ ಅದೃಷ್ಟ ಹಾಗೂ ಯಶಸ್ಸು, ಆರೋಗ್ಯ ಕ್ಕಾಗಿ ಗಣೇಶ ಚತುರ್ಥಿ ಹಬ್ಬದಂದು “ಓಂ ವಕ್ರತುಂಡಾಯ ನಮಃ” ಎಂಬ ಮಂತ್ರವನ್ನು ಪಠಿಸಬೇಕು.

ವೃಷಭರಾಶಿ
ವೃಷಭ ರಾಶಿಯವರು ಓಂ ಹೀ ಗ್ರೀನ್ ಹೀ” ಎಂಬ ಮಂತ್ರವನ್ನು ಪಠಿಸೋದರಿಂದ ತಾವು ಈಗಾಗಲೇ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

ಮಿಥುನರಾಶಿ
ಮಿಥುನ ರಾಶಿಯವರು ಈ ಹಬ್ಬದ ದಿನ “ಓಂ ಗಂ ಗಣಪತ್ಯೇ ನಮಃ” ಅಥವಾ “ಶ್ರೀ ಗಣೇಶಾಯ ನಮಃ” ಎಂಬ ಮಂತ್ರಗಳನ್ನು ಪಠಿಸಬೇಕು. ಇದರಿಂದ ನಿಮ್ಮ ಕಷ್ಟಗಳು ಸಹ ಪರಿಹಾರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಕರ್ಕಾಟಕರಾಶಿ
ಕರ್ಕಾಟಕ ರಾಶಿಯರಿಗೆ ಅಷ್ಟಮ ಶನಿ ಪೀಡೆಯಿದ್ದು, ಈಗಾಗಲೇ ಸ್ಥಾನಭ್ರಷ್ಟದಂತಹ ಸಮಸ್ಯೆಯಲ್ಲಿದ್ದಾರೆ.‌ಇವರಿಗೆ “ಓಂ ವಕ್ರತುಂಡಾಯ ಹೂಂ” ಅಥವಾ “ಓಂ ವರದಾಯ ನಮಃ” ಎಂಬ ಮಂತ್ರಗಳು ಎಲ್ಲ ಪೀಡೆ ಪರಿಹಾರಕ್ಕೆ ಕಾರಣವಾಗಲಿದೆ.

Ganesha Chaturthi What is the mantra for your zodiac sign Here is an easy way to get the fruit of Ganesha
Image Credit To Original Source

ಇದನ್ನೂ ಓದಿ : ಗಣೇಶ ಚತುರ್ಥಿ : ವಾಸ್ತು ಪ್ರಕಾರ ಗಣೇಶನ ವಿಗ್ರಹವನ್ನು ಯಾವ ಧಿಕ್ಕಿನಲ್ಲಿ ಕೂರಿಸಬೇಕು ?

ಸಿಂಹರಾಶಿ
ಈ ಹಬ್ಬದ ದಿನ ಸಿಂಹ ರಾಶಿಯವರು”ಓಂ ಸುಮಂಗಲಯೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ಜೀವನದಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಆಗುವುದಿಲ್ಲ. ಅಗಲ್ಲೇ ಸ್ತ್ರೀ ದೋಷಗಳು ಸಹ ಪರಿಹಾರವಾಗುತ್ತದೆ.

ಕನ್ಯಾರಾಶಿ
ಕೆಲಸಗಳಲ್ಲಿ ವಿನಾಕಾರಣವಾಗುವ ವಿಘ್ನಗಳನ್ನು ಪರಿಹರಿಸಿಕೊಳ್ಳಲು ಹಾಗೂ ಗಣೇಶನ ಪೂರ್ಣಾನುಗ್ರಹಕ್ಕಾಗಿ ಕನ್ಯಾ ರಾಶಿಯವರು ಓಂ ಚಿಂತಾಮನ್ಯೇ ನಮಃ” ಎಂಬ ಮಂತ್ರವನ್ನುಕನಿಷ್ಠ 108 ಭಾರಿ ಜಪಿಸಬೇಕು.

ತುಲಾರಾಶಿ
ತುಲಾ ರಾಶಿಯವರು ಪ್ರತಿದಿನ “ಓಂ ವಕ್ರತುಂಡಾಯ ನಮಃ” ಮಂತ್ರವನ್ನು ಪಠಿಸುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸೂಕ್ತ ಚಿಕಿತ್ಸೆಯ ದಾರಿ ಲಭಿಸುತ್ತದೆ.

ವೃಶ್ಚಿಕರಾಶಿ
“ಓಂ ನಮೋ ಭಗವತೇ ಗಜಾನನಾಯ” ಎಂಬ ಮಂತ್ರ ವೃಶ್ಚಿಕ ರಾಶಿಯವರ ಹಣಕಾಸಿನ ಸಮಸ್ಯೆ ಪರಿಹರಿಸಲಿದ್ದು, ಶಾಶ್ವತವಾದ ಪರಿಹಾರ ಲಭಿಸುತ್ತದೆ.

ಇದನ್ನೂ ಓದಿ : Dhan Lakshmi Yoga 2023: ಶುಕ್ರನ ಪ್ರಭಾವದಿಂದ ಈ 5 ರಾಶಿಗಳಿಗೆ ಧನ ಲಕ್ಷ್ಮಿ ಯೋಗ…!

ಧನಸ್ಸುರಾಶಿ
ಧನಸ್ಸು ರಾಶಿಯವರು “ಓಂ ಗಂ ಗಣಪತೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮ್ಮ ನಿಮ್ಮ ಮಕ್ಕಳ‌ಭವಿಷ್ಯ, ಶಾಶ್ವತ ನೆಲೆ, ಚಿರಾಸ್ಥಿ, ಸ್ಥಿರಾಸ್ತಿ ಗಳಿಕೆಗೆ ವಿನಾಯಕನ ಪೂರ್ಣಾನುಗ್ರಹ ಸಿದ್ಧಿಸಲಿದೆ.

ಮಕರರಾಶಿ
ಮಕರ ರಾಶಿಯವರು ಓಂ ಗಣಪತ್ಯೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಏನಾದರೂ ತೊಂದರೆಗಳಿದ್ದರೆ ಅದಕ್ಕೂ ಮುಕ್ತಿ ಸಿಗುತ್ತದೆ. ಆಸ್ತಿ ವಿಚಾರಗಳು ನ್ಯಾಯಾಲಯದಲ್ಲಿದ್ದರೇ ಜಯ ಲಭಿಸುತ್ತದೆ.

ಕುಂಭರಾಶಿ
ಕುಂಭ ರಾಶಿಯವರು ಪ್ರತಿನಿತ್ಯ “ಓಂ ಗಣ ಮುಕ್ತಯೇ ಫಟ್” ಎಂಬ ಮಂತ್ರವನ್ನು ತಪ್ಪದೇ ಪಠಿಸಬೇಕು. ‘ಇದು ನಿಮ್ಮ ಜೀವನದಲ್ಲಿರುವ ನೋವುಗಳನ್ನ ಕಡಿಮೆ ಮಾಡುತ್ತದೆ. ಹಾಗೆಯೇ, ಹಣಕಾಸಿನ ಲಾಭವಾಗುತ್ತದೆ. ಸಾಂಸಾರಿಕ ಭಿನ್ನಾಭಿಪ್ರಾಯಗಳ ದೂರವಾಗುತ್ತದೆ.

ಇದನ್ನೂ ಓದಿ :

ಮೀನರಾಶಿ
ಮೀನ ರಾಶಿಯವರು ಪ್ರತಿನಿತ್ಯ ಗಣೇಶ ಪೂಜೆಯ ಸಮಯದಲ್ಲಿ “ಓಂ ಗಣ ಗಣಪತಯೇ ನಮಃ” ಅಥವಾ “ಓಂ ಅಂತರಿಕ್ಷಾಯ ಸ್ವಾಹಾ” ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ಎಲ್ಲಾ ಕಷ್ಟಗಳು ದೂರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ನಿತ್ಯ ಪೂಜೆಯ ಮಂತ್ರಗಳ ಜೊತೆ ಈ ಶ್ಲೋಕಗಳನ್ನು ಪಠಿಸುವುದರಿಂದ ಪೂಜೆಯ ಫಲ ಇನ್ನಷ್ಟು ವೃದ್ಧಿಸಲಿದ್ದು ವಿನಾಯಕ ಪೂಜೆಯ ಪೂರ್ಣಫಲ ಲಭಿಸಲಿದೆ.

Ganesha Chaturthi What is the mantra for your zodiac sign? Here is an easy way to get the fruit of Ganesha

Comments are closed.