ಗಣೇಶ ಚತುರ್ಥಿ : ವಾಸ್ತು ಪ್ರಕಾರ ಗಣೇಶನ ವಿಗ್ರಹವನ್ನು ಯಾವ ಧಿಕ್ಕಿನಲ್ಲಿ ಕೂರಿಸಬೇಕು ?

ಗಣೇಶ ಚತುರ್ಥಿಯ (Ganesh Chaturthi) ದಿನದಂದು ಗಣೇಶನ ವಿಗ್ರಹವನ್ನು ಮನೆ ಮನೆಗಳಲ್ಲಿ ಕೂರಿಸಿ ಪೂಜೆ ಮಾಡಲಾಗುತ್ತದೆ. ಅದ್ರಲ್ಲೂ ಗಣೇಶ ಮೂರ್ತಿಯನ್ನು ವಾಸ್ತುಶಾಸ್ತ್ರದ (Ganesh idol Vaastu ) ಪ್ರಕಾರ ಯಾವ ಧಿಕ್ಕಿನಲ್ಲಿ ಕೂರಿಸಿಬೇಕು. ಸೋಂಡಿಲು ಯಾವ ಕಡೆಗಳಲ್ಲಿ ಇರಬೇಕು. ಮನೆಗಳಲ್ಲಿ ಯಾವ ಬಣ್ಣದ ಗಣೇಶ ವಿಗ್ರಹ ಪ್ರತಿಷ್ಠಾಪಿಸಬೇಕು.

ಗಣೇಶ ಚತುರ್ಥಿ (Ganesh Chaturthi) ಭಾರತದಲ್ಲಿ ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತದೆ. ಮನೆ ಮನೆಗಳಲ್ಲಿಯೂ ಗಣೇಶ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ ವಾಸ್ತುಪ್ರಕಾರ ಗಣೇಶಮೂರ್ತಿಯ (Ganesh idol Vaastu ) ಪ್ರತಿಷ್ಠಾಪನೆಯನ್ನು ಮಾಡಿದ್ರೆ ಅದೃಷ್ಟ ಒಲಿಯಲಿದೆ. ಗಣೇಶ ಮೂರ್ತಿಯ ಸೋಂಡಿಲು ಯಾವ ಧಿಕ್ಕಿನಲ್ಲಿರಬೇಕು. ಅದ್ರಲ್ಲೂ ಯಾವ ಧಿಕ್ಕಿನಲ್ಲಿ ಕೂರಿಸಿದ್ರೆ ಶುಭ, ಯಾವುದು ಅಶುಭ ಅನ್ನೋ ಮಾಹಿತಿ ಇಲ್ಲಿದೆ.

Ganesha Chaturthi According to Vaastu, in which position should the idol of Ganesha be placed
Image Credit To Original Source

ಗಣೇಶನ ಹಬ್ಬ ಬಂತೆಂದ್ರೆ ಸಾಕು ಎಲ್ಲೆಲ್ಲೂ ಸಂಭ್ರಮ ಸಡಗರ. ಮನೆ, ಸಾರ್ವಜನಿಕವಾಗಿಯೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಗಣೇಶನ ಮೂರ್ತಿಯನ್ನು ಕೂರಿಸಿ ಭಕ್ತಿಯಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿದೆ. ದೇಶದ ಪ್ರಸಿದ್ದ ಪುಣ್ಯಕ್ಷೇತ್ರಗಳಾದ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ, ಹಟ್ಟಿಯಂಗಡಿ, ಇಡಗುಂಜಿ ಗಣಪತಿ, ಸೌತಡ್ಕ ಗಣಪತಿ, ಶರವು ಮಹಾಗಣಪತಿ ದೇವಾಲಯಗಳಲ್ಲಿ ಗಣೇಶ ಚೌತಿಯನ್ನು ಆಚರಿಸಲಾಗುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ : ದಿನಭವಿಷ್ಯ ಸೆಪ್ಟೆಂಬರ್‌ 18 2023: ಗಜಕೇಸರಿ ಯೋಗದಿಂದ ಈ ರಾಶಿಯವರಿಗಿದೆ ವಿಶೇಷ ಲಾಭ

ಗಣೇಶಮೂರ್ತಿಯನ್ನು ಮನೆಯಲ್ಲಿ ತಂದು ಪ್ರತಿಷ್ಠಾಪನೆ ಮಾಡುವ ವೇಳೆಯಲ್ಲಿ ಹಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟಿರಬೇಖು. ಜೊತೆಗೆ ವಾಸ್ತುಪ್ರಕಾರವಾಗಿ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ರೆ ನಿಮ್ಮ ಇಷ್ಟಾರ್ಥಗಳು ನೆರವೇರಲಿದೆ. ಆದರೆ ಬಹುತೇಕರು ಮೂರ್ತಿ ಪ್ರತಿಷ್ಠಾಪನೆ ವೇಳೆ ಹಲವು ತಪ್ಪುಗಳನ್ನು ಮಾಡುತ್ತಾರೆ.

Ganesha Chaturthi According to Vaastu, in which position should the idol of Ganesha be placed
Image Credit To Original Source

ಗಣೇಶನ ವಿಗ್ರಹವನ್ನು ಖರೀದಿಸುವ ವೇಳೆಯಲ್ಲಿ ಮೂಷಿಕ ಸರಿಯಾಗಿದೆಯೇ ಅನ್ನೋದನ್ನು ಖಚಿತ ಪಡಿಸಿಕೊಳ್ಳಬೇಕು. ಗಣೇಶನ ವಾಹನ ಇಲಿ (ಮೂಷಿಕ) ಆಗಿರುವುದರಿಂದ ಇದು ಹೆಚ್ಚು ಮಹತ್ವದ್ದಾಗಿದೆ. ಅಲ್ಲದೇ ಗಣೇಶಮೂರ್ತಿಯಲ್ಲಿನ ಲಡ್ಡುಗಳು ಪರಿಪೂರ್ಣವಾಗಿರಬೇಕು. ಮೂರ್ತಿಯಲ್ಲಿ ಸಣ್ಣ ತುಂಡುಗಳು ಕೂಡ ಮುರಿದಿಲ್ಲ ಅನ್ನೋದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ : ನಿಫಾ ಸೋಂಕು ಹರಡುವ ಭೀತಿ : ಸೆ.24ರ ವರೆಗೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ವಾಸ್ತುಪ್ರಕಾರ, ಕುಟುಂಬದಲ್ಲಿ ಶಾಂತಿ ಬಯಸುವವರು, ಬಿಳಿಯ ಮೂರ್ತಿಯನ್ನು ಆಯ್ಕೆ ಮಾಡಬೇಕು. ಬಿಳಿ ಬಣ್ಣದ ಗಣಪ ಸಂಪತ್ತು, ಸಂತೋಷ, ಸಮೃದ್ದಿಯ ಸಂಕೇತ. ಮನೆಯಲ್ಲಿ ಸಿಂಧೂರವಿರುವ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ಒಳಿತು. ಗಣೇಶ ಮೂರ್ತಿಯ ಮುಖ ಕಾಣಿಸಬೇಕು. ಆದರೆ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ದಕ್ಷಿಣ ಭಾಗದಲ್ಲಿ ಇಡಬೇಡಿ.

Ganesha Chaturthi According to Vaastu, in which position should the idol of Ganesha be placed
Image Credit To Original Source

ಅಲ್ಲದೇ ಲಂಬೋದರನ ಮೂರ್ತಿಯ ಕಾಂಡವನ್ನು ಸರಿಯಾಗಿ ಗಮನಿಸಬೇಕು. ಗಣೇಶನ ಸೋಂಡಿಲು ಎಡಕ್ಕೆ ಅಭಿಮುಖವಾಗಿ ಇರಬೇಕು. ಈ ಢಿಕ್ಕಿನಲ್ಲಿ ಕಾಂಡ ಯಶಸ್ಸು, ಸಂಪತ್ತು, ಸಮೃದ್ದಿ ತರಲಿದೆ. ಸರಿಯಾದ ಧಿಕ್ಕಿನಲ್ಲಿದ್ರೆ ಗಣಪತಿ ಒಲಿಯುತ್ತಾನೆ. ಇನ್ನು ಮನೆಯ ಪಶ್ಚಿಮ, ಉತ್ತರ ಮತ್ತು ಈಶಾನ್ಯ ಧಿಕ್ಕಿನಲ್ಲಿ ಗಣೇಶ ವಿಗ್ರಹವನ್ನು ಇಡುವುದರಿಂದ ಉತ್ತಮ ಫಲಿತಾಂಶ ತರುತ್ತದೆ.

ವಿನಾಯಕನ ತಂದೆ ಪರಮೇಶ್ವರ ಈ ಧಿಕ್ಕಿನಲ್ಲಿ ನೆಲೆಸಿದ್ದಾರೆ ಎಂಬುವುದು ಹಲವರ ನಂಬಿಕೆ. ಮನೆಯಲ್ಲಿ ಕೂರಿಸುವ ಗಣೇಶ ಮೂರ್ತಿಯನ್ನು ಉತ್ತರ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಗಣೇಶನ ಮುಖವು ಮನೆಯ ಮುಖ್ಯ ದ್ವಾರದ ಕಡೆಗೆ ಇರುವಂತೆ ನೋಡಿಕೊಳ್ಳಿ.

Ganesha Chaturthi According to Vaastu, in which position should the idol of Ganesha be placed ?

Comments are closed.